ಸಾರ್ವಜನಿಕರ ರಕ್ಷಣೆ ನಂತರ ಬಾಗಿಣ ಅರ್ಪಣೆ – ಶಾಸಕ ಜಿ.ಬಿ.ಜ್ಯೋತಿಗಣೇಶ್ ರಿಂದ ಚಾಲನೆ

ತುಮಕೂರಿನ ಅಮಾನಿಕೆರೆಯು ಸುರಿದ ಭಾರಿ ಮಳೆಯಿಂದಾಗಿ ಕೋಡಿ ಹರಿದ ಕಾರಣ ಗಂಗಾ ಪೂಜೆ ನೇರವೇರಿಸಿ, ಬಾಗಿಣ ಅರ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ ಹಿನ್ನಲೆಯಲ್ಲಿ  ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಅಮಾನಿಕೆರೆಯ ಕೋಡಿ ಬೀಳುವ ಸ್ಥಳಕ್ಕೆ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಶಾಸಕರು ಮಾತನಾಡಿ, ಬಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಜನರ ರಕ್ಷಣೆಯೇ ನಮ್ಮ ಮೊದಲ ಆಧ್ಯತೆ, ರಾಜಗಾಲುವೆ ಅಕ್ಕಪಕ್ಕದ ಮನೆಯವರ ಬಳಿ ತೆರಳಿ ಮುಂದಿನ ಎರಡು ದಿನಗಳು ಸಹ ಭಾರಿ ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಅಮಾನಿಕೆರೆಯು ಅಪಾಯ ಮಟ್ಟ ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸ್ಥಳೀಯರು ತುರ್ತಾಗಿ ಸ್ಥಳಾಂತರಗೊಳ್ಳಬೇಕೆಂದು ಶಾಸಕರು ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪಂಧಿಸಿದ ರಾಜಗಾಲುವೆಯ ಸುತ್ತಮುತ್ತಲಿನ ೩೫ ಮನೆಯ ೧೦೦ಕ್ಕೂ ಅಧಿಕ ಜನ ಸ್ಥಳಾಂತರಗೊಳ್ಳಲು ಒಪ್ಪಿಗೆ ನೀಡಿದರು. ಒತ್ತುವರಿಯಾದ ರಾಜಗಾಲುವೆಯ ಮಹತ್ವ ನಮಗೆ ಇಂದು ಈ ಮಳೆಯಿಂದ ತಿಳಿಯುತ್ತಿದೆ ಎಂದು ಶಾಸಕರು ತಿಳಿಸಿದರು. ಹಿಂದೆಂದು ಕಾಣದಂತಹ ಭಾರಿ ಮಳೆ ತುಮಕೂರು ನಗರದಲ್ಲಿ ಬಂದಿದೆ. ಬಯಲು ಸೀಮೆಯ ಪ್ರದೇಶವಾದ ತುಮಕೂರು ನಗರವು ಕಳೆದ ಹತ್ತು ದಿನಗಳಿಂದ ಮಲೆನಾಡಿನ ಪ್ರದೇಶದಂತಾಗಿದೆ. ಮುಂದಿನ ಎರಡು ದಿನಗಳು ಸಹ ಭಾರಿ ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ವಿನಾ ಕಾರಣ ಮನೆಯಿಂದ ಆಚೆ ಬರುವುದು ಬೇಡವೆಂದು ಶಾಸಕರು ಮನವಿ ಮಾಡಿದರು. ಯಾವುದೇ ತುರ್ತು ಸಂಧರ್ಭದಲ್ಲಿ ನಮ್ಮ ಕಛೇರಿಯ ಸಹಾಯವಾಣಿ ಸಂಖ್ಯೆ: ೯೬೦೬೪೬೧೭೨೭ ಗೆ ಕರೆ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಟೂಡಾ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣ, ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಕುಮಾರ್, ಮಹಾನಗರಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ನಳಿನ ಇಂದ್ರಕುಮಾರ್, ಮಂಜುನಾಥ್, ಲಕ್ಷ್ಮೀನರಸಿಂಹರಾಜು, ಗಿರಿಜಾ ಧನಿಯಾಕುಮಾರ್, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಚಂದ್ರಕಲಾ ಪುಟ್ಟರಾಜು, ವೀಣಾ ಮನೋಹರಗೌಡ, ಇನಾಯತ್, ಧರಣೇಂದ್ರ ಕುಮಾರ್ ಹಾಗೂ ಇತರೆ ಪಾಲಿಕೆ ಸದಸ್ಯರು ಹಾಗೂ ಮುಂತಾದ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!