ರಾಶಿ ಭವಿಷ್ಯ ದಿನಾಂಕ 11/12/2021

ಮೇಷ: ವೃತ್ತಿಯಲ್ಲಿ ಮುನಿಸಿಕೊಳ್ಳದ ಹಾಗೆ ಜಾಗ್ರತೆ ವಹಿಸಿ. ಸಹೋದರ ಸಹೋದರಿಯರಿಗೆ ಕಷ್ಟ-ಸುಖಕ್ಕೆ ಸಹಾಯ ಮಾಡುವಿರಿ. ನಿಮ್ಮ ಸುತ್ತ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತೀರಿ. ಕಾರ್ಯಯೋಜನೆಗೆ ಪೂರಕವಾದ ವಾತಾವರಣವಿದೆ.

ವೃಷಭ: ಭಾವನಾತ್ಮಕವಾಗಿ ನೀವು ತುಂಬ ಸ್ಥಿರವಾಗಿರುವುದಿಲ್ಲ – ಆದ್ದರಿಂದ ನೀವು ಇತರರ ಮುಂದೆ ಹೇಗೆ ವರ್ತಿಸುತ್ತೀರಿ ಮತ್ತು ಏನು ಹೇಳುತ್ತೀರಿ ಎನ್ನುವ ಬಗ್ಗೆ ಎಚ್ಚರದಿಂದಿರಿ. ರಾತ್ರಿಯ ವೇಳೆಯಲ್ಲಿ ಇಂದು ನೀವು ಹಣದ ಪ್ರಯೋಜನವನ್ನು ಪಡೆಯುವ ಪೂರ್ತಿ ಸಾಧ್ಯತೆ ಇದೆ.

ಮಿಥುನ: ಕೆಲಸದ ಸ್ಥಳದಲ್ಲಿ ಬಹಳ ಬುದ್ಧಿವಂತಿಕೆಯಿಂದ ವರ್ತಿಸಿ. ನಿಮ್ಮ ಅಹಂಕಾರ ಇಂದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ನಿಮ್ಮ ಅಭಿಪ್ರಾಯ ಕೇಳುವವರೆಗೆ ಏನನ್ನೂ ಮಾತನಾಡುವುದನ್ನು ತಪ್ಪಿಸಿ. ಸರ್ಕಾರಿ ಉದ್ಯೋಗಗಳಿಗಾಗಿ ಪ್ರಯತ್ನಿಸುತ್ತಿರುವವರು ತಮ್ಮ ಪ್ರಯತ್ನಗಳನ್ನು ಹೆಚ್ಚಿಸಿಕೊಳ್ಳಬೇಕು.

ಕಟಕ: ನಿಮ್ಮ ಈದಿನದ ಸಂಕಲ್ಪ ಶಕ್ತಿಯು ಹೆಚ್ಚು ಪ್ರಖರವಾಗಿದ್ದು ಮಹತ್ತರ ಕೆಲಸವನ್ನು ಗೆಲ್ಲಲಿದ್ದೀರಿ. ಆದರೆ ಅದರ ಸಾಮರ್ಥ್ಯ‌ವು ನಿಮ್ಮಲ್ಲಿ ಅಹಂಕಾರ ಬರದಂತೆ ನೋಡಿಕೊಳ್ಳಿರಿ. ಉದ್ಯೋಗದ ಸ್ಥಾನ ಬದಲಾವಣೆಯ ನಂತರ ಆರ್ಥಿಕ ಲಾಭ. ವೈದ್ಯಕೀಯ ವ್ಯಕ್ತಿಗಳಿಗೆ ಪ್ರಶಂಸೆ ಸಿಗುವುದು.

ಸಿಂಹ: ಕೆಲಸಕ್ಕೆ ಸಂಬಂಧಿಸಿದ ಒತ್ತಡ ನಿಮ್ಮನ್ನು ಸಂಪೂರ್ಣವಾಗಿ ದಣಿಸುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಘರ್ಷಣೆಯನ್ನು ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ. ನಿಮ್ಮ ಅಗತ್ಯಗಳಿಗಾಗಿ ನೀವು ಹಣವನ್ನು ಖರ್ಚು ಮಾಡಬಹುದು.

