ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಲೋಕಮಾನ್ಯ ತಿಲಕರುಹುಟ್ಟಿದ ಮನೆಯ ದುರುಸ್ತಿಯನ್ನು ಕೂಡಲೇ ಮಾಡಬೇಕು !

‘ಸ್ವರಾಜ್ಯ ಇದು ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ’ ಎಂಬ ಸಿಂಹಗರ್ಜನೆಯಿಂದ ಭಾರತೀಯರಲ್ಲಿ ಸ್ವರಾಜ್ಯದ ಚೇತನವನ್ನು ಜಾಗೃತಗೊಳಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರ ಆದರ್ಶವನ್ನು ಸರಕಾರ ಯುವ ಪೀಳಿಗೆಗಳ ಮುಂದೆ ಇಡಬೇಕು. ಅದಕ್ಕಾಗಿ ಅವರ ನೆನಪುಗಳ ಸಂರಕ್ಷಣೆ ಮತ್ತು ಸಂವರ್ಧನೆ ಮಾಡಬೇಕು; ಆದರೆ ದುರದೃಷ್ಟಕರ ಸಂಗತಿ ಎಂದರೆ ಮಹಾರಾಷ್ಟ್ರ ಸರಕಾರದ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ರತ್ನಾಗಿರಿಯಲ್ಲಿನ ಲೋಕಮಾನ್ಯ ತಿಲಕರ ಜನ್ಮಸ್ಥಳ ಶಿಥಿಲಾವಸ್ಥೆಯಲ್ಲಿದೆ. ಈ ಅಮೂಲ್ಯ ಸೊತ್ತಿನ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಕೂಡಲೇ ಲೋಕಮಾನ್ಯ ತಿಲಕರ ಜನ್ಮಸ್ಥಳವನ್ನು ದುರಸ್ತಿಗೊಳಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರತ್ನಾಗಿರಿಯ ಜಿಲ್ಲಾಧಿಕಾರಿ ಡಾ. ಬಿ.ಎನ್. ಪಾಟಿಲ್‌ ಇವರಲ್ಲಿ ಆಗ್ರಹಿಸಿದರು. ನವೆಂಬರ್‌ 26 ರಂದು ಸಮಿತಿಯ ನಿಯೋಗವು ಜಿಲ್ಲಾಧಿಕಾರಿ ಡಾ. ಬಿ. ಎನ್. ಪಾಟೀಲ್‌ ಅವರನ್ನು ಭೇಟಿಯಾಗಿ ಈ ಕುರಿತು ವಿವರವಾದ ಮನವಿಯನ್ನು ನೀಡಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸಂಜಯ ಜೋಶಿಯವರೊಂದಿಗೆ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದ ಶ್ರೀ. ದೇವೇಂದ್ರ ಜಾಪಡೆಕರ, ತಿಲಕ ಪ್ರೇಮಿ ಶ್ರೀ. ಶರದಚಂದ್ರ ರಾನಡೆ, ಶ್ರೀ ಶಿವಚರಿತ್ರೆ ಕಥೆಗಾರ ಶ್ರೀ. ಬಾರಸ್ಕರ್‌ ಮತ್ತು ಸನಾತನ ಸಂಸ್ಥೆಯ ಶ್ರೀ. ರಾಮಣ ಪಾಧ್ಯೆ ಉಪಸ್ಥಿತರಿದ್ದರು.

