ಸಕಾರಾತ್ಮಕ ಪ್ರಭಾವಲಯವಿರುವ ಪಾನೀಯಗಳು ನಮ್ಮ ಮೇಲೆ ಗಮನಾರ್ಹವಾದ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಇದರಿಂದ ದೈಹಿಕ ಮತ್ತು ಮಾನಸಿಕ ಎರಡೂ ಮಟ್ಟಗಳಲ್ಲಿ ಆರೋಗ್ಯ ಸುಧಾರಣೆಯಾಗುತ್ತದೆ ಮತ್ತು ರೋಗಗಳಾಗುವ ಅಪಾಯ ಕಡಿಮೆಯಾಗುತ್ತದೆ, ಜೊತೆಗೆ ನಕಾರಾತ್ಮಕತೆ, ತೊಂದರೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ ಕ್ಲಾರ್ಕ್ ಪ್ರತಿಪಾದಿಸಿದರು. ಅವರು ಯುನೈಟೆಡ್ ಕಿಂಗಡಮ್‌ನ ಲಂಡನ್‌ನಲ್ಲಿ ಆಯೋಜಿಸಲಾಗಿದ್ದ ’17 ನೇ ಇಂಟರನ್ಯಾಶನಲ್ ಕಾನ್ಫರೆನ್ಸ್ ಆನ್ ನ್ಯುಟ್ರಿಶನ್ ಆಂಡ್ ಹೆಲ್ತ’ ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತನ್ನು ‘ಅಲೈಡ್ ಅಕಾಡೆಮಿಸ್, ಯು.ಕೆ.’ ಯು ಆಯೋಜಿಸಿತ್ತು. ಶ್ರೀ. ಕ್ಲಾರ್ಕ್ ಇವರು ‘ಪಾನೀಯಗಳಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದಾಗುವ ಪರಿಣಾಮ’ ಈ ಶೋಧಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಇವರು ಈ ಪ್ರಬಂಧದ ಲೇಖಕರಾಗಿದ್ದಾರೆ ಹಾಗೂ ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.
ಮಹರ್ಷಿ ಅಧ್ಯಯನ ವಿಶ್ವವಿದ್ಯಾಲಯದ ವತಿಯಿಂದ ಇದು 84 ನೇ ಪ್ರಸ್ತುತಿಯಾಗಿತ್ತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಇದುವರೆಗೆ 15 ರಾಷ್ಟ್ರೀಯ ಮತ್ತು 68 ಅಂತಾರಾಷ್ಟ್ರೀಯ ವೈಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ಈ ಪೈಕಿ 9 ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಕ್ಕೆ ‘ಅತ್ಯುತ್ತಮ ಪ್ರಶಸ್ತಿ’ ಲಭಿಸಿದೆ.
