ತುಮಕೂರು ನಗರದಲ್ಲಿ ಒಮಿಕ್ರೋನ್ ಕೇಸ್ ಗಳು ಪತ್ತೆಯಾಗಿವೆ ಎಂದು ಕೆಲ ಸುಳ್ಳು ಸುದ್ದಿಗಳು ನಗರದಾದ್ಯಂತ ಹಬ್ಬಿದ್ದು ಇದಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ನಾಗೇಂದ್ರಪ್ಪ ರವರು ಸ್ಪಷ್ಟೀಕರಣ ನೀಡಿದ್ದು ತುಮಕೂರು ನಗರದಲ್ಲಿ ಯಾವುದೇ ಒಮಿಕ್ರಾನ್ ಕೆಸ್ಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದು.
ಇನ್ನು ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಇಂತಹ ಸುಳ್ಳು ಸುದ್ದಿ ಹರಿ ಬಿಡುವವರ ಮೇಲೆ ಎನ್. ಡಿ.ಎಂ.ಎ ಕಾಯ್ದೆಯಡಿ ಕೇಸ್ ಮಾಡಿ ಕ್ರಮ ಕೈಗೊಳ್ಳುವ ನೇರ ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.
ಇದಕ್ಕೂ ಮುಂಚೆ ತುಮಕೂರು ನಗರದಲ್ಲಿ ಒಮಿಕ್ರೋನ್ ಕೇಸ್ಗಳು ಪತ್ತೆಯಾಗಿವೆ ಎಂದು ಸುಳ್ಳು ಸುದ್ದಿ ನಗರದಾದ್ಯಂತ ಹಬ್ಬಿತ್ತು ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿ ಸುಳ್ಳುಸುದ್ದಿ ಗೆ ಅಂಕುಶ ಹಾಕಿದ್ದಾರೆ.