ಮೇಷ : ಹಣದ ವಿಷಯದಲ್ಲಿ ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ, ವಿಶೇಷವಾಗಿ ನೀವು ಸಾಲ ತೆಗೆದುಕೊಂಡಿದ್ದರೆ, ಮುಂದಿನ ದಿನಗಳಲ್ಲಿ ಅದನ್ನು ಸಾಧ್ಯವಾದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸಿ.
ವೃಷಭ : ದಿನಗೂಲಿ ನೌಕರರಿಗೆ ಸಿಹಿ ಸುದ್ದಿ ಕೇಳುವಿರಿ, ಮಿತ್ರರಿಂದ ಸಹಾಯ ಸಹಕಾರಗಳನ್ನು ಪಡೆಯಲಿದ್ದೀರಿ, ಕೋರ್ಟು ಕಚೇರಿ ಕೆಲಸಗಳಲ್ಲಿ ಯಶಸ್ಸು, ವಾಹನ ಸವಾರಿ ಮಾಡುವಾಗ ಕಿರಿಕಿರಿ ಉಂಟಾಗುವ ಸಾಧ್ಯತೆ.
ಮಿಥುನ: ರಾಜಕಾರಣಿಗಳಿಗೆ ವಿಶೇಷ ಸ್ಥಾನಮಾನ ಸಿಗುವ ಸಾಧ್ಯತೆ, ಉದ್ಯೋಗಿಗೆ ಮೇಲಾಧಿಕಾರಿಯ ನೆರವು ಸಿಗಲಿದೆ, ಗುಪ್ತ ಶತ್ರುಗಳಿಂದ ನಿಮ್ಮ ವ್ಯವಹಾರಗಳಲ್ಲಿ ತೊಡಕು ಸಂಭವ, ಭೂ ವ್ಯವಹಾರಗಳಲ್ಲಿ ಯಶಸ್ಸಿನೊಂದಿಗೆ ಹಣಕಾಸಿನ ಅನುಕೂಲ.
ಕಟಕ: ಬಾಕಿ ಕೆಲಸವನ್ನು ಪೂರ್ಣಗೊಳಿಸುವ ತಯಾರಿ ನಡೆಸಿ. ಮಾನಸಿಕ ಗೊಂದಲಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ಹೊಸ ಜ್ಞಾನ ಮತ್ತು ಕೆಲಸದ ಕೌಶಲ್ಯತೆಯನ್ನು ರೂಢಿಸಿಕೊಳ್ಳಲು ಪ್ರಯತ್ನಪಡಿ. ನಂಬಿಕಸ್ಥರಿಂದ ಮೋಸ ಹೋಗುವ ಸಂದರ್ಭ ಬರಬಹುದು ಎಚ್ಚರವಿರಲಿ.
ಸಿಂಹ : ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಪೂರಕ ವಾತಾವರಣ ಕೂಡಿ ಬರಲಿದೆ. ವ್ಯವಹಾರದ ವಿಚಾರದಲ್ಲಿ ಅನುಭವಸ್ಥರ ಮಾರ್ಗದರ್ಶನವನ್ನು ಕಡೆಗಣಿಸಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ನೀವೇ ಸಂಕಷ್ಟ ಎದುರಿಸುವ ಸಾಧ್ಯತೆ ಇರಲಿದೆ.
ಕನ್ಯಾ : ಮಕ್ಕಳು ಓದಿನಲ್ಲಿ ಪ್ರಗತಿ ತೋರಲಿದ್ದಾರೆ. ಇದರಿಂದ ನಿಮ್ಮ ಸಂತೋಷಕ್ಕೆ ಪಾರವೇ ಇರೋದಿಲ್ಲ. ಗರ್ಭಿಣಿಯರ ಆರೋಗ್ಯದಲ್ಲಿ ಇಂದು ಏರುಪೇರು ಉಂಟಾಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ.
ತುಲಾ : ಇಂದು ನಿಮ್ಮ ಮನೆಯಲ್ಲಿ ಹೊಸ ವಾಹನವನ್ನು ಖರೀದಿ ಮಾಡಲಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಆರ್ಥಿಕ ಪ್ರಗತಿ ಕಾಣಲಿದ್ದೀರಿ. ವೈದ್ಯಕೀಯ ರಂಗದಲ್ಲಿ ಇರುವವರಿಗೆ ಇದು ಒತ್ತಡದ ದಿನವಾಗಿದೆ. ಕಲಾವಿದರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ.
ವೃಶ್ಚಿಕ : ಬಹಳ ದಿನಗಳಿಂದ ಅನಾರೋಗ್ಯದಲ್ಲಿ ಬಳಲುತ್ತಿದ್ದ ನೀವು ಇಂದು ಚೇತರಿಸಿಕೊಳ್ಳಲಿದ್ದೀರಿ. ಇಂದು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ನೀಡಬೇಡಿ. ಇದರಿಂದ ಹಣ ವಾಪಾಸ್ ಬರೋದಿಲ್ಲ. ಕಚೇರಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.
ಧನು : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವು ಇಂದಿನಿಂದ ಪುನಾರಂಭಗೊಳ್ಳಲಿದೆ. ಜವಳಿ ಉದ್ಯಮಿಗಳಿಗೆ ಇಂದು ಲಾಭದ ದಿನವಾಗಿದೆ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿದೆ. ಪೋಷಕರು ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ.
ಮಕರ : ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುತ್ತೀರಿ ಮತ್ತು ನಿಮ್ಮ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ.
ಕುಂಭ : ನೀವು ಕೆಲಸ ಮಾಡಿದರೆ ಕಠಿಣ ಪರಿಶ್ರಮವನ್ನು ನೋಡಿ, ನಿಮ್ಮ ಬಾಸ್ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಇಂದು ವ್ಯಾಪಾರಿಗಳಿಗೆ ಪ್ರಯೋಜನಕಾರಿ ದಿನವಾಗಲಿದೆ. ನೀವು ಆಸ್ತಿ ಸಂಬಂಧಿತ ಕೆಲಸವನ್ನು ಮಾಡಿದರೆ ಇಂದು ಉತ್ತಮ ಲಾಭವನ್ನು ನಿರೀಕ್ಷಿಸಬಹುದು.
ಮೀನ : ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಪ್ರತಿಸ್ಪರ್ಧಿಗಳಿಗೆ ಅವಕಾಶವಿಲ್ಲದಂತೆ ಕಾರ್ಯಮಗ್ನರಾಗಿ. ಉತ್ತಮ ಧನಾರ್ಜನೆ. ಮಾತಿನಲ್ಲಿ ಸ್ಪಷ್ಟತೆ ತಾಳ್ಮೆ ಇರಲಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.