ದಾನದ ಮಹತ್ವ

ದಾನದ ಮಹತ್ವವನ್ನು ತೈತ್ತರೀಯ ಉಪನಿಷತ್, ಗರುಡ ಪುರಾಣ, ಭಾಗವತ, ಭಗವದ್ಗೀತೆ, ಮಹಾಭಾರತ, ಸಂಸ್ಕೃತ ಸುಭಾಷಿತ ಮತ್ತು ಸರ್ವಜ್ಞನ ವಚನಗಳಲ್ಲಿ ಮನಮುಟ್ಟುವಂತೆ ತಿಳಿಸಲಾಗಿದೆ.
ಗರುಡ ಪುರಾಣ :
ಆಯುರಾರೋಗ್ಯ, ಐಶ್ವರ್ಯಾಭಿವೃದ್ಧಿಗಳಿಗೂ, ಧರ್ಮಾರ್ಥ ಕಾಮ ಮೋಕ್ಷ ಚತುರ್ವಿದ ಪುರುಷಾರ್ಥ ಸಿದ್ಧಿಗೂ ದಾನವೇ ಸಾಧನ.
ಶಕ್ತಿಯಿಲ್ಲದವರು ಶ್ರದ್ಧೆಯಿಂದ ಶಕ್ತ್ಯಾನುಸಾರ ಬಾಯಾರಿದವರಿಗೆ ನೀರು ಕೊಟ್ಟರೂ ಶ್ರೇಷ್ಠ ದಾನವೇ.
ಮಹಾಭಾರತದ ಶಾಂತಿಪರ್ವ :
ಕಲ್ಯಾಣ ಬಯಸುವವರು ಧರ್ಮಮೂಲವಾಗಿ ಸಂಪಾದಿಸಿದ ಹಣದಲ್ಲಿ ೩ ಭಾಗ ಮಾಡಿ ಒಂದು ಭಾಗವನ್ನು ಕಾಮಭೋಗಗಳಿಗೂ ತೊಡಗಿಸಲು ವ್ಯಯಿಸಬೇಕು.

ತೈತ್ತರೀಯ ಉಪನಿಷತ್ತಿನ ಹನ್ನೊಂದನೆ ಅನುವಾಕ :
ಶ್ರದ್ಧಯಾ ದೇಯಮ್ | ಅಶ್ರದ್ಧಯಾ ದೇಯಮ್ | ಶ್ರಿಯಾ ದೇಯಮ್ |
ಹ್ರಿಯಾ ದೇಯಮ್ | ಭಿಯಾ ದೇಯಮ್ | ಸಂವಿದಾ ದೇಯಮ್ ||
ಶ್ರದ್ಧೆಯಿಂದ ಕೊಡಬೇಕು. ಅಶ್ರದ್ಧೆಯಿಂದ ಕೊಡಬಾರದು. ವಿನಯದಿಂದ ಕೊಡಬೇಕು. ಮಿತ್ರಭಾವದಿಂದ ತೆಗೆದುಕೊಳ್ಳುವುದರಿಂದ ನಾವು ಉದ್ಧಾರವಾಗುತ್ತೇವೆ ಎಂಬ ಭಾವನೆಯಿಂದ ದಾನ ಮಾಡಬೇಕು.
ಸ್ವಾಮಿ ವಿವೇಕಾನಂದರು ಹೇಳಿದಂತೆ :
ದಾನ ಸ್ವಿಕರಿಸುವವರಿಗಿಂತ , ದಾನ ಕೊಡುವವರು ಹೆಚ್ಚಿನ ಉದ್ಧಾರವಾಗುತ್ತಾರೆ. ಆದುದರಿಂದ ದಾನ ನೀಡದೇ ಇದ್ದರೆ ನಮಗೆ ನಷ್ಟ.
ಕೆಲವರು ಕೀರ್ತಿ ಬರಲಿ ಎಂದು, ಅನಂತರ ನಮಗೆ ವಾಪಸ್ ಬರಬಹುದು ಎಂದು ದಾನ ನೀಡುತ್ತಾರೆ, ಇದು ನಿಜವಾದ ದಾನವಲ್ಲ.
ನಿಷ್ಕಾಮಕರ್ಮಯೋಗದ ೧೭ ನೇ ಅಧ್ಯಾಯದ ೨೦ ನೇ ಶ್ಲೋಕದಲ್ಲಿ ಸಾತ್ವಿಕ ದಾನ, ೨೧ ನೆಯ ಶ್ಲೋಕದಲ್ಲಿ ರಾಜಸ ದಾನ ಮತ್ತು ೨೨ ನೆಯ ಶ್ಲೋಕದಲ್ಲಿ ತಾಮಸ ದಾನದ ಬಗ್ಗೆ ತಿಳಿಸಲಾಗಿದೆ.
ಸಾತ್ವಿಕ ದಾನ : ದಾನ ಕೊಡುವುದೇ ತನ್ನ ಕರ್ತವ್ಯವೆಂದು ತಿಳಿದು ದೇಶ, ಕಾಲ ಮತ್ತು ಪಾತ್ರನು ಪ್ರತ್ಯುಪಕಾರವನ್ನು ಬಯಸದೆ ಯಾರು ನಿಷ್ಕಾಮ ಭಾವದಿಂದ ಕೊಡುವರೋ ಆ ದಾನವೇ ಸಾತ್ವಿಕ ದಾನ.
ರಾಜಸ ದಾನ: ಪ್ರತ್ಯುಪಕಾರ ಮತ್ತು ಫಲವನ್ನು ದೃಷ್ಠಿಯಲ್ಲಿಟ್ಟುಕೊಂಡು ಕೊಡುವುದೇ ರಾಜಸ ದಾನ.
ತಾಮಸ ದಾನ: ಯಾವ ದಾನವನ್ನು ಸತ್ಕಾರವಿಲ್ಲದೆ ಅಥವಾ ತಿರಸ್ಕಾರ ಪೂರ್ವಕವಾಗಿ ಅಯೋಗ್ಯ ಕುಪಾತ್ರನಿಗೆ ಕೊಡಲಾಗುತ್ತದೆಯೋ ಅದುವೇ ತಾಮಸ ದಾನ.
ಸರ್ವಜ್ಞರ ವಚನದಂತೆ :
ಕೊಡುವಾತನೇ ಹರನು ಪಡೆವಾತನೇ ನರನು
ಒಡಲ ಒಡವೆಗಳು ಕೆಟ್ಟು ಹೋಗುವ ