ತುಮಕೂರು : ಈ ವರ್ಷದ ಕಡೇ ಕಾರ್ತಿಕ ಶುಕ್ರವಾರದ ಅಂಗವಾಡಿ ತುಮಕೂರಿನ ಚಿಕ್ಕಪೇಟೆಯ ವಾಸವಿ ಮಹಿಳಾ ಮಂಡಳಿಯ ವತಿಯಿಂದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಮಣಿದೀಪವರ್ಣ ಪೂಜೆಯೆಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಮುತ್ತೈದೆಯರು, ಹೆಣ್ಣುಮಕ್ಕಳು ಭಾಗವಹಿಸಿ, ಲೋಕ ಕಲ್ಯಾಣಕ್ಕಾಗಿ ವಿಶಿಷ್ಠ ರೀತಿಯಲ್ಲಿ ಅಲಂಕರಿಸಿದ್ದ ಮಣ್ಣಿನ ದೀಪಗಳನ್ನು ಹಚ್ಚುವುದರೊಂದಿಗೆ ಈ ಪೂಜೆಯನ್ನು ನೆರವೇರಿಸಿದರು.
ಈ ಪೂಜೆಯನ್ನು ಮತ್ತು ಈ ಪೂಜೆಯ ಮಹತ್ವ ಮತ್ತು ವೈಶಿಷ್ಠತೆಯನ್ನು ದೇವಸ್ಥಾನದ ಪುರೋಹಿತರಾದ ಶ್ರೀ ಕೆ.ಮನೋಜ್ರವರು ನೆರವೇರಿಸಿಕೊಟ್ಟು, ಕಾರ್ಯಕ್ರಮವನ್ನು ವಿಶಿಷ್ಠ ಪೂರ್ಣವಾಗಿ ಆಚರಿಸಲು ವಿವಿಧ ಸಲಹೆಗಳನ್ನು ನೀಡಿ, ಕಾರ್ಯಕ್ರಮವನ್ನು ವೈಭವವಾಗಿ ಆಚರಿಸಲು ಅನುವಾದರು.
ಪೂಜಾ ಕಾರ್ಯಕ್ರಮವನ್ನು ನಡೆಸಲು ಹಲವಾರು ಜನರ ದಾನಿಗಳ ಸಹಕಾರದಿಂದ ನೆರವೇರಿಸಲಾಯಿತು, ಆದ ಪ್ರಯುಕ್ತ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದವರಿಗೆ ಮಹಿಳಾ ಮಂಡಳಿಯ ವತಿಯಿಂದ ಕಾರ್ಯಕ್ರಮದ ಕೊನೆಯಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ, ಸಹಕರಿಸಿದವರಿಗೆ ಧನ್ಯವಾದಗಳನ್ನು ಸೂಚಿಸಿದರು.
ಪೂಜಾ ಕಾರ್ಯಕ್ರಮದ ರೂಪುರೇಷೆ, ಸಕಲ ವ್ಯವಸ್ಥೆಗಳನ್ನು ನೆರವೇರಿಸಲು ಅನುವಾದ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮೀ ಅಮರ್ನಾಥ್ರವರಿಗೆ ಮಹಿಳಾ ಮಂಡಳಿಯ ಇತರೆ ಎಲ್ಲಾ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿ, ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಸದಸ್ಯರುಗಳಾದ ಶ್ರೀಮತಿ ಸೌಮ್ಯಗೋಪಾಲ್, ಶ್ರೀಮತಿ ಗೀತಾ ಬಾಲರಾಜು, ಶ್ರೀಮತಿ ನಿರ್ಮಲಾವೇಣುಗೋಪಾಲ್, ಶ್ರೀಮತಿ ದೀಪಾ ಸತೀಶ್ ಹಾಗೂ ಇತರರು ಉಪಸ್ಥಿತರಿದ್ದರು.