ಬೆಂಗಳೂರು : ಶ್ರೀ ಲಕ್ಷ್ಮಿ ಸ್ಟೀಲ್ ಸಪ್ಲೈಯರ್ಸ್ (ಎಸ್ಎಲ್ಎಸ್ಎಸ್) ಕಳೆದ 40 ವರ್ಷಗಳಿಂದ ದೇಶಾದ್ಯಂತ ಡ್ಯುರಾಸ್ಟ್ರಾಂಗ್ ಬ್ರ್ಯಾಂಡ್ ಅಡಿ ಭರವಸೆಯ ಗುಣಮಟ್ಟದ ಉತ್ಪನ್ನಗಳೊಂದಿಗೆ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಪ್ರಸ್ತುತ ಸಂಸ್ಥೆಯು 1,500 ವಿತರಕರ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದು, ಒಳಾಂಗಣ ಮತ್ತು ಶ್ರೇಣಿ 2 & 3 ನಗರಗಳಲ್ಲಿ ಹೆಚ್ಚು ಗುಣಮಟ್ಟದ ಜಾಗೃತ *ಗ್ರಾಹಕಾರನ್ನು* ತಲುಪುವ ನಿಟ್ಟಿನಲ್ಲಿ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡುವ ಯೋಜನೆಗಳನ್ನು ಹೊಂದಿದೆ.
ತನ್ನ ಉತ್ಪನ್ನಗಳಿಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಎಸ್ಎಲ್ಎಸ್ಎಸ್ ತನ್ನ ಮಾರುಕಟ್ಟೆಯ ಜಾಲವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವತ್ತ ಗಮನ ಹರಿಸಿದೆ. ತನ್ನ ಸದೃಢವಾದ ಬ್ರ್ಯಾಂಡ್ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಎಸ್ಎಲ್ಎಸ್ಎಸ್ ತನ್ನ ಡ್ಯುರಾಸ್ಟ್ರಾಂಗ್ ಶ್ರೇಣಿಯ ಉತ್ಪನ್ನಗಳಿಗೆ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಮಾಡಿದೆ.
ಈ ಬಗ್ಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ವಿನೋದ್ ಸಿಂಘಾಲ್ ಅವರು, “ಒಂದು ಬ್ರ್ಯಾಂಡ್ ಆಗಿ ನಾವು ಗ್ರಾಹಕರಿಗೆ ಶ್ರೇಷ್ಠವಾದ ಉತ್ಪನ್ನಗಳನ್ನು ನೀಡಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ವಿಶೇಷವಾಗಿ ನಮ್ಮ ಗ್ರಾಹಕರಿಗೆ ನಮ್ಮ ಬದ್ಧತೆಗೆ ಸಂಬಂಧಿಸಿದಂತೆ ಮತ್ತು ಇದು ಅನಿಲ್ ಕುಂಬ್ಳೆ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಹಾಗೂ ವೈಯಕ್ತಿಕ ಜೀವನದಲ್ಲಿ ಪ್ರದರ್ಶಿಸಿದ ಸಾಧನೆಯ ಪ್ರತೀಕವಾಗಿದೆ. ಈ ನಮ್ಮ ಬದ್ಧತೆಯ ಸಂದೇಶವನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಅವರು ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ನಮಗೆ ಹೆಮ್ಮೆ ತಂದಿದೆ’’ ಎಂದರು.
ಅನಿಲ್ ಕುಂಬ್ಳೆ ಅವರು ಮಾತನಾಡಿ, “ಡ್ಯುರಾಸ್ಟ್ರಾಂಗ್ ಜೊತೆಗೆ ಸಹಯೋಗ ಹೊಂದುತ್ತಿರುವುದು ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸಲು ನನಗೆ ಸಂತಸ ತಂದಿದೆ. ಡ್ಯುರಾಸ್ಟ್ರಾಂಗ್ ಕಳೆದ ನಲವತ್ತು ವರ್ಷಗಳಿಂದ ಉತ್ತಮ ಗುಣಮಟ್ಟದ ಉತ್ಪನ್ನವನ್ನು ನೀಡುವ ಕಂಪನಿಯಾಗಿದೆ. ಈ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿರುವ ಎಸ್ಎಲ್ಎಸ್ಎಸ್ ಗೆ ಅಭಿನಂದನೆ ಸಲ್ಲಿಸುತ್ತೇನೆ’’ ಎಂದು ತಿಳಿಸಿದರು.