ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ನಗರದ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಅವರು ಶ್ರೀ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಸುದೀರ್ಘವಾದ ಚರ್ಚೆ, ವಾದ ಪ್ರತಿವಾದವನ್ನು ಆಲಿಸಿ ತೀರ್ಪು ಪ್ರಕಟಿಸಿದೆ.ಹದಿನೈದು ದಿನಗಳ ಕಾಲ ಕಾಲಾವಕಾಶ ತೆಗೆದುಕೊಂಡು ಅಂತಿಮ ತೀರ್ಪನ್ನು ಇಂದು ಪ್ರಕಟಗೊಳಿಸಿ
ಸರ್ಕಾರ ಹೊರಡಿಸಿರುವ ವಸ್ತ್ರ ಸಂಹಿತೆ ಕಾನೂನು ಪರಿಪಾಲನೆ ಮಾಡಬೇಕು ಎಂದು ಆದೇಶಿಸಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕು ಜೊತೆಗೆ ಶಾಲೆ ಎಂದ ಮೇಲೆ ಎಲ್ಲರೂ ಒಂದು ಎನ್ನುವ ಮನೋಭಾವ ಇಟ್ಟುಕೊಂಡು ಪ್ರೀತಿ ವಿಶ್ವಾಸದಿಂದರಬೇಕು. ಯಾವುದೇ ಕಾರ,ಕ್ಕೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿನ್ನೆಡೆಯಾಗಬಾರದು. ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಎಲ್ಲರೂ ಸಹಕರಿಸಬೇಕು. ಶಿಸ್ತು ನಿಯಮಪಾಲನೆ ಮಾಡುವುದರ ಮೂಲಕ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿದು ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಸಲು ಎಲ್ಲರೂ ಬದ್ಧರಾಗಬೇಕು ಯಾವುದೇ ಕಾರಣಕ್ಕೂ ಬೇರೆ ರೀತಿಯ ಘಟನೆಗಳು ನಡೆಯುವುದಕ್ಕೆ ಅವಕಾಶ ಕಲ್ಪಿಸಬಾರದೆಂದು ಅಭಿಪ್ರಾಯಪಟ್ಟರು.