ಉತ್ಥಾನ ದ್ವಾದಶೀ ಮಹತ್ವ ಮತ್ತು ಆಚರಣೆ

ಉತ್ಥಾನ ದ್ವಾದಶೀ

ಮಹತ್ವ ಮತ್ತು ಆಚರಣೆ

ಹಿಂದೆ ಅಮೃತಪ್ರಾಪ್ತಿಗಾಗಿ ದೇವದಾನವರು ಕ್ಷೀರಸಮುದ್ರದಲ್ಲಿ ಮಂದರಪರ್ವತವನ್ನು ಕಡುಗೋಲಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ, ಮಾಡಿಕೊಂಡು ಶ್ರೀಹರಿಯ ಅದ್ಭುತ ಮಹಿಮೆಯ ಸಹಾಯದಿಂದ ಸಮುದ್ರಮಥನ ಮಾಡಿದರು. ಆಗ ಅಮೃತಕಲಶವನ್ನು ಹಿಡಿದುಕೊಂಡು ಶ್ರೀಹರಿಯು ವೈದ್ಯರೂಪನಾಗಿ ಸಮುದ್ರ ಮಧ್ಯದಿಂದ ಧನ್ವಂತರೀ ರೂಪದಿಂದ ಅವತರಿಸಿದನು. ಆ ದಿನ ಕಾರ್ತಿಕ ಹುಣ್ಣಿಮೆಯಾಗಿತ್ತು. ತಕ್ಷಣ ಅವನ ಕಣ್ಣಿಂದ ಆನಂದಾಶ್ರುವಿನ ಹನಿಗಳು ಅಮೃತಕಲಶದಲ್ಲಿ ಬೀಳಲು ತುಳಸಿಯ ಜನನವಾಯ್ತು.


ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಈ ದಿನ ತುಳಸಿ ಕಟ್ಟೆ /ವೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಯೋಗ ನಿದ್ರೆಯಲ್ಲಿರುವ ಶ್ರೀಮಹಾವಿಷ್ಣುವು ಈ ದಿನ ಎಚ್ಚರಗೊಂಡು ತುಳಸಿಯ ಸಾನಿಧ್ಯದಲ್ಲಿ ಪೂಜೆಯನ್ನು ಪಡೆಯುತ್ತಾನೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಮೂರ್ತಿ ಅಥವ ಸಾಲಿಗ್ರಾಮಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ನೆಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ. ತುಳಸಿ ಸಾನಿಧ್ಯದಲ್ಲಿ ಹಾಲಿನಿಂದ

ಅರ್ಘ್ಯವನ್ನು ಕೊಟ್ಟು ‘ಉತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ’ ನೆಂದು ಪರಮಾತ್ಮನನ್ನು ಎಚ್ಚರಗೊಳಿಸುವ ಪ್ರಕ್ರಿಯೆಯು ಇಲ್ಲಿ ಇದೆ.

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಇದನ್ನು ‘ಕಿರು ದೀಪಾವಳಿ’ ಎಂದೂ ಕರೆಯುತ್ತಾರೆ. ಈ ದಿನ ತುಳಸಿ ಕಟ್ಟೆ/ಬೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು, ಇಬ್ಬರಿಗೂ ಪೂಜೆ ಮಾಡುತ್ತಾರೆ. ನಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸೀ ಗಿಡಕ್ಕೆ ತುಂಬ ಪ್ರಾಮುಖ್ಯತೆ ಇದೆ. ತುಳಸೀ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ, ರೋಗ ಪರಿಹಾರ, ಪ್ರೋಕ್ಷಿಸಿದರೆ ಆಯಸ್ಸು ವೃದ್ಧಿ, ಸಸಿಯನ್ನು ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಭ್ಯ, ಅರ್ಚಿಸಿ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನು ಬೆಳೆಸುತ್ತಾರೆ. ಅದಕ್ಕೆ ದಿನ ಪೂಜೆ, ಪ್ರದಕ್ಷಿಣೆ, ಹಾಗೂ ನಮಸ್ಕಾರ ಮಾಡುತ್ತಾರೆ.

Leave a Reply

Your email address will not be published. Required fields are marked *

error: Content is protected !!