ತುಮಕೂರು: ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ಪ್ರಾಯೋಗಿಕ ಸಿದ್ಧಾರ್ಥ ಸಂಪದ ಪತ್ರಿಕೆಯನ್ನು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ್ ಬಿಡುಗಡೆ ಮಾಡಿದರು.
ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಾಯೋಗಿಕ ಪತ್ರಿಕೆಗಳು ವಿದ್ಯಾರ್ಥಿಗಳಲ್ಲಿ ಭಾ? ಸ್ಪ?ತೆಯ ಅರಿವು ಮೂಡಿಸುವುದರ ಜೊತೆಗೆ ಕೌಶಲ್ಯ ಹೆಚ್ಚಿಸುತ್ತವೆ. ಪತ್ರಿಕೆಗಳ ವಿನ್ಯಾಸ ನೋಡಿದಾಕ್ಷಣ ಓದುಗನ ಮನಸ್ಸಲ್ಲಿ ಪತ್ರಿಕೆ ಓದುವ ಕುತೂಹಲ ಹೆಚ್ಚುವಂತೆ ಪತ್ರಿಕೆಗಳನ್ನು ವಿನ್ಯಾಸಗೊಳಿಸಬೇಕೆಂದು ಡಾ.ಎಂ.ಎಸ್.ರವಿಪ್ರಕಾಶ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಭಾ?ಯ ಬಳಕೆಯ ಜೊತೆಗೆ ಸುದ್ದಿ ಪ್ರಾಮುಖ್ಯತೆ ಬಗ್ಗೆ ಮುಖ್ಯವಾಗಿ ಗಮನಿಸಬೇಕು. ಪತ್ರಿಕೆಗಳು ಮಾಹಿತಿ ವಿನಿಮಯದ ಮೂಲವಾಗಿರುವುದರಿಂದ, ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪೂರಕವಾದ ವಿ?ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಎಂದು ಅವರು ತಿಳಿಸಿದರು. ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಉಪನ್ಯಾಸಕರಾದ ಜ್ಯೋತಿ.ಸಿ., ನವೀನ್ ಎನ್.ಜಿ., ಶಂಕರಪ್ಪ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.