ಮಲ್ಲಿಕಾರ್ಜುನಗೌಡ ಸೇವೆಯಿಂದ ವಜಾಗೊಳಿಸಲು ಬಿ.ಎಸ್.ಪಿ. ಯಿಂದ ಆಗ್ರಹ

ತುಮಕೂರು :  ಈ ರಾಜ್ಯದಲ್ಲಿ ಸುಮಾರು 30-35 ವರ್ಷಗಳಿಂದ ಜಮೀನನ್ನು ಉಳಿಮೆ ಮಾಡಿಕೊಂಡು ಬರುತ್ತಿದ್ದು, ಬಗರ್‌ಹುಕುಂ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಈ ಜಮೀನಿನಲ್ಲಿ ಬಹುಪಾಲು ಗೋಮಾಳ, ಹುಲ್ಲುಬಣಿ, ಬೆಟ್ಟಗಳಿಗೆ ಮೀಸಲಾಗಿದೆ. ಈ ಜಮೀನು ಸಾಗುವಳಿ ಮಾಡುವ ರೈತರು ನಮೂನೆ-50, 53 ಮತ್ತು 57 ರಲ್ಲಿ ಅರ್ಜಿಗಳನ್ನು ಹಾಕಿಕೊಂಡು ಸಕ್ರಮಕ್ಕಾಗಿ ಹಲವಾರು ವರ್ಷಗಳಿಂದ ಕಾಯುತ್ತಿದ್ದಾರೆ. ಈ ರೈತರಿಗೆ ಸರ್ಕಾರದಿಂದ ಸಾಗುವಳಿ ಚೀಟಿಗಳನ್ನು ಆ ಜಮೀನಿಗೆ ದಾಖಲಾತಿಗಳನ್ನು ನೀಡದಿರುವುದು ಹಲವು ಸರ್ಕಾರಗಳು ಕಣ್ಣೊರೆಸುವ ತಂತ್ರವನ್ನು ಕಾಂಗ್ರೆಸ್, ಬಿ.ಜೆ.ಪಿ., ಜೆ.ಡಿ.ಎಸ್. ಪಕ್ಷಗಳು ಮಾಡಿಕೊಂಡು ಬಂದಿವೆ. ಇದು ಅತ್ಯಂತ ಖಂಡನೀಯ, ಸಂವಿಧಾನದ 340ನೇ ವಿಧಿಯ ಪ್ರಕಾರ ಓ.ಬಿ.ಸಿ. ಸಮುದಾಯಗಳಿಗೆ 27% ಮೀಸಲಾತಿ ನೀಡಿದ್ದು ಆ ಮೀಸಲಾತಿ ಸರಿಯಾಗಿ ಜಾರಿಯಾಗಿಲ್ಲ. ಮತ್ತು ಇಡೀ ಸರ್ಕಾರಿ ಸಂಸ್ಥೆಗಳೆಲ್ಲವನ್ನೂ ಖಾಸಗೀಕರಣ ಮಾಡಿ ಮೀಸಲಾತಿಯನ್ನು ತೆಗೆಯುವ ಹುನ್ನಾರ ಮಾಡಿಕೊಂಡು ಬಂದಿವೆ ಎಂದರು.

ಉತ್ತರ ಪ್ರದೇಶದಲ್ಲಿ  ಮಾಯಾವತಿಯವರು ಮುಖ್ಯಮಂತ್ರಿಗಳಾದಾಗ ಖಾಸಗಿ ಕ್ಷೇತ್ರದಲ್ಲಿ ೩೦% ಮೀಸಲಾತಿಯನ್ನು ನೀಡಿದರು. ಹಾಗೂ 1 ಕೋಟಿ 25 ಲಕ್ಷ ಎಕರೆ ಜಮೀನು ಅಲ್ಲಿನ ಎಲ್ಲಾ ಸಮುದಾಯದ ಬಡ ರೈತರಿಗೆ ಹಂಚಿದ್ದರು ಎಂದರು. ಬಿ.ಎಸ್.ಪಿ. ಜಿಲ್ಲಾಧ್ಯಕ್ಷರಾದ ಜೆ.ಎನ್. ರಾಜಸಿಂಹರವರು ಮಾತನಾಡಿ ಈ ರಾಜ್ಯದಲ್ಲಿ ಒಬ್ಬ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಎಂಬ ವ್ಯಕ್ತಿ ಜನವರಿ 26 ರಂದು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದರೆ ಮಾತ್ರ ನಾನು ಧ್ವಜಾರೋಹಣ ಮಾಡಲು ಬರುತ್ತೇನೆ. ಇಲ್ಲ ಅಂದರೆ ನಾನು ಬರುವುದಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ಆ ವ್ಯಕ್ತಿಯನ್ನು ಕೂಡಲೇ ಸೇವೆಯಿಂದ ವಜಾಮಾಡಬೇಕು. ಹಾಗೂ ಆ ವ್ಯಕ್ತಿ ಕೆಲಸಕ್ಕೆ ಸೇರಿದಾಗಿನಿಂದಲೂ ನೀಡಿರುವ ತೀರ್ಪುಗಳನ್ನು ಮರುಪರಿಶೀಲನೆ ಮಾಡಬೇಕು ಎಂದರು.

