ತುಮಕೂರು : ನಗರದ ಶಿರಾರಸ್ತೆಯಲ್ಲಿರುವ ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ಇತ್ತೀಚಿಗೆ ’ಆರ್ಟಿಪಿಷಿಯಲ್ ಇಂಟಿಲಿಜೆನ್ಸ್ ಮತ್ತು ಡೇಟ ಸೈನ್ಸ್’ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಯಾದ ಟೂರಿಂಗ್ ಮೈಂಡ್ಸ್ (TouringMinds) ಕ್ಯಾಂಪಸ್ ಸಂದರ್ಶನಕ್ಕೆ ಭೇಟಿ ನೀಡಿತ್ತು. ಅಂತಿಮ ಇಂಜಿನಿಯರಿಂಗ್ನಲ್ಲಿ ಓದುತ್ತಿರುವ ಕಂಪ್ಯೂಟರ್ ಸೈನ್ಸ್, ಇನ್ಪಾರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮತ್ತು ಮೈಕಾನಿಕಲ್ ಇಂಜಿನಿಯರಿಂಗ್ನ ಸುಮಾರು 140 ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಹಲವು ಸುತ್ತಿನ ಆಯ್ಕೆ ಪರೀಕ್ಷೆಗಳು ಮತ್ತು ಸಂದರ್ಶನದ ಬಳಿಕ ಕಂಪನಿಯು 22 ವಿದ್ಯಾರ್ಥಿಗಳನ್ನು ಅಂತಿಮವಾಗಿ ಡೇಟಾ ಸೈಂಟಿಸ್ಟ್ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ಎಲ್ಲಾ ವಿದ್ಯಾರ್ಥಿಗಳೂ ಸಹ ಇದೇ ಡಿಸೆಂಬರ್ 23 ಕ್ಕೆ ಪ್ರಶಿಕ್ಷಣಾರ್ಥಿಗಳಾಗಿ ಸೇರಿಕೊಳ್ಳಲಿದ್ದು ಮುಂಬರುವ ಜನವರಿಯಿಂದಲೇ ಮಾಸಿಕ ರೂ.10,000 ವನ್ನು ಪ್ರಶಿಕ್ಷಣಾರ್ಥಿಗಳ ಶಿಷ್ಯವೇತನವಾಗಿ ಪಡೆಯಲಿದ್ದಾರೆ. ಅಂತಿಮ ೮ ನೇ ಸೆಮಿಸ್ಟರ್ ಮುಗಿದು ಆಗಸ್ಟ್ 2022 ಕ್ಕೆ ಪೂರ್ಣ ಪ್ರಮಾಣದ ಹುದ್ದೆಗಳಿಗೆ ಬಡ್ತಿ ಹೊಂದಲಿದ್ದು ವಾರ್ಷಿಕ ೬,೨೦,೦೦೦ ವೇತನವನ್ನು ಪಡೆಯಲಿದ್ದಾರೆ ಎಂದು ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್ರವರು ತಿಳಿಸಿದರು.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ಅಭಿನಂದಿಸಿದರು. ಇಂತಹ ಹಲವಾರು ಕಂಪನಿಗಳನ್ನು ಕಾಲೇಜಿಗೆ ಕರೆ ತಂದು ತನ್ನ ವಿದ್ಯಾರ್ಥಿಗಳ ಉದ್ಯೋಗ ಭದ್ರತೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ರವರು ತಿಳಿಸಿದರು.
ಕಾಲೇಜಿನಲ್ಲಿ 2021-22 ನೇ ಸಾಲಿನಿಂದಲೇ ಅತ್ಯುತ್ತಮ ಕಲಿಕಾ ಅವಕಾಶಗಳು ಹಾಗೂ ಉನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಆರ್ಟಿಪಿಷಿಯಲ್ ಇಂಟಿಲಿಜೆನ್ಸ್ ಮತ್ತು ಡೇಟ ಸೈನ್ಸ್ ವಿಭಾಗವನ್ನು ಪ್ರಾರಂಭಿಸಿದ್ದು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಾದ Amazon, Qualcomm, Facebook, Twitter, openAI, Google, Apple) ಇನ್ನೂ ಹಲವಾರು ಕಂಪನಿಗಳ ಜೊತೆ ಕಾಲೇಜು ನೇರ ಸಂಪರ್ಕದಲ್ಲಿದ್ದು ತನ್ನ ಕಾಲೇಜಿನಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಕಾಲೇಜಿನ ಉದ್ಯೋಗ ಮತ್ತು ತರಬೇತಿ ಅಧಿಕಾರಿಯಾದ ಪ್ರೊ.ಎಂ.ಅಂಜನಮೂರ್ತಿರವರು ತಿಳಿಸಿದರು. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಗಳೂ ಸಹ ಇಂತಹ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸಿದ ಕಾಲೇಜಿಗೆ ಕೃತಜ್ಞತೆಗಳನ್ನು ತಿಳಿಸಿದರು.