ಇಂದು,ದಿನಾಂಕ 04/01/2022,ರಂದು ತುರುವೇಕೆರೆ ವಿಧಾನಸಭಾ ಕ್ಷೇತ್ರದ,ಕಸಬಾ ಹೋಬಳಿಯ ರೈತರುಗಳ ಬಹಳ ವರ್ಷಗಳ ಕನಸಾಗಿದ್ದ ಲೋಕಮ್ಮನಹಳ್ಳಿ ಮತ್ತು ಬಾಣಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 30 ಗ್ರಾಮಗಳ ರೈತರುಗಳಿಗೆ ಅನುಕೂಲವಾಗುವಂತೆ ಕೆ.ಪಿ.ಟಿ.ಸಿ.ಎಲ್ ವತಿಯಿಂದ ಹರಿದಾಸನಹಳ್ಳಿ ಗ್ರಾಮದಲ್ಲಿ ನೂತನ 110/11 KVA ವಿದ್ಯುತ್ ಉಪ-ಸ್ಥಾವರ ನಿರ್ಮಾಣಕ್ಕೆ ವಿಶೇಷ ಅನುದಾನದಲ್ಲಿ ಅಂ.ಮೊತ್ತ,ರೂ-614 ಲಕ್ಷಗಳ
ಕಾಮಗಾರಿಗೆ ಮಾನ್ಯ ಕಾನೂನು,ಸಂಸದೀಯ ಹಾಗೂ ಸಣ್ಣ ನೀರಾವರಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಜೆ.ಸಿ,ಮಾಧುಸ್ವಾಮಿಯವರೊಂದಿಗೆ ಸೇರಿ ಭೂಮಿಪೂಜೆ,ನೇರವೆರಿಸುವ,ಮೂಲಕ,ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೆ.ಪಿ.ಟಿ.ಸಿ.ಎಲ್ ನ ವ್ಯ.ನಿ,ಶ್ರೀಮತಿ,ಮಂಜುಳಾ,ಮುಖ್ಯ ಇಂಜನೀಯರ್,ಅದಿ ನಾರಾಯಣ್, ಗೋವಿಂದಪ್ಪ(ಬೆ.ವಿ.ಕಂ) ಹಾಗೂ ಇಲಾಖೆಯ ಜಿಲ್ಲಾ ಹಾಗೂ ತಾ: ಮಟ್ಟದ ಅಧಿಕಾರಿಗಳು,ಗ್ರಾ.ಪಂ ಅಧ್ಯಕ್ಷರು,ಎಲ್ಲಾಸದಸ್ಯರುಗಳು,ಮುಖಂಡರುಗಳು ಭಾಗವಹಿಸಿದ್ದರು ಹಾಗೂ ಈ ಭಾಗದ ಮುಖಂಡರುಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮಸ್ಥರುಗಳಿಗೆ, ಎ.ಎಸ್ ಜಯರಾಮ್(ಮಸಾಲ ಜಯರಾಮ್) ರವರಿ ಧನ್ಯವಾದಗಳು ತಿಳಿಸಿದರು.