ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳು ಒಳಗೊಂಡಿರುವ ಫೋಕಸ್

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಪ್ರತಿ ತಿಂಗಳು ಹೊರತರುವ ಫೋಕಸ್ ನ್ಯೂಸ್ ಲೇಟರ್‌ನ್ನು ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ್ ಬಿಡುಗಡೆಗೊಳಿಸಿದರು.
ನ್ಯೂಸ್ ಲೇಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಫೋಕಸ್ ನ್ಯೂಸ್ ಲೇಟರ್ ಹೊರಬರುತ್ತಿದ್ದು, ಅದರಲ್ಲಿ ಲೇಖನ, ಕಾರ್ಯಾಗಾರ, ಸಮ್ಮೇಳನ, ಸಾಧನೆಗಳು, ವಿದ್ಯಾರ್ಥಿಗಳ ಪ್ಲೇಸ್‌ಮೆಂಟ್ ಸೇರಿದಂತೆ ಕಾಲೇಜಿನ ಪ್ರತಿ ವಿಭಾಗದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಫೋಕಸ್ ನ್ಯೂಸ್ ಲೇಟರ್ ಒಳಗೊಂಡಿರುತ್ತದೆ.


ತಾಂತ್ರಿಕ ಕಾಲೇಜಿನಲ್ಲಿ ಹಲವು ವಿಭಾಗಗಳಿವೆ. ಪ್ರತಿದಿನ ವಿಭಾಗಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು, ಅವುಗಳನ್ನು ದಾಖಲಾತಿ ಮಾಡಲು ಮತ್ತು ವಿದ್ಯಾರ್ಥಿಗಳ ಕಾರ್ಯ ಪ್ರವೃತ್ತಿಗಳನ್ನು ಮುಖ್ಯವಾಹಿಗೆ ತರುವ ನಿಟ್ಟಿನಲ್ಲಿ ಫೋಕಸ್ ನ್ಯೂಸ್ ಲೇಟರ್ ಪ್ರಾರಂಭಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ.ಜಯಪ್ರಕಾಶ್, ಎನ್‌ಎಸ್‌ಎಸ್ ಅಧಿಕಾರಿಯಾದ ಡಾ.ರವಿಕಿರಣ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಉಪನ್ಯಾಸಕಿ ಜ್ಯೋತಿ ಸಿ. ಹಾಗೂ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಫೋಕಸ್ ನ್ಯೂಸ್ ಲೇಟರ್‌ನ ಪ್ರಾಧ್ಯಾಪಕರ ತಂಡ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!