ಆಧ್ಯಾತ್ಮವು ಬದುಕಿನ ಶೈಲಿಯಾಗಬೇಕು

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರು ಆದ ಶ್ರೀಮತಿ ಭಾಗ್ಯ ನೀಲಕಂಠ್‌ರವರು ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿಯವರು ಪ್ರಪಂಚದ ಸುಮಾರು ೧೫೦ ದೇಶಗಳಲ್ಲಿ ಯೋಗ ಧ್ಯಾನ್ಯ, ಪ್ರಾಣಾಯಾಮದ ಜ್ಞಾನವನ್ನು ನೀಡುತ್ತಾ ಸಮಾಜದ ಪರಿರ್ವನೆಗೆ ನಾಂದಿಯನ್ನು ಹಾಡಿದ್ದಾರೆ. ಅಲ್ಲದೆ ಸುದರ್ಶನ ಕ್ರಿಯೆಯೆಂಬ ಮಹೋನ್ನತ ಕ್ರಿಯೆಯನ್ನು ನಾಡಿಗೆ ನೀಡಿದ್ದಾರೆ. ಯೋಗ, ಧ್ಯಾನವೆನ್ನುವುದು ನಮ್ಮ ದಿನ ನಿತ್ಯದ ಜೀವನ ಕ್ರಮವಾಗಬೇಕು. ಯೋಗ ನಮ್ಮ ಯೋಗ್ಯತೆಯನ್ನು ಹೆಚ್ಚುಮಾಡುತ್ತದೆ.

ಧ್ಯಾನವೆಂದರೆ ಏಕಾಗ್ರತೆ ಎನ್ನುವುದು ಹಲವರ ಅಭಿಪ್ರಾಯ, ಆದರೆ ಧ್ಯಾನವು ಏಕಾಗ್ರತೆಯನ್ನು ಹೆಚ್ಚು ಮಾಡುವ ಕ್ರಿಯೆಯಾಗಿದೆ. ಧ್ಯಾನವೆಂದರೆ ನಾವು ಖಾಲಿಯಾಗುವುದು. ಬರುವ ಆಲೋಚನೆಗಳನ್ನು ಖಾಲಿ ಮಾಡಿಕೊಳ್ಳುವುದೇ ಧ್ಯಾನ. ಇವುಗಳನ್ನು ಸಿದ್ದಿ ಮಾಡಿಕೊಳ್ಳಲು ಗುರುವಿರಬೇಕು. ಗು ಎಂದರೆ ಕತ್ತಲು ರು ಎಂದರೆ ಬೆಳಕು, ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವುದೇ ಗುರು. ಎಂದು ಹಲವಾರು ಚಟುವಟಿಕೆಗಳ ಮೂಲಕ ಶಿಬಿರಾರ್ಥಿಗಳಿಗೆ ಆನಂದ ಅನುಭೂತಿ ನೀಡಿದರು.


ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದಂತಹ ಸಮರ್ಥ್ ಫೌಂಡೇಷನ್‌ನ ಕಾರ್ಯದರ್ಶಿ ರಾಣಿ ಚಂದ್ರಶೇಖರ್ ಆಧ್ಯಾತ್ಮವೆನ್ನುವುದು ದೇವರು, ಜಾತಿ, ಧರ್ಮ, ದೇವಸ್ಥಾನಕ್ಕೆ ಸೀಮಿತವಾದುದಲ್ಲ ಅದೊಂದು ಮನುಷ್ಯನ ಆಂತರಿಕ ಚೇತನವನ್ನು ಕ್ರಿಯಾಶೀಲ ಗೊಳಿಸುವಂತಹ, ನಮ್ಮನ್ನು ನಾವು ಅರಿವಂತಹ ಕ್ರಮ. ಯೋಗ, ಧ್ಯಾನ ಇವುಗಳು ವಯಸ್ಸಾಗಿರುವವರು ಮಾತ್ರ ಅನುಸರಿಸಬೇಕು. ಯುವ ಪೀಳಿಗೆಗೆ ಅದರ ಅಗತ್ಯವೇನಿದೆ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ನಿಜವಾಗಿಯೂ ಆದ್ಯಾತ್ಮ ಚಿಂತನೆಗಳು, ಯೋಗ ಧ್ಯಾನ ಅನಿವಾರ್ಯವಿರುವುದು ಇಂದಿನ ಯುವ ಪೀಳಿಗೆಗೆ, ಯಾಕೆಂದರೆ ಬದುಕಿನ ಸ್ಪರ್ಧೆ, ಸವಾಲುಗಳಿಂದ ಆತಂಕಕ್ಕೆ ಒಳಗಾಗಿ ಅವುಗಳನ್ನು ಎದುರಿಸಲು ಧೈರ್ಯ ಸಾಲದೆ ಪಲಾಯನವಾದಿಗಳಾಗುತ್ತಿದ್ದಾರೆ. ಅವರನ್ನು ಜೀವನದಲ್ಲಿ ಅಣಿಗೊಳಿಸುಬಹುದಾದ ಸುಲಭದ ಮಾರ್ಗವೆಂದರೆ ಅದು ಆಧ್ಯಾತ್ಮ ಮಾರ್ಗ, ಇದರಿಂದ ಸಶಕ್ತ ಸಮಾಜ ನಿರ್ಮಾಣ ಸಾಧ್ಯ, ಎಂದು ಅಭಿಪ್ರಾಯ ಪಟ್ಟರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ವಯಂ ಸೇವಕರಾದ ಶ್ರೀಮತಿ ಲತರವರು ಫೌಂಡೇಷನ್ನಿನ ಶಿಕ್ಷಕಿಯರಾದ ಪುಷ್ಪಾಂಜಲಿ, ಮಮತ. ಮಾತನಾಡಿದರು. ಶಿಬಿರಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!