1. ಶ್ರೀ. ಕ್ಲಾರ್ಕ್ ಇವರು ತಮ್ಮ ಮಂಡನೆಯಲ್ಲಿ ಪಾನೀಯಗಳಿಗೆ ಸಂಬಂಧಿತ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಈ ಮುಂದಿನ ಸಂಶೋಧನೆಯನ್ನು ಪ್ರಸ್ತುತಪಡಿಸಿದರು. ‘ಆಹಾರ ಮತ್ತು ಪಾನೀಯಗಳಲ್ಲಿ ಸಕಾರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳು ಇರುತ್ತವೆ. ಇದರಿಂದ ಅವುಗಳನ್ನು ಸೇವಿಸಿದ ನಂತರ ವ್ಯಕ್ತಿಯ ಪ್ರಭಾವಲಯದ ಮೇಲೆ ವೇಗವಾಗಿ ಅವುಗಳ ಪರಿಣಾಮವಾಗುತ್ತದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು 8 ಪಾನೀಯಗಳಿಂದ ವ್ಯಕ್ತಿಯ ಪ್ರಭಾವಲಯದ ಮೇಲಾಗುವ ಸೂಕ್ಷ್ಮ ಪರಿಣಾಮಗಳನ್ನು ಅಧ್ಯಯನ ಮಾಡಿತು. ಶೇ. 11.4 ರಷ್ಟು ಆಲ್ಕೋಹಾಲ್ ಇರುವ ರೆಡ್ ವೈನ್‌ನ ಪ್ರಭಾವಳಿಯು ಅತ್ಯಂತ ನಕಾರಾತ್ಮಕವಾಗಿತ್ತು. ಇದರ ನಂತರ ಕ್ರಮವಾಗಿ ವಿಸ್ಕಿ, ಬಿಯರ್ ಮತ್ತು ಕೋಲಾ ಈ ಪಾನಿಯಗಳು ನಕಾರಾತ್ಮಕ ಪ್ರಭಾವಲಯವನ್ನು ಹೊಂದಿದ್ದವು. ಮುಚ್ಚಿದ ಬಾಟಲಿಯಲ್ಲಿನ ನೀರಿನ ಪ್ರಭಾವಲಯವು ಸಹ ನಕಾರಾತ್ಮಕವಾಗಿತ್ತು. ಎಳನೀರು, ಕಿತ್ತಳೆ ರಸ, ಹಸುವಿನ ಹಾಲು ಮತ್ತು ಆಧ್ಯಾತ್ಮಿಕ ಸಂಶೋಧನಾ ಕೇಂದ್ರದ ನೀರು ಇವುಗಳಲ್ಲಿ ಯಾವುದೇ ನಕಾರಾತ್ಮಕ ಪ್ರಭಾವಲಯ ಇರಲಿಲ್ಲ, ಬದಲಾಗಿ ಸಕಾರಾತ್ಮಕ ಪ್ರಭಾವಲಯವೇ ಇತ್ತು.
2. ಮುಂಬಯಿನ ಒಂದೇ ಪ್ರದೇಶದ ಎರಡು ಮನೆಗಳ ನೀರಿನ ಮಾದರಿಗಳ ಅಧ್ಯಯನವು ಮಾಡಿದ ನಂತರ, ‘ಯಾವ ಮನೆಯಲ್ಲಿ ವ್ಯಕ್ತಿ ಆಧ್ಯಾತ್ಮಿಕವನ್ನು ಸಾಧನೆ ಮಾಡುತ್ತಿದ್ದನೋ ಆ ಮನೆಯಲ್ಲಿನ ನೀರಿನ ಪ್ರಭಾವಲಯ ಸಕಾರಾತ್ಮಕವಿತ್ತು ಹಾಗೂ ಯಾವ ಮನೆಯಲ್ಲಿ ಯಾರೂ ಆಧ್ಯಾತ್ಮಿಕ ಸಾಧನೆ ಮಾಡುತ್ತಿರಲಿಲ್ಲವೋ, ಅಲ್ಲಿಯ ನೀರಿನ ಪ್ರಭಾವಲಯವು ನಕಾರಾತ್ಮಕವಾಗಿತ್ತು.’ ಆದ್ದರಿಂದ ಮನೆಯಲ್ಲಿನ ಸಾತ್ತ್ವಿಕ ವಾತಾವರಣದ ಸಕಾರಾತ್ಮಕ ಪರಿಣಾಮ ನೀರಿನ ಮೇಲೆಯೂ ಆಗುತ್ತದೆ, ಎಂಬುದು ಕಂಡು ಬಂದಿತು.
