ದಿನ ಭವಿಷ್ಯ: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಯ ಭವಿಷ್ಯ

ಮೇಷ : ವ್ಯಾಪಾರ ಅನಿರೀಕ್ಷಿತ ತಿರುವು ಪಡೆದು ಅಭಿವೃದ್ಧಿಯ ಪಥಕ್ಕೆ ಬರಲಿದೆ. ಕೃಷಿ ಉತ್ಪನ್ನ ನಿರೀಕ್ಷಿತ ಆದಾಯದಲ್ಲಿ ಲಾಭ. ಕೋರ್ಟ್, ಕಚೇರಿ ಆಗಬೇಕಾದ ಕೆಲಸಗಳಲ್ಲಿ ಯಶಸ್ಸುಗಳಿಸುವಿರಿ. ಸಂಗಾತಿಯ ಸಲಹೆಗಳು ಪಾಲಿಸಿದರೆ ಲಾಭ.

ವೃಷಭ : ನಿಮ್ಮಲ್ಲಿ ಕೆಲವರು ವಿರುದ್ಧ ಲಿಂಗದ ವ್ಯಕ್ತಿಯತ್ತ ಆಕರ್ಷಿತರಾಗಬಹುದು. ಅನಗತ್ಯ ಒತ್ತಡವು ನಿಮಗೆ ದೈಹಿಕ ಅಸ್ವಸ್ಥತೆಯನ್ನು ನೀಡುತ್ತದೆ ಆದ್ದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಉದ್ಯಮದಲ್ಲಿ ಇರುವವರು ವಿದೇಶಿ ಮೂಲದಿಂದ ಲಾಭ ಸಂಪಾದಿಸಲಿದ್ದೀರಿ.

ಮಿಥುನ : ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಲಾಭವನ್ನೇ ಕಾಣುವ ನೀವು ಸಂಜೆ ವೇಳೆಗೆ ನಷ್ಟ ಅನುಭವಿಸಲಿದ್ದೀರಿ. ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಲಾಭವಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.

ಕಟಕ : ಇಂದು ಕೆಲಸದಲ್ಲಿ ಉತ್ತಮ ದಿನ, ಕೆಲಸ ಮಾಡಿದರೆ ನಿಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ಪಡೆಯಬಹುದು. ಸರ್ಕಾರಿ ಕೆಲಸಗಳನ್ನು ಮಾಡುವ ಜನರಿಗೆ ಅಪೇಕ್ಷಿತ ವರ್ಗಾವಣೆ ಅಥವಾ ಬಡ್ತಿ ಪಡೆಯುವ ಬಲವಾದ ಸಾಧ್ಯತೆಯಿದೆ.

ಸಿಂಹ : ಪತಿ-ಪತ್ನಿ ಕದನ ವಿಕೋಪಕ್ಕೆ ತಿರುಗುವದು. ಸರಕಾರಿ ಕೆಲಸಕಾರ್ಯಗಳಲ್ಲಿ ಮಧ್ಯಸ್ಥಿಕೆಯಿಂದ ಅಪಜಯ. ಆತ್ಮೀಯರೊಡನೆ ಆಕಸ್ಮಿಕವಾಗಿ ಹೊರಬರುವ ಕೆಲವು ಮಾತುಗಳಿಂದ ಕ್ಲೇಶಗಳು ಸೃಷ್ಟಿಯಾಗಬಹುದು ಎಚ್ಚರವಿರಲಿ. ನಿಮ್ಮ ನಡೆ ಸೌಹಾರ್ದಯುತ ವಾಗಿರುವುದು ಒಳ್ಳೆಯದು.

ಕನ್ಯಾ: ಕುಟುಂಬದಲ್ಲಿ ಶುಭ ವಾರ್ತೆಯೊಂದನ್ನು ಕೇಳಲಿದ್ದೀರಿ. ಒಡಹುಟ್ಟಿದವರ ಜೊತೆ ಸಂಬಂಧ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಯೋಜನೆಗಳಿಗೆ ಹೂಡಿಕೆ ಮಾಡಲಿದ್ದೀರಿ.

