ಅಂಧ ಹೆಣ್ಣು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ : ನಂದಿನಿಬ್ರಹ್ಮದೇವ್‌ಜೈನ್

ತುಮಕೂರು: ಇತ್ತೀಚಿಗೆ ಅಂಧ ಹೆಣ್ಣು ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ, ಫ್ಯಾಷನ್ ನಡಿಗೆ ಇತಂಹ ಕಾರ್ಯಕ್ರಮಗಳು ದಿವ್ಯದೃಷ್ಟಿ ಸಂಸ್ಥೆಯು ಸದಾ ಶ್ರಮಿಸಲು ಸಿದ್ದರಿದ್ದಾರೆ. ಒಳ್ಳೆಯ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿರುವ ಸಂಸ್ಥೆಗೆ ಹೆಮ್ಮೆಯಾಗಿದೆ. ಈ ಸಂಸ್ಥೆಯು ನಾನಾ ತರಹದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಅಂಧರ ಹೆಣ್ಣು ಮಕ್ಕಳ ಹಾಗೂ ಹಳ್ಳಿಯ ಹೆಣ್ಣು ಮಕ್ಕಳ ಫ್ಯಾಷನ್ ನಡಿಗೆಗೆ ಡ್ರೀಮ್ ಜೋನ್ ಸಂಸ್ಥೆಯ ಶಾಲೆ ಮಾರ್ಗಸೂಚಿಯಂತೆ ಹಳ್ಳಿಯ ಹೆಣ್ಣು ಮಕ್ಕಳಿಗೆ ತುಮಕೂರು ಫ್ಯಾಷನ್ ರನ್ ವೇ ಕಾರ್ಯಕ್ರಮದಲ್ಲಿ ಇತಂಹ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವೆಂದು ತುಮಕೂರಿನ ದಿವ್ಯದೃಷ್ಟಿ ಸಂಸ್ಥೆಯ ಅಧ್ಯಕ್ಷರಾದ ನಂದಿನಿಬ್ರಹ್ಮದೇವ್‌ಜೈನ್‌ರವರು ತಿಳಿಸಿದರು.
ನಗರದ ರೈಲ್ವೇ ಸ್ಪೇಷನ್ ರಸ್ತೆಯ ಹೋಟೇಲ್ ಸಮೃದ್ಧಿ ಗ್ರಾಂಡ್ ಸಭಾಂಗಣದಲ್ಲಿ ಕ್ರಿಯೇಟೀವ್-5 ಇವೇಂಟ್ಸ್ ಮ್ಯಾನೇಜ್‌ಮೆಂಟ್ ಕಾರ್ಯಕ್ರಮದ ಸಂಯುಕ್ತಾಶ್ರಯದಲ್ಲಿ ವಿದೀಸ್ ಎಂಟರ್‌ಟೈನ್‌ಮೆಂಟ್ ಹಾಗೂ ಡ್ರೀಮ್ ಜೋನ್ ಸಂಸ್ಥೆಯ ಸೃಜನಶೀಲ ಶಾಲೆಯ ಸಹಭಾಗಿತ್ವದೊಂದಿಗೆ ಅಂಧ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಹಾಗೂ ಹಳ್ಳಿಯ ಹೆಣ್ಣು ಮಕ್ಕಳ ಹಳ್ಳಿಯಿಂದ ದಿಲ್ಲಿಯ ಆಧುನಿಕ ಯುಗದ ತುಮಕೂರು ಫ್ಯಾಷನ್ ರನ್ ವೇ (ನಡಿಗೆ) ಎಂಬ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.


ಇದೇ ಸಂದರ್ಭದಲ್ಲಿ ದಿವ್ಯದೃಷ್ಟಿ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಯವರು ಗುರಿ, ದ್ಯೇಯೋದ್ದೇಶಗಳಲ್ಲಿ ಒಂದಾದ ಅಂಧ ಮಗಳಾದ ಕುಸುಮಜೈನ್ ಹಾಗೂ ಅವರ ತಾಯಿ ಜಲಜ ಜೈನ್‌ರವರ ಧ್ಯೇಯದೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಬೆಂಗಳೂರಿನ ಹೆಸರಾಂತ ಗಿರೀಶ್ ನಾಯ್ಡುರವರು ಸಾಮಾಜಿಕ ಕಾರ್ಯಕರ್ತರು ಹಾಗೂ ಉಮೇಶ್‌ರವರು ಕರ್ನಾಟಕ ರಾಜ್ಯದ ಎ.ಪಿ.ಎಂ.ಸಿ.ಯ ರಾಜ್ಯ ನಿರ್ದೇಶಕರನ್ನು ಸನ್ಮಾನಿಸಲಾಯಿತ್ತು. ತಿರುಮಲ ವೆಂಕಟಯ್ಯ ದೇವಸ್ಥಾನದಲ್ಲಿ ಅಧ್ಯಕ್ಷರಾದ ಶ್ರೇಯಾಂಸ್‌ಕುಮಾರ್‌ರವರ ಧರ್ಮಪತ್ನಿ ಯವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕ್ರಿಯೇಟೀವ್-೫ ಇವೇಂಟ್ಸ್ ಮ್ಯಾನೇಜ್‌ಮೆಂಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಅರ್ಪಿತ್‌ದೇವ್‌ರವರು ಮಾತನಾಡುತ್ತಾ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು, ಅಂಧ ಹೆಣ್ಣು ಮಕ್ಕಳ ಸರ್ವತೋಮುಖ ಹಾಗೂ ಹಳ್ಳಿಯ ಹೆಣ್ಣು ಮಕ್ಕಳ ಫ್ಯಾಷನ್ ಯುಗದ ಪರಿಚಯಿಸುವಿಕೆ ಬೆಳವಣಿಗೆಗೆ ದಾರಿ ದೀಪದಂತೆ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಎಲ್ಲರ ಸಹಾಯದಿಂದ ಪ್ರತಿಬಿಂಬಿಸಿದರು. ಇತಂಹ ಒಳ್ಳೆಯ ಪ್ರಾಯೋಜಿಕ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಪ್ರಪ್ರಥಮವಾಗಿ ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವಾರು ಶಾಲೆಗಳ ನಿರ್ದೇಶಕರು, ನಿರ್ಮಾಪಕರು, ಮಾರ್ಗದರ್ಶಕರುಗಳಾದ ನಟ ಶ್ರೀನಾಥ್‌ರವರ ಪುತ್ರರಾದ ರೋಹಿತ್ ಶ್ರೀನಾಥ್, ವಿದ್ಯಾವಿಜಯ್ ಹಾಗೂ ಬೆಂಗಳೂರಿನ ತಂಡವು ಈ ಕಾರ್ಯಕ್ರಮಕ್ಕೆ ಯಶಸ್ವಿಗೆ ಮಾರ್ಗದರ್ಶನ ನೀಡಿ ಧನ ಸಹಾಯ ಮಾಡಿ ಎಲ್ಲಾ ಸಂಸ್ಥೆಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್‌ರವರ ನುಡಿನಮನ ದಿನವನ್ನು ಆಚರಿಸಲಾಯಿತ್ತು.

Leave a Reply

Your email address will not be published. Required fields are marked *

error: Content is protected !!