ಕೊನೆಗೂ ಋಣ ತೀರಿಸಿದ ಜಿ.ಎಸ್.ಬಿ

ತುಮಕೂರು : ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ತುಮಕೂರು ಸಂಸದರಾದ ಶ್ರೀಯುತ ಜಿ.ಎಸ್.ಬಸವರಾಜುರವರು ಕೆ.ಎನ್.ರಾಜಣ್ಣನವರ ಋಣ ತೀರಿಸದ್ದಾರೆ ಎನ್ನಬಹುದಾಗಿದೆ, ಏಕೆಂದರೆ ತಾವು ಮೊದಲಿಂದಲೂ ರಾಜಣ್ಣನವರಿಗೆ ಯಾವುದೇ ರೀತಿಯ ಋಣ ತೀರಿಸುವ ಅವಶ್ಯಕತೆ ಇಲ್ಲ, ತಾವು ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ ಎಂದು ಹೇಳಿಕೆಗಳನ್ನು ನೀಡಿದ್ದರೂ ಸಹ, ತಾವು ಪಕ್ಷದ ಪ್ರಚಾರ ಸಂದರ್ಭಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದೇ ಇದ್ದದ್ದು ಎಲ್ಲರಿಗೂ ಒಂದು ಕಡೆ ಸಂಶಯ ಬಂದಿತ್ತು, ಆದರೂ ಅವರು ಮತದಾನದ ದಿನ ತಾನು ರಾಜಣ್ಣ ಸ್ನೇಹಿತರಾಗಿರಬಹುದು ಎನ್ನುವ ಮಾತ್ರಕ್ಕೆ ಅವರು ನನಗೆ ಸಹಾಯ ಮಾಡಿರಬಹುದು ಆದರೂ ನಾನು ನನ್ನ ಪಕ್ಷಕ್ಕೆ ಎಂದಿಗೂ ದ್ರೋಹ ಮಾಡುವುದಿಲ್ಲ ಎನ್ನುವ ಮಾತುಗಳನ್ನಾಡಿದ್ದರು, ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿರುವ ಈ ಹಿನ್ನಲೆಯಲ್ಲಿ ಪಕ್ಷದ ಹಿನ್ನಡೆಯನ್ನು ನೋಡುತ್ತಿದ್ದರೆ, ಎಲ್ಲೋ ಏನೋ ಸಂಶಯಗಳು ಇದೀಗ ಹೊರ ಬಂದಿದೆ, ಇಲ್ಲೇ ಗೊತ್ತಾಗುತ್ತದೆ, ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮಾನ್ಯ ಸಂಸದರು ಎಷ್ಟು ಮಾತ್ರ ಶ್ರಮ ವಹಿಸಿದ್ದಾರೆ ಎನ್ನುವುದು.

ಯಾವುದೇ ಏನೇ ಆದರೂ ತೆರೆ-ಮರೆಯಲ್ಲಿ ಕೊಟ್ಟ ಮಾತನ್ನು ಮಾನ್ಯ ಸಂಸದರು ಉಳಿಸಿಕೊಂಡಿದ್ದಾರೆ ಎನ್ನಬಹುದು ಅಲ್ಲವೇ? ಎಷ್ಟೇ ಆದರೂ ಹಳೇ ದೋಸ್ತಿ, ಹಳೇ ಪಕ್ಷದ ಜೊತೆಗಾರ, ತಮ್ಮ ಗೆಲುವಿಗೆ ಶ್ರಮ ವಹಿಸಿದ ಸರದಾರ, ಸಹಕಾರಿ ಧುರೀಣರ ಮಗನ ಗೆಲುವಿಗೆ ಮಾನ್ಯ ಸಂಸದರ ಶ್ರಮ ಅತ್ಯಮೂಲವಾಗಿದೆ ಎನ್ನಬಹುದು. ಇನ್ನುಳಿದಂತೆ ಹೊಸ ಮುಖ, ಮಾಜಿ ಸರ್ಕಾರಿ ಅಧಿಕಾರಿ ಈ ಚುನಾವಣೆಯಲ್ಲಿ ತಮ್ಮ ಗೆಲುವಿನ ಸನ್ನಿಹದವರೆವಿಗೂ ಬಂದಿರುವುದು ಶ್ಲಾಘನೀಯ ಸಂಗತಿ. ಏಕೆಂದರೆ ಯಾವುದೇ ರಾಜಕೀಯ ಗಂಧ ಗೊತ್ತಿಲ್ಲದ ವ್ಯಕ್ತಿ ಇಷ್ಟು ಮತಗಳನ್ನು ಪಡೆದಿರುವುದು ಮಾನ್ಯ ಮಾಜಿ ಪ್ರಧಾನಿಗಳು ಹೆಚ್.ಡಿ.ದೇವೇಗೌಡರಿಗೆ ಒಂದು ಕಡೆ ಸಂತೋಷದ ವಿಚಾರವೇ ಎನ್ನಬಹುದು, ಒಬ್ಬ ಮಾಜಿ ಅಧಿಕಾರಿಯನ್ನು ಗೆಲುವಿನ ಸನ್ನಿಹದವರೆವಿಗೂ ತಂದಿರುವ ಕೀರ್ತಿ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರಿಗೆ ಸಲ್ಲುತ್ತದೆ ಎನ್ನಬಹುದು.

ಒಟ್ಟಾರೆಯಾಗಿ ಕೊನೆಗೂ ತಮ್ಮ ಸ್ನೇಹಿತನ ಮಗನಿಗಾಗಿ ತಮ್ಮ ಪಕ್ಷ ನಿಷ್ಠೆಯನ್ನು ಮರೆತು, ತಮ್ಮ ಗೆಲುವಿಗೆ ಸಹಕರಿಸಿದವರಿಗೆ ಈ ಮೂಲಕ ಋಣವನ್ನು ಸಂಸದರು ತೀರಿಸಿದ್ದಾರೆ ಎನ್ನಬಹುದು ಅಲ್ಲವೇ! ಯಾವುದು ಏನೇ ಇರಲಿ, ಒಟ್ಟಾರೆಯಾಗಿ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳುವಲ್ಲಿ ಕೆ.ಎನ್.ರಾಜಣ್ಣನವರು ಗೆದ್ದಿದ್ದಾರೆ. ರಾಜೇಂದ್ರ ರಾಜಣ್ಣನವರು ಮೇಲ್ಮನೆ ಸದಸ್ಯರಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಮುಂದುವರೆಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!