ಕನ್ಯಾ: ನಿಮ್ಮ ಉದ್ಯಮದಲ್ಲಿ ತಂದೆಯು ಮಹತ್ವದ ಪಾತ್ರ ವಹಿಸಲಿದ್ದಾರೆ. ಅನೇಕ ಅನಿರೀಕ್ಷಿತ ಘಟನೆಗಳು ನಿಮ್ಮ ಮನೆಯಲ್ಲಿ ಜರುಗಲಿದೆ. ವಕೀಲರಿಗೆ ಈ ದಿನ ಹೆಚ್ಚು ಶುಭಕಾರಿಯಾಗಿದೆ. ಹೆಚ್ಚೆಚ್ಚು ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ.

ತುಲಾ: ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವ ಮುನ್ನ ನಾಲಿಗೆ ಮೇಲೆ ಹಿಡಿತವಿರಲಿ. ಇಲ್ಲವಾದಲ್ಲಿ ನೀವೇ ಪೇಚಿಗೆ ಸಿಲುಕಲಿದ್ದೀರಿ. ಪುರೋಹಿತರಿಗೆ ಇದು ಒಳ್ಳೆಯ ದಿನವಾಗಿದೆ. ಹಿರಿಯರು ತೀರ್ಥಯಾತ್ರೆಗೆ ತೆರಳಲಿದ್ದಾರೆ.

ವೃಶ್ಚಿಕ: ಇಂದು ನಿಮಗೆ ಸರಾಸರಿ ದಿನ. ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಹೊಸ ಒಪ್ಪಂದ ಮಾಡಿಕೊಳ್ಳಲಿದ್ದರೆ, ನಿಮ್ಮ ದಾರಿಯಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು. ನೀವು ಹೆಚ್ಚು ಚಿಂತಿಸಬೇಕಿಲ್ಲವಾದರೂ, ಸೂಕ್ತ ಸಮಯ ಬಂದಾಗ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.

ಧನಸ್ಸು: ನಿಮ್ಮ ಆರ್ಥಿಕ ಸ್ಥಿತಿ ಗಟ್ಟಿಯಾಗುತ್ತದೆ, ಮನೆಯ ವಾತಾವರಣ ಶಾಂತವಾಗಿರುತ್ತದೆ. ನಿಮ್ಮ ಕಿರಿಯ ಸಹೋದರ ಅಥವಾ ಸಹೋದರಿ ಮದುವೆಗೆ ಅರ್ಹರಾಗಿದ್ದರೆ, ಇಂದು ಅವರಿಗೆ ಒಳ್ಳೆಯ ಮದುವೆಯ ಪ್ರಸ್ತಾಪ ಬರಬಹುದು.

ಮಕರ: ವಿವಾಹಿತ ಜನರು ಇಂದು ತಮ್ಮ ಮಕ್ಕಳ ಶಿಕ್ಷಣದ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಭಾವನಾತ್ಮಕ ಭರವಸೆಗಳನ್ನು ಬಯಸುವವರು ಹಿರಿಯರು ಅವರ ನೆರವಿಗೆ ಬರುವುದನ್ನು ನೋಡಬಹುದು. ತಮ್ಮ ಪ್ರೀತಿಪತ್ರರೊಡನೆ ಸಣ್ಣ ಪ್ರಯಾಣ ಕೈಗೊಳ್ಳುವವರು ಅತ್ಯಂತ ಸ್ಮರಣೀಯ ಸಮಯವನ್ನು ಹೊಂದುತ್ತಾರೆ.

ಕುಂಭ: ಅಭಿವೃದ್ಧಿದಾಯಕ ಚಟುವಟಿಕೆಗಳು. ಆರೋಗ್ಯ ದಲ್ಲಿ ಸುಧಾರಣೆ. ಸಂದಭೋìಚಿತವಾದ ಕಾರ್ಯ ವೈಖರಿ. ಉತ್ತಮ ಧನ ಲಾಭ. ವಾಕ್‌ಚತುರತೆಯಿಂದ ಜನರಂಜನೆ. ಎಲ್ಲರ ಪ್ರೀತಿ ಸಂಪಾದನೆ. ಗುರುಹಿರಿಯರ ಪ್ರೋತ್ಸಾಹ.

ಮೀನ: ಜೀವನ ಸಂಗಾತಿಯೊಂದಿಗೆ ಮುಂದುವರಿಯುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ.

Leave a Reply

Your email address will not be published. Required fields are marked *

error: Content is protected !!