ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ)ವತಿಯಿಂದ ತುಮಕೂರು ತಾಲ್ಲೋಕಿನ ಹೆಗ್ಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಡಿಜಿಟಲ್ ಸೇವಾಕೇಂದ್ರವನ್ನು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಿರ್ವಹಣೆ ಮಾಡಬೇಕು ಹಾಗೂ ಸರ್ಕಾರ ಮಾಡಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಇಂದು ಧರ್ಮಸ್ಥಳ ಯೋಜನೆಯು ಜನರಿಗೆ ಅಚ್ಚುಕಟ್ಟಾಗಿ ಸೌಲಭ್ಯಗಳನ್ನು ದೊರಕಿಸುತ್ತಿದೆ, ಸರ್ಕಾರದ ಎಲ್ಲಾ ಯೋಜನೆಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ಬರುತ್ತಿರುವುದು ಶ್ಲಾಘನೀಯ ಹಾಗೂ ಇದರ ಸದ್ಭಳಕೆಯನ್ನು ಸದಸ್ಯರು ಮಾಡಿಕೊಳ್ಳಬೇಕೆಂದು ಸದಸ್ಯರಿಗೆ ತಿಳಿಸಿದರು.
ಧರ್ಮಸ್ಥಳ ಸಂಘದ ತಾಲ್ಲೋಕು ಯೋಜನಾಧಿಕಾರಿ ಶ್ರೀಮತಿ ಸುನಿತಾಪ್ರಭುರವರು ಮಾತನಾಡಿ ತಾಲ್ಲೋಕಿನಲ್ಲಿ ಈವರೆವಿಗೂ ೩೨ ಸಿ.ಎಸ್.ಸಿ.ಕೇಂದ್ರಗಳನ್ನು ತೆರೆಯಲಾಗಿದೆ ಸದಸ್ಯರೆಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಹೆಚ್.ಜಿ.ಸುಷ್ಮಾಶ್ರೀ,ಉಪಾಧ್ಯಕ್ಷರಾದ ಸಂಪತ್ ಕುಮಾರ್,ಗ್ರಾಮಪಂಚಾಯತ್ ಸದಸ್ಯರು,ವಲಯದ ಮೇಲ್ವೀಚಾರಕರಾದ ಧನಲಕ್ಷ್ಮಿ,ಒಕ್ಕೂಟದ ಪದಾಧಿಕಾರಿಗಳು,ಸೇವಾಪ್ರತಿನಿಧಿಗಳು,ಗ್ರಾಮ ಮಟ್ಟದ ಕಾರ್ಯನಿರ್ವಾಹಕರಾದ ಮನೋಜ್ ರವರು ಉಪಸ್ಥಿತರಿದ್ದರು.