ತುಮಕೂರು : ಹಿಜಾಬ್ ವಿವಾದ ಕುರಿತಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪಿಗೆ ಅಸಮಧಾನವನ್ನು ವ್ಯಕ್ತಪಡಿಸಿ ಹಲವಾರು ಮುಸ್ಲಿಂ ಸಂಘಟನೆಗಳು, ಮುಸ್ಲಿಂ ಬಾಂಧವರು, ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿರುವ ಬೆನ್ನಲ್ಲೇ ದಿನಾಂಕ 17-03-2022 ರಂದು ಹಲವು ಮುಸ್ಲಿಂ ಸಂಘಟನೆಗಳು ಸ್ವಯಂ ಪ್ರೇರಿತ ಬಂದ್ ಆಚರಿಸುವಂತೆ ತಮ್ಮ ಬಾಂಧವರಿಗೆ ಸೂಚಿಸಿದ್ದರು.
ಅದರ ಪರವಾಗಿ ಇಂದು ತುಮಕೂರಿನ ಹಲವಾರು ಮುಸ್ಲಿಂ ವ್ಯಾಪಾರ ಕೇಂದ್ರಗಳು, ಮುಸ್ಲಿಂ ಸಮುದಾಯದವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಕರ್ನಾಟಕ ಬಂದ್ ಗೆ ಸಹಕಾರ ನೀಡಿದರು, ಅದರಂತೆ ತುಮಕೂರಿನ ರಿಂಗ್ ರಸ್ತೆಯಲ್ಲಿರುವ ಪ್ರಸಿದ್ಧ ವ್ಯಾಪಾರ ಕೇಂದ್ರ ಹಾಗೂ ದಿನನಿತ್ಯ ಲಕ್ಷಾಂತರ ರೂಪಾಯಿಗಳಲ್ಲಿ ವ್ಯವಹರಿಸುವ ಮುಖ್ಯ ಕೇಂದ್ರ ಬಿಂದು ದೊಡ್ಡ ಗುಜರಿಯೂ ಸಹ (ತುಮಕೂರು ಬಜಾರ್) ಬಂದ್ ಮಾಡಿ ಬೆಂಬಲ ಸೂಚಿಸಿತ್ತು.