ಕರ್ನಾಟಕ ರಾಜ್ಯದಲ್ಲಿ ಬಹಳಷ್ಟು ಹಳ್ಳಿಗಳಲ್ಲಿ ಇವ್ತತಿಗೂ ದಲಿತರು ಮರಣ ಹೊಂದಿದರೆ ಅವರನ್ನು ಗೌರವಪೂರ್ವಕವಾಗಿ ಶವಸಂಸ್ಕಾರ ಮಾಡಲು ಸ್ಮಶಾನಗಳಿಲ್ಲ. ಇದು ಅತ್ಯಂತ ಶೋಚನೀಯ ಎಂದರು. ಹಾಗೂ ಎಸ್.ಸಿ./ಎಸ್.ಟಿ ಗೆ ಮೀಸಲಿಟ್ಟ ಹಣವನ್ನು ಬೇರೆ ಯಾವುದೇ ಕಾರಣಕ್ಕೂ ಬೇರೆಯ ಕೆಲಸಗಳಿಗೆ ಅಥವಾ ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳದೇ ಅದು ಎಸ್.ಸಿ./ಎಸ್.ಟಿ, ಸಮುದಾಯಗಳಿಗೆ ಮಾತ್ರ ಬಳಕೆಯಾಗಬೇಕು ಎಂದರು. ರಂಗಧಾಮಯ್ಯ ಜೆ.ಸಿ. ರವರು ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಾತನಾಡಿ ಈ ರಾಜ್ಯದಲ್ಲಿ ಸುಮಾರು ೧೦ ಲಕ್ಷ ಎಕರೆ ಗೋಮಾಳ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಬರುತ್ತಿದ್ದು ಇದಕ್ಕೆ ಯಾವುದೇ ದಾಖಲಾತಿಗಳು ಇರುವುದಿಲ್ಲ. ಈ ಜಮೀನಿನ ಮೇಲೆ ಕಣ್ಣಿಟ್ಟಿರುವ ಸರ್ಕಾರವು ಈ ಜಾಗವನ್ನು ಮಾರಲು ಸಂಘ-ಸಂಸ್ಥೆಗಳಿಗೆ, ಟ್ರಸ್ಟ್‌ಗಳಿಗೆ, ದೇವಸ್ಥಾನಗಳಿಗೆ ಮಾರಲು ಮಾಡಿರುವ ಸಂಪುಟ ಉಪಸಮಿತಿಯನ್ನು ಕೂಡಲೇ ರದ್ದು ಮಾಡಬೇಕು ಆ ಜಮೀನು ಬಹಳಷ್ಟು ವರ್ಷಗಳಿಂದ ಅನುಭವದಲ್ಲಿರುವ ಎಲ್ಲಾ ಸಮುದಾಯದ ರೈತರಿಗೆ ಸೇರಬೇಕು ಎಂದರು. ಬಹಳಷ್ಟು ದಿನಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಉಳಿಸಿಕೊಂಡು ಬಂದಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದರು. ರುದ್ರಪ್ಪನವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ತಂದು ಓಟನ್ನು ಮಾರಾಟ ಮಾಡಿಕೊಳ್ಳಬೇಡಿ, ಆನೆಗೆ ಮತ ನೀಡಿ, ನೀವು ಅಭಿವೃದ್ಧಿ ಆಗಿ ಎಂದರು.

 

ಈ ಪ್ರತಿಭಟನೆಯಲ್ಲಿ ಬಿ.ಎಸ್.ಪಿ. ಯ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಕಾಶ್, ಮಂಜುನಾಥ್ ಜಿ.ಎಸ್., ಶಿವಕುಮಾರ್ ವಕೀಲರು, ಹರೀಶ್ ಪಾವಗಡ, ನಾಗೇಂದ್ರ ಸಿ.ಎನ್.ಹಳ್ಳಿ ಉಸ್ತುವಾರಿ, ಎಲ್ಲಾ ತಾಲ್ಲೂಕು ಅಧ್ಯಕ್ಷರಾದ ವಿರೇಶ್, ಗೋಪಾಲ್ ಎ.ಎಸ್., ಹನುಮಂತರಾಯ, ರಂಗಯ್ಯ, ಉಮೇಶ್, ನಗರ ಸಮಿತಿ ಅಧ್ಯಕ್ಷರಾದ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಸಣ್ಣಭೂತಣ್ಣ, ವೆಂಕಟರಮಣ, ಶಿವಕುಮಾರ್ ತೆರೆಯೂರು, ರಾಮಕೃಷ್ಣ ಕುಣಿಗಲ್, ಕಾರ್ಯದರ್ಶಿಯಾದ ತಿಪ್ಪೇಸ್ವಾಮಿ, ದೇವಲಕೆರೆ ಮೂರ್ತಿ, ವಕೀಲರಾದ ದಾಸಪ್ಪ, ಮಾರಣಹಳ್ಳಿ ಶಿವಯ್ಯ, ಸಿದ್ಧಲಿಂಗಯ್ಯ, ಶಿವಕುಮಾರ್, ನಾಗರಾಜು ಜೆ.ಸಿ., ಪುಷ್ಪಲತಾ, ಅಂಜಯ್ಯ, ಕೆಂಚಪ್ಪ, ಶಿವಾರೆಡ್ಡಿ, ಗಂಗಾಧರ್, ರಾಮಾಂಜನಮ್ಮ, ಆಕಾಶವಾಣಿ ಅಂಜಿನಪ್ಪ, ಶಂಕರ್ ಕಡಗತ್ತೂರು, ನರಸಪ್ಪ ಮಡಕಶಿರಾ, ಹನುಮಂತು ಮಡಕಶಿರಾ, ಇನ್ನೂ ಹಲವು ಬಿ.ಎಸ್.ಪಿ. ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!