ತಳಿಯಿಂದ(Genetically Modified) ಮಾರ್ಪಡಿಸಿದ ಆಹಾರಗಳು ಆರೋಗ್ಯಕ್ಕೆ ಹಾನಿಕರವಾಗಿರುವುದರಿಂದ ಸಾವಯವ ಆಹಾರಗಳಿಗೆ ಆದ್ಯತೆ ನೀಡಿ

ತಳೀಯವಾಗಿ ಮಾರ್ಪಡಿಸಿದ ಆಹಾರಗಳು (Genetically Modified) ಜೀವಜಂತುಗಳಿಂದ ಪಡೆದ ಆಹಾರಗಳಾಗಿವೆ, ಅವು ನೈಸರ್ಗಿಕವಾಗಿ ರೂಪಾಂತರಗೊಳಿಸಲಾಗಿರುವುದಿಲ್ಲ. ತಳೀಯ ರೂಪಾಂತರಗಳಿಂದ ಕ್ಯಾನ್ಸರ್, ಅಪೌಷ್ಟಿಕತೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇತ್ಯಾದಿ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಈ ರೀತಿಯ ಆಹಾರದಲ್ಲಿ ಅತಿಯಾದ ಗೊಬ್ಬರ, ನೀರಾವರಿ ಮತ್ತು ವಿಷಕಾರಿ ಕೀಟನಾಶಕಗಳ ಬಳಕೆಯು ಆರೋಗ್ಯದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಇದು ಪರಿಸರದ ಸಮತೋಲನದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ತಳೀಯವಾಗಿ ಮಾರ್ಪಡಿಸಿದ ಆಹಾರಗಳಿಗಿಂತ ಸಾವಯವ ಆಹಾರಗಳಿಗೆ (Organic Food) ಆದ್ಯತೆ ನೀಡಬೇಕು, ಎಂದು ಆರೋಗ್ಯ ಸಹಾಯ ಸಮಿತಿಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮುಖ್ಯ ಕಾರ್ಯಕಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ತಳೀಯವಾಗಿ ಮಾರ್ಪಡಿಸಿದ ಆಹಾರಗಳು (GM Food) ಸೇರಿದಂತೆ ಇತರ ಆಹಾರಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಆಮದು ಕುರಿತು ಸಮಾಜದಿಂದ ಪ್ರತಿಕ್ರಿಯೆ ಮತ್ತು ಅಭಿಪ್ರಾಯಯನ್ನು ಕೇಳಿತ್ತು. ಅದಕ್ಕನು
ಸಾರ ಆರೋಗ್ಯ ಸಹಾಯ ಸಮಿತಿಯು ತನ್ನ ಮನವಿಯನ್ನು ಸಲ್ಲಿಸಿತು.


    ಈ ನಿಟ್ಟಿನಲ್ಲಿ ಆರೋಗ್ಯ ಸಹಾಯ ಸಮಿತಿಯು ಈ ಕೆಳಗಿನ ಬೇಡಿಕೆಗಳನ್ನು ಮಾಡಿದೆ –
೧. ತಳೀಯವಾಗಿ ಮಾರ್ಪಡಿಸಿದ ಆಹಾರಗಳಿಂದ ಕ್ಯಾನ್ಸರ್, ಅಪೌಷ್ಟಿಕತೆ, ಪ್ರತಿಕಾಯಗಳ ಕೊರತೆ, ಇಮ್ಯುನೊ ಸಪ್ರೆಶನ ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅದೇ ರೀತಿ ವಿಷಕಾರಿ ವಸ್ತುಗಳ ಉತ್ಪಾದನೆಯನ್ನು ಹಾನಿಕಾರಿ ಮಟ್ಟಕ್ಕೆ ಹೆಚ್ಚಿಸಬಹುದು.


೨. ತಳೀಯವಾಗಿ ಮಾರ್ಪಡಿಸಿದ ಬೆಳೆಗಳಲ್ಲಿ ಪೌಷ್ಟಿಕಾಂಶದ ಮೌಲ್ಯಗಳಿಗೆ ಧಕ್ಕೆಯಾಗುತ್ತವೆ. ಆದ್ದರಿಂದ, ಸಾವಯವ ಬೆಳೆಗಳತ್ತ ಗಮನ ಹರಿಸುವುದು ಮುಖ್ಯವಾಗಿದೆ.


೩. ತಳೀಯವಾಗಿ ಮಾರ್ಪಡಿಸಿದ ಬೆಳೆಗಳ 3 ಕೃಷಿಯ ನಂತರ ಮಣ್ಣಿನ ಫಲವತ್ತತೆ ಮತ್ತು ಆಹಾರದ ಮಟ್ಟವು ಹದಗೆಡುತ್ತದೆ. ಆದ್ದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ.

೪. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ತಳೀಯವಾಗಿ ಮಾರ್ಪಡಿಸಿದ ಬೀಜಗಳ ಬದಲಿಗೆ ನೈಸರ್ಗಿಕ / ಸಾವಯವ ಬೀಜಗಳ ಬಗ್ಗೆ ವಿಚಾರ ಮಾಡಬೇಕು. ಸಾವಯವ ಬೀಜಗಳು ಆರೋಗ್ಯಕ್ಕಾಗಿ, ಪರಿಸರ ಮತ್ತು ಪರಿಸರ ಸಮತೋಲನಕ್ಕೆ ಹೆಚ್ಚು ಉತ್ತಮವಾಗಿದೆ.
 
೫. ತಳೀಯವಾಗಿ ಮಾರ್ಪಡಿಸಿದ ಆಹಾರಗಳ ಉತ್ಪಾದನೆಯಿಂದ ಅಥವಾ ಬೆಳವಣಿಗೆಯಿಂದ ಅಭಿವೃದ್ಧಿಶೀಲ ರಾಷ್ಟ್ರಗಳು, ಔದ್ಯೋಗಿಕೀಕರಣಗೊಂಡ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬಿತವಾಗುವ ಅಪಾಯವನ್ನು ಹೆಚ್ಚಿಸಬಹುದು; ಏಕೆಂದರೆ ಮುಂಬರುವ ಕಾಲದಲ್ಲಿ ಆಹಾರ ಉತ್ಪಾದನೆಯನ್ನು ಅವರೇ ನಿಯಂತ್ರಿಸಬಹುದು.

Leave a Reply

Your email address will not be published. Required fields are marked *

error: Content is protected !!