3. ಒಂದು ಪರೀಕ್ಷೆಯಲ್ಲಿ, ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಈ ಇಬ್ಬರಿಗೆ ಪ್ರತಿದಿನ ಒಂದು ಪಾನೀಯದಂತೆ ಎಂಟು ವಿಭಿನ್ನ ಪಾನೀಯಗಳನ್ನು ಕುಡಿಯಲು ನೀಡಲಾಗಿತ್ತು. ಅವರಿಬ್ಬರು ಪ್ರತಿದಿನ ಪಾನೀಯ ಕುಡಿದ ನಂತರ 5 ನಿಮಿಷಕ್ಕೆ ಮತ್ತು 30 ನಿಮಿಷಗಳ ನಂತರ ‘ಯೂನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಮೂಲಕ ಅವರ ನಿರೀಕ್ಷಣೆ ಮಾಡಲಾಯಿತು. ಪರೀಕ್ಷೆಯಿಂದ ಸಿಕ್ಕಿದ ನಿಷ್ಕರ್ಷದ ಪ್ರಕಾರ, ವ್ಯಕ್ತಿಯ ಪ್ರಭಾವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಪಾನೀಯಗಳ ಪೈಕಿ ಗೋವಿನ ಹಾಲನ್ನು ಕುಡಿದ ನಂತರ ಇಬ್ಬರ ಸಕಾರಾತ್ಮಕ ಪ್ರಭಾವಳಿಯು ಶೇ. 500 ರಿಂದ 600 ರಷ್ಟು ಹೆಚ್ಚಾಯಿತು ಮತ್ತು ನಕಾರಾತ್ಮಕ ಪ್ರಭಾವಲಯವು ಸುಮಾರು ಶೇ. 91 ರಷ್ಟು ಕಡಿಮೆಯಾಯಿತು. ಅಂದರೆ ಇಬ್ಬರ ಪ್ರಭಾವಲಯದ ಮೇಲೆ ಗೋವಿನ ಹಾಲಿನಿಂದ ಅತಿ ಹೆಚ್ಚು ಸಕಾರಾತ್ಮಕ ಪರಿಣಾಮವಾಯಿತು. ಎಳನೀರು ಕುಡಿದ ನಂತರ ಒಬ್ಬರ ಸಕಾರಾತ್ಮಕ ಪ್ರಭಾವಳಿ ಶೇ. 900 ಮತ್ತು ಇನ್ನೊಬ್ಬರದ್ದು ಶೇ. 291 ರಷ್ಟು ಹೆಚ್ಚಾಯಿತು. ಕಿತ್ತಳೆ ರಸವನ್ನು ಕುಡಿದ ನಂತರ ಸಕಾರಾತ್ಮಕ ಪ್ರಭಾವಲಯವು ಶೇ. 358 ರಷ್ಟು ಹೆಚ್ಚಾಯಿತು ಮತ್ತು ನಕಾರಾತ್ಮಕ ಪ್ರಭಾವಲಯವು ಶೇ. 85 ರಷ್ಟು ಕಡಿಮೆಯಾಯಿತು. ಆಧ್ಯಾತ್ಮಿಕ ಸಂಶೋಧನಾ ಕೇಂದ್ರದಲ್ಲಿನ ನೀರಿನಿಂದ ನಕಾರಾತ್ಮಕ ಪ್ರಭಾವಲಯವು ಗಣನೀಯವಾಗಿ ಕಡಿಮೆ ಆಯಿತು.ಪ್ರಭಾವಲಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವ ಪೈಕಿ ವಿಸ್ಕಿ, ಬಿಯರ್ ಮತ್ತು ವೈನ್ ನಂತಹ ಆಲ್ಕೊಹಾಲ್ ಇರುವ ಪಾನೀಯಗಳಿಂದ ಪರೀಕ್ಷಣೆಯ ಇಬ್ಬರೂ ವ್ಯಕ್ತಿಯ ಸಕಾರಾತ್ಮಕ ಪ್ರಭಾವಲಯವು ಪಾನೀಯ ಕುಡಿದು 5 ನಿಮಿಷಗಳಲ್ಲಿ ಸಂಪೂರ್ಣವಾಗಿ ನಾಶವಾಯಿತು. ಅವರ ಮೇಲೆ ಬಿಯರ್‌ನಿಂದಾದ ನಕಾರಾತ್ಮಕ ಪರಿಣಾಮ ಅತ್ಯಧಿಕವಾಗಿತ್ತು. ಬಿಯರ್ ಕುಡಿದ ನಂತರ ಇಬ್ಬರಲ್ಲಿ ಒಬ್ಬರ ನಕಾರಾತ್ಮಕ ಪ್ರಭಾವಳಿ ಶೇ. 5,000 ಹೆಚ್ಚಾಯಿತು. ವೈನ್ ಕುಡಿದನಂತರ 30 ನಿಮಿಷಗಳ ಪರೀಕ್ಷಣೆಯಲ್ಲಿ ಮಹಿಳೆಯ ನಕಾರಾತ್ಮಕ ಪ್ರಭಾವಳಿಯು ಶೇ. 3691 ಮತ್ತು ಪುರುಷನ ಶೇ. 1396 ರಷ್ಟು ಹೆಚ್ಚಾಯಿತು. ಕೋಲಾ ಈ ಪಾನೀಯದಿಂದ ಇಬ್ಬರ ಮೇಲೂ ನಕಾರಾತ್ಮಕ ಪರಿಣಾಮವಾಯಿತು.
