ಶಿರಾ – ಅಮರಾಪುರ ರಸ್ತೆಯ ಹುಚ್ಚಗೀರನಹಳ್ಳಿ ಗೇಟ್ ಬಳಿ ಸೋಮವಾರ ಬೈಕುಗಳ ನಡುವೆ ಅಪಘಾತವಾಗಿದ್ದು ಗಾಯಾಳುಗಳು ರಸ್ತೆಯಲ್ಲಿಯೇ ಬಿದ್ದು ನರಳಾಡುತ್ತಿದ್ದರು
ಅದೇ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಚಿಕ್ಕಬಾಣಗೆರೆ ಗ್ರಾಮದಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಮಾನ್ಯ ಸಚಿವರಾದ ಶ್ರೀ ಮಾಧುಸ್ವಾಮಿರವರು, ಶಾಸಕರಾದ ರಾಜೇಶ್ ಗೌಡ, ಹಾಗೂ ವಿಧಾನಪರಿಷತ್ ಶಾಸಕರಾದ ಶ್ರೀ ಚಿದಾನಂದ ಎಂ. ಗೌಡ ರವರು ಕೂಡಲೇ ತಮ್ಮ ವಾಹನ ನಿಲ್ಲಿಸಿ, ಗಾಯಾಳುಗಳನ್ನು ಉಪಚರಿಸಿದರು. ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ತಮ್ಮ ಬೆಂಗಾವಲು ವಾಹನದಲ್ಲೇ ಕಳಿಸಿಕೊಟ್ಟು ತಕ್ಷಣ ಚಿಕಿತ್ಸೆ ದೊರಕುವಂತೆ ಮಾಡಿ ಮಾನವೀಯತೆ ಮೆರೆದರು.
ಜನಪ್ರತಿನಿಧಿಗಳ ಈ ಕಾರ್ಯವನ್ನು ಕಂಡ ಪ್ರತ್ಯಕ್ಷದರ್ಶಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.