ದಿನ ಭವಿಷ್ಯ ದಿನಾಂಕ 02/11/2021

ಮೇಷ : ಈ ದಿನವು ನಿಮಗೆ ಉತ್ತಮವಾಗಿ ಇರಲಿದೆ. ನೀವು ಅಂದುಕೊಂಡ ಕಾರ್ಯಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುವ ಮೂಲಕ ಕಾನೂನು ತೊಡಕುಗಳಿಂದ ಪಾರಾಗಲಿದ್ದೀರಿ.

ವೃಷಭ : ಯಾವುದೇ ಕೆಲಸವನ್ನು ಆರಂಭಿಸುವ ಮುನ್ನವೇ ನಕಾರಾತ್ಮಕವಾಗಿ ಚಿಂತಿಸುವುದನ್ನು ಬಿಟ್ಟುಬಿಡಿ. ದೇವರ ಮೇಲೆ ನಂಬಿಕೆ ಇಡಿ ಎಲ್ಲವೂ ಒಳಿತಾಗಲಿದೆ. ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬರುವುದಿಲ್ಲ. ಉದ್ಯಮದಲ್ಲಿ ಲಾಭ ಗಳಿಸಲಿದ್ದೀರಿ.

ಮಿಥುನ : ಇನ್ನೊಬ್ಬರ ಜೊತೆ ಸೇರಿ ಮಾಡುವ ಎಲ್ಲಾ ಕೆಲಸಗಳಲ್ಲೂ ನೀವಿಂದು ಯಶಸ್ಸು ಕಾಣುವಿರಿ. ಯಾಕೋ ಮನಸ್ಸಿಗೆ ಅತೀವವಾಗಿ ನೋವುಂಟಾಗುವ ಘಟನೆಗೆ ಸಾಕ್ಷಿಯಾಗುವುದರಿಂದ ಕಚೇರಿ ಕೆಲಸಕ್ಕೆ ವಿರಾಮ ಪಡೆಯುವಿರಿ.

ಕಟಕ : ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಸೇರಿ ಪ್ರವಾಸಿ ತಾಣಗಳಿಗೆ ತೆರಳಲಿದ್ದೀರಿ. ಕುಟುಂಬದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ಜವಳಿ ಉದ್ಯಮಿಗಳು, ಹಣ್ಣಿನ ವ್ಯಾಪಾರಿಗಳು ಇಂದು ಅನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸಲಿದ್ದಾರೆ.

ಸಿಂಹ : ಎದುರಾಳಿಗಳನ್ನು ಸೋಲಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಹೊಸ ಸ್ನೇಹಿತರು ನಿಮಗೆ ಸಿಗಲಿದ್ದಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ. ಖರ್ಚಿನ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ನೀವು ಚಿಂತೆಗೀಡಾಗಲಿದ್ದೀರಿ.

ಕನ್ಯಾ : ನಿಮ್ಮ ನಡವಳಿಕೆಗಳಿಂದ ಸಾರ್ವಜನಿಕ ಜೀವನದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಸಂಯಮದಿಂದ ಸಾಥ್​ ನೀಡಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು.

ತುಲಾ : ತಂದೆಯ ಮಾತುಗಳು ನಿಮ್ಮ ಮನಸ್ಸಿಗೆ ಚುಚ್ಚಲಿದೆ. ಆದರೂ ಕೋಪದ ಕೈಗೆ ಬುದ್ಧಿ ನೀಡಬೇಡಿ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಕೆಲಸದ ಮೇಲೆ ನೀವು ತೋರುವ ಶ್ರದ್ಧೆಯೇ ನಿಮ್ಮನ್ನು ಕಾಯಲಿದೆ. ಮನೆಯಲ್ಲಿ ಆಭರಣ ಖರೀದಿ ಮಾಡುವಿರಿ.

ವೃಶ್ಚಿಕ : ಬೇರೆಯವರ ಸಹಾಯ ಪಡೆದು ಅಂದುಕೊಂಡಿದ್ದನ್ನು ಸಾಧಿಸಲಿದ್ದೀರಿ. ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಸ್ನೇಹಿತ ಹೆಗಲಾಗಲಿದ್ದಾನೆ. ಅನಿರೀಕ್ಷಿತ ಅತಿಥಿಯ ಆಗಮನದಿಂದ ಮನೆಯ ವಾತಾವರಣ ಬದಲಾಗಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ.

ಧನು : ನಿಮ್ಮ ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುವಂತಹ ಘಟನೆಯೊಂದು ನಡೆಯಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಅನಗತ್ಯ ವಿವಾದ ಉಂಟಾಗಬಹುದು. ಇದರಿಂದ ಕಚೇರಿಯ ವಾತಾವರಣವೇ ಹಾಳಾಗಲಿದೆ. ವ್ಯಾಪಾರದಲ್ಲಿ ಯಶಸ್ಸು ಕಾಣಲಿದ್ದೀರಿ.

ಮಕರ : ಹೊಸ ಉದ್ಯಮ ಆರಂಭಿಸಿರುವ ನೀವು ಇದರಲ್ಲಿ ಲಾಭ ಪಡೆಯಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಾದಿದೆ. ಗರ್ಭಿಣಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ಕುಂಭ : ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ನೀವು ಚಿಂತೆಗೀಡಾಗಲಿದ್ದೀರಿ. ಈ ಸಂದರ್ಭದಲ್ಲಿ ಪಿತ್ರಾರ್ಜಿತ ಆಸ್ತಿ ನಿಮ್ಮ ಉಪಯೋಗಕ್ಕೆ ಬರಲಿದೆ. ಮನಸ್ಸಿಗೆ ಸಂತಸ ಕೊಡುವ ಪ್ರಸಂಗವೂ ನಡೆಯಲಿದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮೀನ : ಕುಟುಂಬಸ್ಥರೊಂದಿಗೆ ಇಂದು ಉತ್ತಮವಾಗಿ ಸಮಯ ಕಳೆಯಲಿದ್ದೀರಿ. ಹೊಸ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ಇದು ಉತ್ತಮ ದಿನವಾಗಿದೆ. ತಂದೆಯು ನಿಮ್ಮೆಲ್ಲ ಕಾರ್ಯಗಳಿಗೆ ಸಾಥ್​ ನೀಡಲಿದ್ದಾರೆ. ಕುಟುಂಬದ ಪ್ರೀತಿ – ಬೆಂಬಲಗಳನ್ನು ಪಡೆಯಲಿದ್ದೀರಿ.

Leave a Reply

Your email address will not be published. Required fields are marked *

error: Content is protected !!