ತುಮಕೂರು : ಕರೋನ ಪ್ರಾರಂಭದಿಂದ ಅಂದರೆ ಮಾಚ್ 2020 ರಿಂದ ಇಂದಿನವರೆಗೂ ಕರೋನ ಸಂಕಷ್ಟ ಸಮಯದಲ್ಲಿ ಕರೋನವನ್ನು ಹೋಗಲಾಡಿಸಲು ಶ್ರಮಪಟ್ಟ ಎಲ್ಲ ಸಂಘ ಸಂಸ್ಥೆಗಳಿಗೂ ರೆಡ್‌ಕಾಸ್ ವತಿಯಿಂದ ಅಭಿನಂದನಾ ಸಮಾರಂಭವನ್ನು ನಗರದ ವರಾನ ಗ್ಲೋಬಲ್ ಟ್ರಸ್ಟ್‌ನ ಅಂಗಸಂಸ್ಥೆಯಾದ ಅನನ್ಯ ಇನ್ಟ್ಸಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ನ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಜ.೨೬ ರಂದು ನಡೆದ ಅರ್ಥಪೂರ್ಣ ಸಮಾರಂಭದಲ್ಲಿ ಸಂಘ ಸಂಸ್ಥೆಗಳಾದ ಪಾವಗಡದ ಸ್ವಾಮಿ ವಿವೇಕಾನಂದ ಇನ್ಸ್‌ಸ್ಟಿಟ್ಯೂಟ್ ಗ್ರಾಮೀಣ ಆರೋಗ್ಯ ಕೇಂದ್ರ, ಕುಣಿಗಲ್‌ನ ಇಂಡಿಯನ್ ರೆಡ್‌ಕಾಸ್ ಸೊಸೈಟಿ, ಗುಬ್ಬಿಯ ಮಮತ ಟ್ರಸ್ಟ್, ಗೀವ್ ಬ್ಯಾಕ್ ಸಂಸ್ಥೆ, ಎಸ್.ಐ.ಟಿ.ಯ ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕರು, ದಯಾಸ್ಪರ್ಷ ಇಂತಹ ಸಂಘ ಸಂಸ್ಥೆಗಳಿಗೆ ಮತ್ತು ಕರೋನಾ ವಾರಿಯರ್ಸ್‌ಗಳಿಗೆ ತುಮಕೂರು ರೆಡ್‌ಕ್ರಾಸ್ ವತಿಯಿಂದ ಸನ್ಮಾನಿಸಲಾಗಿತ್ತು.
ತುಮಕೂರಿನ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಎಂ.ಶಾಂತಶ್ರೀರವರು ಮಾತನಾಡುತ್ತಾ ಕರೋನಾ ಲಸಿಕೆ ಪ್ರಾಯೋಗಿಕವಾಗಿ ಪೋಲೀಸ್ ಇಲಾಖೆಯ ಮೇಲೆ ಪ್ರಯೋಗಿಸಿದ್ದು, ತದನಂತರ ಎಲ್ಲಾ ವರ್ಗಕ್ಕೂ ವಿತರಿಸಿದರು ಎಂದು ಹೇಳಿದರು. ಸಮಾಜಘಾತಕ ಶಕ್ತಿಗಳಿಂದ ಸಮಾಜದಲ್ಲಿ ಆಗುವ ದೃಷ್ಟಪರಿಣಾಮಗಳ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದರು. ಭಸ್ಮಸುರನ ನೀತಿ ಕಥೆಗಳನ್ನು ಸ್ವಯಂಸೇವಕರಿಗೆ ಅರ್ಥಪೂರ್ಣವಾಗಿ ಹೇಳಿ ಸ್ವಯಂಸೇವಕರನ್ನು ಶುಭ ಹಾರೈಸಿದ್ದರು.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅನನ್ಯ ಕಾಲೇಜಿನ ಉಪಾಧ್ಯಕ್ಷರು ಹಾಗೂ ತುಮಕೂರಿನ ರೆಡ್‌ಕಾಸ್‌ನ ಕಾರ್ಯದರ್ಶಿಯಾದ ಉಮೇಶ್.ಬಿ.ಆರ್.ರವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವರಾನ ಗ್ಲೋಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಸಿ.ಎ.ವಿಶ್ವನಾಥ್‌ರವರು ಮಾತನಾಡುತ್ತಾ ಕರೋನಂತಹ ಸಂಕಷ್ಟದ ಸಂದರ್ಭದಲ್ಲಿ ಸೇವೆ ಮಾಡಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಮತ್ತು ಸ್ವಯಂ ಸೇವಕರಿಗೆ ನಮ್ಮ ಟ್ರಸ್ಟ್‌ನ ವತಿಯಿಂದ ಎಲ್ಲಾ ತರಹದ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಈ ಸಮಾರಂಭದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಎಂ.ಶಾಂತಶ್ರೀರವರನ್ನು ಸನ್ಮಾನಿಸಲಾಯಿತ್ತು. ಕಾರ್ಯಕ್ರಮದಲ್ಲಿ ಅನನ್ಯ ಸಂಸ್ಥೆಯ ಟ್ರಸ್ಟಿಯಾದ ಡಾ.ಹೆಚ್.ಹರೀಶ್, ಪ್ರಾಂಶುಪಾಲರಾದ ಡಾ.ಎಂ.ವಿಶ್ವಾಸ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ದೇವಕಿಪ್ರಸಾದ್‌ರವರು, ಇಂಗ್ಲೀಷ್ ಉಪನ್ಯಾಸಕಿ ಅನಂತಲಕ್ಷ್ಮಿರವರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.