ಅಂದರ ಬೆಳಕಿಗೆ ಬೆಳಕಾದ ಶ್ರೀ ಸಿದ್ಧಾರ್ಥ ಕಣ್ಣಿನ ಆಸ್ಪತ್ರೆ

ತುಮಕೂರು : ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆ ವಿಭಾಗ ವತಿಯಿಂದ ಕೊರಟಗೆರೆ ಹಾಗೂ ಸುತ್ತಮುತ್ತಲಿನ ತಾಲೂಕಿನ ೧೭೦ ಮಂದಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ.

ಕೋವಿಡ್ ಸಮಯದಲ್ಲಿ ಹೆಚ್ಚಿನ ಮಂದಿಗೆ ದೃಷ್ಟಿ ಸಮಸ್ಯೆಯಾಗಿದ್ದು, ಇದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯದ ಹಿನ್ನೆಲೆಯಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಆದೇಶದ ಮೇರೆಗೆ ಕೊರಟಗೆರೆ ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಸುಮಾರು ೩೦೦-೪೦೦ ಮಂದಿಗೆ ಕಣ್ಣಿನ ತಪಾಸಣೆ ಮಾಡಿ ಅವುರಲ್ಲಿ ಕಣ್ಣಿನ ದೋಷದ ಸಮಸ್ಯೆಯಿರುವವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಶ್ರೀ ಸಿದ್ಧಾರ್ಥ ಆಸ್ಪತ್ರೆಯ ಕಣ್ಣಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ ತಿಳಿಸಿದರು.


ಕಣ್ಣು ಪ್ರತಿಯೊಬ್ಬರ ಜೀವನಕ್ಕೆ ಅಮೂಲ್ಯವಾದ ಜ್ಞಾನೇದ್ರಿಂಯಗಳಲೊಂದಗಿದ್ದು, ಅ ಸಮಸ್ಯೆ ಒಂದಿಲೊಂದು ಹಂತದಲ್ಲಿ ಎದುರಾಗುತ್ತದೆ, ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದಲ್ಲಿ ಕಣ್ಣಿನ ದೃಷ್ಟಿ ದೋ? ಸಮಸ್ಯೆ ಪರಿಹರಿಸಬಹುದು ಎಂದರು.


ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಮಾತನಾಡಿ, ಜಿಲ್ಲೆಯಾದ್ಯಂತ ಇಂದು ಕಣ್ಣಿನ ಸಮಸ್ಯೆ ತೀವ್ರವಾಗಿದ್ದು, ಅದು ಮುಂದಿನ ದೇಶದ ಅಭಿವೃದ್ಧಿಗೆ ತೊಡಕಾಗಬಾರದೆಂಬ ಮಹಾದಾಸೆಯಿಂದ ಶ್ರೀ ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಆರಂಭಿಸಿದ್ದು, ಪ್ರತಿಯೊಬ್ಬರು ಇದರ ಸೌಲಭ್ಯ ಪಡೆದುಕೊಂಡು ಸದೃಡ ಆರೋಗ್ಯವಂತರಾಗಬೇಕೆಂದು ಎಂದರು.


ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮಾತನಾಡಿದ ಪಾಲಹಳ್ಳಿಯ ತಿಮ್ಮಯ್ಯ, ಕಳೆದ ಎರಡು ವ?ದಿಂದ ದೃಷ್ಟಿ ಸಮಸ್ಯೆಯಿಂದ ಎದುರಾಗಿತ್ತು, ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕಣ್ಣಿನ ಶಸ್ತ್ರಚಿಕಿತ್ಸಾ ತಂಡದಿಂದ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಹಾಗಾಗಿ ಈ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದಗಳು ಎಂದರು.

Leave a Reply

Your email address will not be published. Required fields are marked *

error: Content is protected !!