ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಎಂ.ಎ. ಕೋರ್ಸುಗಳನ್ನು 2021-22ನೇ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದ್ದು, ಆಸಕ್ತ ಪದವೀಧರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಕೃತ ಭಾಷೆಯು ಭಾರತದ ಜ್ಞಾನಜಗತ್ತಿಗೆ ದಾರಿಯಾಗಿದ್ದು, ಆಧುನಿಕ ಭಾಷೆಯಾಗಿಯೂ ಬೆಳೆದಿದೆ. ಅದು ಕಂಪ್ಯೂಟರಿಗೂ ಹೊಂದಿಕೊಳ್ಳುವ ಭಾಷೆ. ಸಂಸ್ಕೃತದ ಅಧ್ಯಯನದಿಂದ ಒಂದಕ್ಕಿಂತ ಹೆಚ್ಚು ಭಾಷೆಗಳ ಅಧ್ಯಯನ ಸಾಧ್ಯ. ಸಂಸ್ಕೃತ ಹಾಗೂ ಹಿಂದಿ ಎಂ.ಎ. ವ್ಯಾಸಂಗ ಮಾಡುವುದರಿಂದ ಸಾಕಷ್ಟು ಉದ್ಯೋಗ ಹಾಗೂ ಸಂಶೋಧನೆಯ ಅವಕಾಶಗಳಿವೆ.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಈ ಕೋರ್ಸುಗಳ ಪಠ್ಯಕ್ರಮವನ್ನು ರೂಪಿಸಿದ್ದು ಅಧ್ಯಯನಾರ್ಥಿಗಳು ಈ ಸಂದರ್ಭದ ಗರಿಷ್ಠ ಅನುಕೂಲವನ್ನು ಪಡೆಯಬಹುದಾಗಿದೆ. ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರು ಈ ಕೋರ್ಸಿಗೆ ಅರ್ಜಿ ಸಲ್ಲಿಸಬಹುದು. ಸಂಸ್ಕೃತ ಭಾರತಿಯ ಕೋವಿದ, ಸುರಸರಸ್ವತಿ ಸಭಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರಿಗೂ ಅವಕಾಶವಿದೆ.
ಅರ್ಹ ಆಸಕ್ತ ಅಭ್ಯರ್ಥಿಗಳು ತುಮಕೂರು ವಿವಿ ವೆಬ್‍ಸೈಟ್ ಮೂಲಕ ದಿನಾಂಕ: 29-11-2021ರ ಒಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 9448556631 ಸಂಖ್ಯೆಯನ್ನು ಸಂಪರ್ಕಿಸಬಹುದು.