ದೀಪದಿಂದ ದೀಪ ಹಚ್ಚಿ
ನಾವೇ ಜ್ಯೋತಿಯಾಗಿ ಬೆಳಗೋಣ
ಅಜ್ಞಾನ ಕಳೆದು ಸುಜ್ಞಾನ ಪಡೆದು ಹಬ್ಬ ಆಚರಿಸೋಣ
ಅನ್ಯಾಯ ಮಾರ್ಗದಲ್ಲಿ ಇಂದ್ರನ ರಾಜ್ಯವ ವಶಪಡಿಸಿಕೊಂಡ ಬಲಿ
ಚಕ್ರವರ್ತಿಗೆ ವಿವೇಕ ಮೂಡಿಸಿದ
ವಾಮನ ಮೂರ್ತಿಯ ಸ್ಮರಿಸೋಣ
ವಿಷ್ಣು ವಾಮನ ಅವತಾರದಲ್ಲಿ
ಇಟ್ಟ ಮೂರು ಹೆಜ್ಜೆಗಳ ಅಂತರ್ಭಾವವರಿತು ಭೂಮಿ ಆಕಾಶ ಸ್ವರ್ಗಗಳ ಆವರಿಸಿದ ಪರಮಾತ್ಮನ ಪೂಜಿಸೋಣ
ರಾಗದ್ವೇಷದ ಭಾವವ ತೊರೆದು
ಧರ್ಮ,ಸುಖಸಾಧನೆ ದಾರಿ ಅರಿತು
ಅರ್ಥವನ್ನು ಪರಮಾರ್ಥ ಪಡಿಸುವ
ಅಷ್ಟಲಕ್ಷ್ಮೀಯರ ಅರಾಧಿಸೋಣ
ಕಾಲ ಕಾಲದ ಕಾಲನ ಪ್ರವೃತ್ತಿ ಪ್ರಜ್ಞೆ ಮರ್ಮ ಮಹತ್ವ ಅರಿತು ಹಬ್ಬದ
ನೆಪದಲ್ಲಿ ಪ್ರಕೃತಿಯ ಆರಾಧನೆ ಮಾಡುತ ದೈವಿಕ ಅಧ್ಯಾತ್ಮಿಕ ಲೌಕಿಕ
ಜೀವನದಿ ಸಮೃದ್ಧರಾಗೋಣ. ||
ವೆನ್ನಲ ಕೃಷ್ಣ
ತುಮಕೂರು.