ತುಮಕೂರು : ಇತ್ತೀಚೆಗೆ ಪ್ರಖ್ಯಾತ ಪಕ್ಷದ ಮುಖಂಡ, ಮಾಜಿ ಪಾಲಿಕೆ ಸದಸ್ಯ, ಒಂದು ಸಮುದಾಯದ ಮುಖಂಡನಾಗಿದ್ದ ಶ್ರೀಯುತ ರಾಜೇಂದ್ರ ಕುಮಾರ್ ಎಂಬುವವರು ಹುಡುಗಿಯನ್ನು ನಂಬಿಸಿ, ತನ್ನ ಇಚ್ಛೆಗಳಿಗೆ ಬಳಸಿಕೊಂಡು ಆಕೆಯ ಸಾವಿಗೆ ಕಾರಣನಾಗಿದ್ದಾನೆ ಎಂಬ ಸುದ್ಧಿಯು ಹರಿದಾಡುತ್ತಿದ್ದ ಹಿನ್ನಲೆಯಲ್ಲಿ ಹುಡುಗಿಯ ತಾಯಿ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ತುಮಕೂರು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ಮೃತ ದೇಹವನ್ನು ಹೊರ ತೆಗೆಯಿಸಿ ವಿವಿಧ ಪರೀಕ್ಷೆಗಳನ್ನು ಮಾಡಲು ಇತ್ತೀಚೆಗೆ ತಾನೇ ಲ್ಯಾಬ್ ಗೆ ಕಳುಹಿಸಿದ್ದಾರೆ ಎನ್ನಲಾಗಿದೆ, ಇದರ ಹಿನ್ನಲೆಯಲ್ಲಿಯೇ ಆರೋಪವನ್ನು ಹೊತ್ತಿರುವ ಮಾಜಿ ಪಾಲಿಕೆ ಸದಸ್ಯ ರಾಜೇಂದ್ರರವರನ್ನು ತುಮಕೂರು ನಗರ ಪೊಲೀಸ್ ಠಾಣಾ ಸಿಬ್ಬಂದಿಗಳು ಬಂಧಿಸಿ, ಆರೋಪಿಯಿಂದ ಹೇಳಿಕೆ ಮತ್ತು ಮುಂದಿನ ಕ್ರಮವನ್ನು ಜರುಗಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಆರೋಪ ಹೊತ್ತಿರುವ ರಾಜೇಂದ್ರರವರ ಹೇಳಿಕೆ ಮತ್ತು ಮುಂದಿನ ಕಾನೂನು ಕ್ರಮವನ್ನು ಎದುರು ನೋಡಬೇಕಾಗಿದೆ, ಯಾವುದೇ ಏನೇ ಇರಲಿ ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿದರೆ, ತಾನು ನೋಡಿಲ್ಲವೆಂದು ಬೆಕ್ಕು ಬಾವಿಸಿದರೆ, ಜಗವೆಲ್ಲ ಬೆಕ್ಕು ಹಾಲು ಕುಡಿಯುವುದನ್ನು ನೋಡಿರುತ್ತಾರೆ ಅಲ್ಲವೇ, ಅದೇ ರೀತಿ ಇಲ್ಲಿಯೂ ಸಹ ಆಗಿದೆ ಎನ್ನಬಹುದು.
ಆರೋಪ ಹೊತ್ತಿರುವ ರಾಜೇಂದ್ರನಿಂದ ಪೊಲೀಸರು ಇನ್ನೂ ಬೇರೆ ಬೇರೆ ವಿಷಯಗಳನ್ನು ಬಾಯಿ ಬಿಡಿಸಿದರು ಈ ವಿಚಾರದಲ್ಲಿ ಅಚ್ಚರಿಯಿಲ್ಲ ಎನ್ನುತ್ತಿದ್ದಾರೆ ಸಾರ್ವಜನಿಕರು. ಏಕೆಂದರೆ ಈತನಿಂದ ಹಲವಾರು ಯುವತಿಯರು, ಹೆಣ್ಣು ಮಕ್ಕಳು ವಂಚನೆಗೊಳಗಾಗಿದ್ದಾರೆಂಬುದು ಇತ್ತೀಚೆಗೆ ಎಲ್ಲರ ಬಾಯಲ್ಲಿ ಕೇಳಿ ಬರುತ್ತಿರುವ ಮಾತುಗಳು.