ನಾಡು ನುಡಿ ಅಭಿವೃದ್ಧಿಯಲ್ಲಿ ಕನ್ನಡ ಭಾಷಾ ಪತ್ರಿಕೆಗಳ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ

ಚಿತ್ರದುರ್ಗ; ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ ಪ್ರಾದೇಶಿಕ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

’ನಾಡು ನುಡಿ ಅಭಿವೃದ್ಧಿಯಲ್ಲಿ ಕನ್ನಡ ಭಾಷಾ ಪತ್ರಿಕೆಗಳ ಪಾತ್ರ’ ಕುರಿತು ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಗೆ ಸೇರುವ ವಿದ್ಯಾರ್ಥಿ ವಿದ್ಯಾರ್ಥಿನಿಯವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೈಸ್ಕೂಲ್, ಪಿಯು ವಿದ್ಯಾರ್ಥಿಗಳಿಗೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆಗಳಿದ್ದು, ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತಿದೆ.

ಕೈ ಬರಹದಿಂದ ಕೂಡಿದ ಪ್ರಬಂಧಗಳು ಫುಪ್‌ಸ್ಕೇಫ್ ಮೂರು ಪುಟಗಳು ಮೀರದಂತೆ ಇರಬೇಕು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಬಗ್ಗೆ ಮುಖ್ಯೋಪಧ್ಯಾಯರು/ಪ್ರಾಂಶುಪಾಲರಿಂದ ದೃಢೀಕರಣ ಪತ್ರ, ಇತ್ತೀಚಿನ ಪಾಸ್‌ಪೋರ್ಟ್ ಸೈಜಿನ ಭಾವ ಚಿತ್ರ ಲಗತ್ತಿಸಿರಬೇಕು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಲಾಗುವುದು. ಬಹುಮಾನಿತ ಪ್ರಬಂಧಗಳನ್ನು ಹಾಗೂ ಸೂಕ್ತ ಪ್ರಬಂಧಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
ಕನ್ನಡ ಭಾಷಾ ಪತ್ರಿಕೆಗಳು ನಡೆದು ಬಂದ ರೀತಿ ಕುರಿತು ಹಾಗೂ ನಾಡು ನುಡಿ ಅಭಿವೃದ್ಧಿಯಲ್ಲಿ ಕನ್ನಡ ಭಾಷಾ ಪತ್ರಿಕೆಗಳ ಪ್ರಭಾವ ಮತ್ತು ಕೊಡುಗೆಗಳನ್ನು ಪ್ರಬಂಧದಲ್ಲಿ ಹೆಚ್ಚು ಪ್ರಸ್ತುತಪಡಿಸಬೇಕಾಗಿದೆ.

ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ತಮ್ಮ ಪ್ರಬಂಧಗಳನ್ನು ತಮ್ಮ ಶಾಲಾ ಕಾಲೇಜುಗಳ ವಿಳಾಸದೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಅಂಚೆ ಮೂಲಕ, ಕೋರಿಯರ್ ಮೂಲಕ ತಲುಪಿಸಬಹುದಾಗಿದೆ.

ಪ್ರಬಂಧಗಳನ್ನು ಸಲ್ಲಿಸಲು ಕೊನೆಯ ದಿನಾಂಕ; 30-11-2021

ಪ್ರಬಂಧಗಳನ್ನು ಸಲ್ಲಿಸಬೇಕಾದ ವಿಳಾಸ;

ಟಿ.ತಿಪ್ಪೇಸ್ವಾಮಿ ಸಂಪಿಗೆ,
ಅಧ್ಯಕ್ಷರು, ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘ (ರಿ)
ಮುನ್ಸಿಪಲ್ ಕಾಲೋನಿ, 3ನೇ ತಿರುವು, ಕೆಳಗೋಟೆ, ಚಿತ್ರದುರ್ಗ-577501
ಮೊ; 9731338670

ಆರ್.ಮಂಜುನಾಥ
ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘ (ರಿ)
ಹೆಚ್.ಎಂ.ಬಿ. ಕಾಂಪ್ಲೆಕ್ಸ್, ಮೊದಲನೇ ಮಹಡಿ, ಶಿವಮೊಗ್ಗ ರಸ್ತೆ, ಹರಿಹರ-577601
ಮೊ; 7846945252

ಪಿ.ಗಂಗಾಧರ
ತಾಲ್ಲೂಕು ಅಧ್ಯಕ್ಷರು, ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘ (ರಿ)
ಜನತಾ ಕಾಲೋನಿ, ಚಳ್ಳಕೆರೆ-577522.
ಮೊ; 9880561509

ಪಿ.ಸಿ.ವನಜಾಕ್ಷಿ, ದೇವರಾಜ್ ಅರಸು ರಸ್ತೆ, ಎಸ್‌ಎಸ್‌ಐಟಿ ಮುಂಭಾಗ, ತುಮಕೂರು.
ಮೊ;6361570499

Leave a Reply

Your email address will not be published. Required fields are marked *

error: Content is protected !!