ಗೆಲುವಿನ ನಗೆ ಚೆಲ್ಲಿದ ರಾಜೇಂದ್ರ ರಾಜಣ್ಣ (ಕಾಂಗ್ರೆಸ್)

ಸ್ಥಳೀಯ ಸಂಸ್ಥೆ ವಿಧಾನಪರಿಷತ್ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್ ರಾಜೇಂದ್ರ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ ಅವರ ಪ್ರತಿಸ್ಪರ್ಧಿ ಬಿಜೆಪಿಯ ಲೋಕೇಶ್ ಗೌಡ ರವರನ್ನು ಪರಾಭವ ಗೊಳಿಸಿದ್ದಾರೆ, ಜೆಡಿಎಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

 

ಇನ್ನು ಜೆಡಿಎಸ್, ಬಿಜೆಪಿ,  ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು, ಆದರೆ ಅದರಲ್ಲಿ ಎಲ್ಲರ ಸಮೀಕ್ಷೆಗಳಂತೆ ಕಾಂಗ್ರೆಸ್ ಬಹುಮತಗಳಿಸುವಲ್ಲಿ ಯಶಸ್ವಿಯಾಗಿದೆ. ಉಳಿದಂತೆ ಕಾಂಗ್ರೆಸ್  ಮೊದಲ ಸುತ್ತಿನಿಂದಲೂ  ಮುನ್ನಡೆ ಕಾಯ್ದುಕೊಳ್ಳುವ ಮೂಲಕ  ಭರ್ಜರಿ ಪೈಪೋಟಿ ನೀಡಿದರು.

ಕೊನೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್ ರಾಜೇಂದ್ರ ಗೆ ಮತದಾರರ ಒಲವು ಹಾಗೂ ಆಶೀರ್ವಾದ ಸಿಗುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲುವಿನ ಮೂಲಕ ತುಮಕೂರು ಜಿಲ್ಲೆಯಲ್ಲಿ  ಭದ್ರವಾಗಿದೆ ಎನ್ನುವ ಸಂದೇಶವನ್ನು ಸಹ ರವಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜೇಂದ್ರ ಪರ ಘಟಾನುಘಟಿ ನಾಯಕರುಗಳದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಾಕಷ್ಟು ಹಿರಿಯ ನಾಯಕರು ರಾಜೇಂದ್ರ ಪರ ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು. ಅಲ್ಲದೇ ಕೆಲವು ರಾಷ್ಟ್ರೀಯ ಪಕ್ಷಗಳ ಒಳ ಒಪ್ಪಂದಿಂದ ಕಾಂಗ್ರೆಸ್ ಗೆಲವು ಸುಲಭವಾಗಿತ್ತು ಎನ್ನಬಹುದಾಗಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ  ರಾಜೇಂದ್ರ ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಸಂತಸ ಇಮ್ಮಡಿಗೊಳಿಸಿದೆ. ರಾಜೇಂದ್ರರವರ ಮುಂದಿನ ರಾಜಕೀಯ ಭವಿಷ್ಯವು ಮೇಲ್ಮನೆ ಸದಸ್ಯನಾಗುವುದರ ಮೂಲಕ ಪಾದಾರ್ಪಣೆಯನ್ನು ಮಾಡಿದ್ದಾರೆ, ಅವರ ತಂದೆಯಾದ ಕೆ.ಎನ್.ರಾಜಣ್ಣನವರೂ ಸಹ ಮೇಲ್ಮನೆ ಸದಸ್ಯನಾಗುವುದರಿಂದಲೇ ತಮ್ಮ ರಾಜಕೀಯವನ್ನು ಪ್ರಾರಂಭಿಸಿದ್ದರು ಎನ್ನಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!