ಲೋಕಮಾನ್ಯರ ಈ ಜನ್ಮಸ್ಥಳದ ಛಾವಣಿಯ ಹಂಚು ಒಡೆದಿವೆ, ಗೋಡೆಗಳ ಮೇಲೆ ಪಾಚಿ ಬೆಳೆದಿದೆ. ಕೆಲವೆಡೆ ಗೋಡೆಗಳು ಬಿರುಕು ಬಿಟ್ಟಿವೆ. ಜನ್ಮಸ್ಥಳದ ಪ್ರವೇಶ ದ್ವಾರದ ಹೊರಗೆ ಪುರಾತತ್ವ ಇಲಾಖೆ ಫಲಕ ಹಾಕಿದ್ದು ಅದು ತುಕ್ಕು ಹಿಡಿದಿರುವುದರಿಂದ ಸರಿಯಾಗಿ ಓದಲು ಸಾಧ್ಯವಾಗುತ್ತಿಲ್ಲ. ಲೋಕಮಾನ್ಯ ತಿಲಕರು ಪ್ರತಿಮೆ ಹಾಗೂ ಚಾಮರವು ಶಿಥಿಲಗೊಂಡಿದ್ದು, ಕೆಲವೆಡೆ ಪ್ರತಿಮೆಯ ಬಣ್ಣ ಕಳೆಗುಂದಿದೆ. ಸ್ಮಾರಕಗಳ ಮೇಲ್ಛಾವಣಿಯಲ್ಲಿ ಹುಲ್ಲು ಬೆಳೆದಿದೆ. ಸಕಾಲದಲ್ಲಿ ಗಮನಹರಿಸದಿದ್ದರೆ, ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಈ ಕಟ್ಟಡದಲ್ಲಿ ಜೋಪಾನವಾಗಿಟ್ಟಿರುವ ಅಮೂಲ್ಯ ಸೊತ್ತು ಹಾಳಾಗುವ ಭೀತಿ ಎದುರಾಗಿದೆ. ಲೋಕಮಾನ್ಯರ ಪ್ರತಿಮೆಯ ಮೇಲಿರುವ ಚಾಮರದ ಕಂಬಗಳಿಗೆ ಹಾಕಿರುವ ಟೈಲ್ಸ್‌ನಲ್ಲಿ ಬಿರುಕು ಬಿಟ್ಟಿದ್ದು, ಚಾಮರದ ಬಣ್ಣ ಹಾಳಾಗಿದೆ. ಚಾಮರದ ಹಿಂದೆ ಲೋಕಮಾನ್ಯ ತಿಲಕರ ಶಿಲ್ಪಗಳು ಮುರಿದ ಸ್ಥಿತಿಯಲ್ಲಿದೆ. ದೇಶ ವಿದೇಶಗಳಿಂದ ನೂರಾರು ಪ್ರವಾಸಿಗರು ಮತ್ತು ಶಾಲೆಯ ನೂರಾರು ವಿದ್ಯಾರ್ಥಿಗಳು ಈ ಸ್ಮಾರಕಕ್ಕೆ ಭೇಟಿ ನೀಡಲು ಬರುತ್ತಾರೆ. ಅವರಿಗೆ ಮಾಹಿತಿ ಪುಸ್ತಕ ಇಲ್ಲ. ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ‘ಸಿಸಿಟಿವಿ’ ಇಲ್ಲ, ವಾಹನ ನಿಲುಗಡೆ (ಪಾರ್ಕಿಂಗ್) ಸೌಲಭ್ಯ ಇಲ್ಲ, ಇಂತಹ ಹಲವು ಕೊರತೆಗಳು ಇಲ್ಲಿವೆ. ಪ್ರವಾಸಿಗರು ಮುರಿದು ಬಿದ್ದ ಅಥವಾ ಭಗ್ನಗೊಂಡಿರುವ ಜನ್ಮಸ್ಥಳವನ್ನು ನೋಡಬೇಕಾಗುತ್ತಿದೆ. ಸ್ವಾತಂತ್ರ್ಯ ಹೋರಾಟದ ಈ ಮಹಾನ್‌ ನಾಯಕನ ಜನ್ಮಸ್ಥಳವನ್ನು ಸರಕಾರ ಕೂಡಲೇ ದುರಸ್ತಿ ಮಾಡಬೇಕು, ಎಂದು ಎಲ್ಲಾ ದೇಶಭಕ್ತರು ಒತ್ತಾಯಿಸುತ್ತಾರೆ.

ಈ ಸ್ಮಾರಕವನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರದ ಪುರಾತತ್ವ ಇಲಾಖೆ ಪರಿಶೀಲನೆ ನಡೆಸಿದೆಯೇ, ಎಂದು ಪ್ರಶ್ನೆ ಕೇಳಿದಾಗ, ಪರಿಶೀಲನೆ ನಡೆಸಿಲ್ಲ ಎಂದು ಉತ್ತರಿಸಿದೆ. ಇದರಿಂದ ಸ್ಮಾರಕದ ಬಗ್ಗೆ ಸರಕಾರದ ನಿರಾಸಕ್ತಿ ತೋರಿಸುತ್ತದೆ. ಲೋಕಮಾನ್ಯ ತಿಲಕರ ಜನ್ಮಸ್ಥಳವನ್ನು ಕೂಡಲೇ ರಕ್ಷಿಸಿ ಹಾಗೂ ಸಂವರ್ಧನೆ ಮಾಡಬೇಕು. ಅದೇ ರೀತಿ ಇದನ್ನು ‘ರಾಷ್ಟ್ರೀಯ ಸ್ಮಾರಕ’ ಎಂದೂ ಘೋಷಿಸಬೇಕು. ಅಲ್ಲಿ ಲೋಕಮಾನ್ಯ ತಿಲಕರ ಜೀವನ ಚರಿತ್ರೆಯನ್ನು ತೋರಿಸಲು ವ್ಯವಸ್ಥೆ ಮಾಡಬೇಕು. ಜನ್ಮಸ್ಥಳ ಮಾಹಿತಿ ಪುಸ್ತಕ ಮತ್ತು ಲೋಕಮಾನ್ಯರು ಬರೆದಿರುವ ಗ್ರಂಥಗಳ ಪ್ರತಿಗಳು, ಲೋಕಮಾನ್ಯ ತಿಲಕರ ಅಪರೂಪದ ಛಾಯಾಚಿತ್ರಗಳು ಇತ್ಯಾದಿ ಸಾಹಿತ್ಯಗಳು ಇಲ್ಲಿ ಇಡಬೇಕು, ಎಂದು ಈ ಮನವಿಯಲ್ಲಿ ಕೋರಲಾಗಿದೆ.
ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ (ಸಂ : 99879 66666)

Leave a Reply

Your email address will not be published. Required fields are marked *

error: Content is protected !!