ತುಲಾ: ನಿಮ್ಮ ಆರ್ಥಿಕ ಪರಿಸ್ಥಿತಿ ಈ ವಾರ ಕಠಿಣವಾಗಲಿದೆ. ಇದರಿಂದ ಹಲವಾರು ಸಮಸ್ಯೆಗಳು ಬರಲಿದೆ. ಈ ಸ್ಥಿತಿಯಿಂದ ಮುಕ್ತಿ ಪಡೆಯಲು ಶ್ರೀಕೃಷ್ಣನನ್ನು ಆರಾಧಿಸಿ, ಮತ್ತು ಅವನು ನಿಮ್ಮನ್ನು ಎಲ್ಲಾ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತಾನೆ.

ವೃಶ್ಚಿಕ: ಮದುವೆಯ ಚಿಂತನೆ, ಮನೆಗಳಿಗೆ ಬಾಡಿಗೆದಾರರು ಬರುತ್ತಿಲ್ಲ ಎಂಬ ಚಿಂತನೆ, ವ್ಯಾಪಾರ ವಹಿವಾಟುಗಳಲ್ಲಿ ಮಂದಗತಿಯ ಚೇತರಿಕೆ, ಈ ರಾಶಿಯವರಿಗೆ ಅದೃಷ್ಟದ ಸಮಯ ಬಂದಿದೆ, ಕಲಾವಿದರಿಗೆ ಹೆಚ್ಚಿನ ಬೇಡಿಕೆ ಸಾಧ್ಯತೆ.

ಧನು: ಮಾನಸಿಕವಾಗಿ ನೀವು ಕುಗ್ಗಿ ಹೋಗುವಂತ ಘಟನೆಯೊಂದು ಜರುಗಲಿದೆ. ಲೇವಾದೇವಿ ವ್ಯವಹಾರದಲ್ಲಿ ನಿಮಗೆ ಲಾಭ ಕಾದಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದಾರೆ. ಮನೆಯ ಕಿರಿಯ ಸದಸ್ಯರು ಸಾಧನೆ ಮಾಡಲಿದ್ದಾರೆ.

ಮಕರ: ರಾಜಕೀಯ ವ್ಯಕ್ತಿಗಳಿಗೆ ಉನ್ನತ ಪದವಿ ಲಭ್ಯ. ಮಹಿಳಾ ರಾಜಕಾರಣಿಗಳಿಗೆ ಸ್ಥಾನಮಾನಗಳು ಬೇಡಿಕೆ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ಮನೆಯಲ್ಲಿ ಚರ್ಚೆ. ಪಾಲುದಾರಿಕೆ ಆಗಬಹುದು. ಸಂಯಮದಿಂದ ಇದ್ದಲ್ಲಿ ಸುಗಮವಾಗಿ ಬಗೆಹರಿಯುತ್ತದೆ.

ಕುಂಭ: ನೀವು ಯಶಸ್ವಿಯಾಗುವ ಸಾಧ್ಯತೆಯಿದೆ. ಅಸ್ತಿತ್ವದಲ್ಲಿರುವ ಉದ್ಯೋಗದಲ್ಲಿ ಬಡ್ತಿ ಮತ್ತು ಹೆಚ್ಚಳಕ್ಕೆ ಅವಕಾಶಗಳಿವೆ. ವ್ಯಾಪಾರಸ್ಥರು ಈ ತಿಂಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಇದು ಅತ್ಯುತ್ತಮ ತಿಂಗಳು.

ಮೀನ: ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಲೇಬೇಕು. ಹೊರಗಡೆ ಆಹಾರವನ್ನು ಸೇವನೆ ಮಾಡಬೇಡಿ. ಭೂ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಸಂಗೀತಗಾರರಿಗೆ ಒಳ್ಳೆಯ ಯೋಗವಿದೆ. ವ್ಯಾಪಾರಸ್ಥರಿಗೆ ಲಾಭವಿದೆ.

Leave a Reply

Your email address will not be published. Required fields are marked *

error: Content is protected !!