4. ಜಿ.ಡಿ.ವಿ. ಬಯೋವೆಲ್ ಸಲಕರಣೆಯನ್ನು ಉಪಯೋಗಿಸಿ ಮಾಡಿದ ಅಧ್ಯಯನದಲ್ಲಿ, ವೈನ್ ಕುಡಿಯುವ ಮೊದಲು ವ್ಯಕ್ತಿಯ ಎಲ್ಲಾ ಕುಂಡಲಿನಿ ಚಕ್ರಗಳು ಸಾಮಾನ್ಯವಾಗಿ ಸರಳ ರೇಖೆಯಲ್ಲಿ ಮತ್ತು ವ್ಯವಸ್ಥಿತ ಆಕಾರದಲ್ಲಿದ್ದವು, ಅಂದರೆ ಆ ವ್ಯಕ್ತಿಯು ಸ್ಥಿರ ಮತ್ತು ಶಕ್ತಿಶಾಲಿಯಾಗಿದ್ದನು; ಆದರೆ ವೈನ್ ಕುಡಿದ ನಂತರ ಅವರ ಕುಂಡಲಿನಿ ಚಕ್ರಗಳು ಅಸ್ತವ್ಯಸ್ತಗೊಂಡವು ಮತ್ತು ಕೆಲವು ಚಕ್ರಗಳು ಗಾತ್ರದಲ್ಲಿ ಚಿಕ್ಕದಾಯಿತು, ಅಂದರೆ ವ್ಯಕ್ತಿಯು ಅಸ್ಥಿರವಾಗಿ ಅವನ ಸಾಮರ್ಥ್ಯವೂ ಕಡಿಮೆಯಾಯಿತು.
5. ಒಂದು ಪಾರ್ಟಿಯಲ್ಲಿ ಭಾಗವಹಿಸಿದ್ದ ಹತ್ತು ಜನರ ಮೇಲೆ ನಡೆಸಿದ ಒಂದು ಪರೀಕ್ಷೆಯಲ್ಲಿ ಆಲ್ಕೋಹಾಲ್ ಇರುವ ಪಾನೀಯ ಕುಡಿಯುವ ಮತ್ತು ಅಲ್ಕೋಹಾಲ್ ಇಲ್ಲದಿರುವ ಪಾನೀಯ ಕುಡಿಯುವ ಎಲ್ಲರ ಸಕಾರಾತ್ಮಕ ಪ್ರಭಾವಲಯವು ನಾಶವಾಗಿರುವುದು ಗಮನಕ್ಕೆ ಬಂದಿತು. ಈ ಪಾರ್ಟಿಯಲ್ಲಿ ಆಧ್ಯಾತ್ಮಿಕದೃಷ್ಟಿಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವ ಯಾವುದೇ ಕೃತಿ ಇಲ್ಲದ ಕಾರಣ ಅಲ್ಕೋಹಾಲ್ ಇಲ್ಲದಿರುವ ಪಾನೀಯ ಕುಡಿದುದರಿಂದಲೂ ವಾತಾವರಣದಲ್ಲಿನ ನಕಾರಾತ್ಮಕ ಸ್ಪಂದನಗಳ ಪರಿಣಾಮವಾಯಿತು ಮತ್ತು ಅವರ ನಕಾರಾತ್ಮಕ ಪ್ರಭಾವಲಯ ಹೆಚ್ಚಾಯಿತು.
6. ಸಕಾರಾತ್ಮಕ ಸ್ಪಂದನ ಹೊಂದಿರುವ ಗೋವಿನ ಹಾಲು, ಎಳನೀರು, ಕಿತ್ತಳೆ ರಸ (ಹಣ್ಣುಗಳು) ಈ ಪಾನೀಯಗಳು ವ್ಯಕ್ತಿ ಮತ್ತು ಸಮಾಜಕ್ಕೆ ಆಧ್ಯಾತ್ಮಿಕ ದೃಷ್ಟಿಯಿಂದ ಪ್ರಯೋಜನಕಾರಿಯಾಗಿರುತ್ತದೆ, ಎಂದು ಸಂಶೋಧನೆಯಿಂದ ಗಮನಕ್ಕೆ ಬರುತ್ತದೆ.
ತಮ್ಮ ಸವಿನಯ
ಶ್ರೀ. ರೂಪೇಶ ರೇಡಕರ್,
ಸಂಶೋಧನೆ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಸಂಪರ್ಕ : 9561574972