ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೂತನ ಕಾರ್ಯಪಡೆ ಅಸ್ತಿತ್ವಕ್ಕೆ

ತುಮಕೂರು: ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ನೂತನ ಕಾನೂನು ಸ್ವಯಂಸೇವಕರ ಕಾರ್ಯಪಡೆಯನ್ನು ರಚಿಸಿದೆ.


ಕಾರ್ಯಪಡೆಯ ಸದಸ್ಯರಾಗಿ ಕೆ.ಗಣೇಶ್ ಪ್ರಸಾದ್(ಎನ್.ಜಿ.ಓ), ಡಾ||ಸಂಜಯ್ ನಾಯಕ್(ಎನ್.ಜಿ.ಓ) ಡಾ||ಹೆಚ್.ವಿ.ಜಯಪ್ರಕಾಶ್(ಎನ್.ಸಿ.ಸಿ) ಎಲ್.ಜಗದೀಶ್(ನಿವೃತ್ತಡಿವೈಎಸ್.ಪಿ) ಕೆ.ಬಿ.ಚಂದ್ರಚೂಡ(ಪತ್ರಕರ್ತರು), ಎಂ.ಇ.ನಿಜಲಿಂಗಪ್ಪ(ರೋಟರಿ), ಕೆ.ಬಿ.ಚಂದ್ರಶೇಖರ್(ಬ್ಯಾಂಕ್), ಶಿವಬಸಪ್ಪ(ಬ್ಯಾಂಕ್), ಶ್ರೀಮತಿ ಸುಧಾ.ಬಿ.ಸಿ (ಉನ್ನತಶಿಕ್ಷಣ), ಶ್ರೀಮತಿ ಪೂರ್ಣಿಮ(ಸಮಾಜಸೇವಕರು) ಶ್ರೀಮತಿ ಕುಮುದಮ್ಮ (ನಿವೃತ್ತ ಬಿ.ಇ.ಓ) ಹೀಗೆ ಹಲವು ಸಂಘ-ಸಂಸ್ಥೆಗಳು, ಪತ್ರಕರ್ತರು, ಪೋಲೀಸ್ ಅಧಿಕಾರಿಗಳು, ಬ್ಯಾಂಕ್, ರೋಟರಿ, ಲಯನ್ಸ್ ಕ್ಲಬ್, ಸಮಾಜಸೇವೆ, ಆರೋಗ್ಯ ಇಲಾಖೆ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ಕೆಲಸ ನಿರ್ವಹಿಸುವವರನ್ನು ನೇಮಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಘವೇಂದ್ರ ಶೆಟ್ಟಿಗಾರ್ ರವರು ತಿಳಿಸಿದ್ದಾರೆ.


ಅವರು ಇಂದು ನೂತನ ಕಾರ್ಯಪಡೆಯ ಸದಸ್ಯರ ಪ್ರಥಮ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಮಾಜದ ಎಲ್ಲ ಸ್ಥರದ ಜನರ ಕಷ್ಟ-ಸುಖಗಳಲ್ಲಿ ನಾವು ಭಾಗಿಯಾಗಬೇಕು,ಜನರ ಸಂಕಷ್ಟಗಳನ್ನು ಅರಿತು ಅವರ ನೆರವಿಗೆ ಧಾವಿಸಬೇಕು ಇದು ನಮ್ಮ ಗುರಿಯಾಗಿರಬೇಕು ಯಾರೂ ಸಹ ಸ್ವಾರ್ಥಕ್ಕೆ ಬದುಕಬಾರದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯವನ್ನು ಕಾರ್ಯಪಡೆಯ ಎಲ್ಲ ಸದಸ್ಯರು ಮಾಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತಾಧಿಕಾರಿ ನರಸಿಂಹಪ್ಪ,ಸಿಬ್ಬಂದಿಗಳಾದ ರವಿ,ರೇಣುಕಯ್ಯ,ವೇಣು,ಗಿರೀಶ್,ಶ್ರೀಮತಿ ಕೃಷ್ಣವೇಣಿ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!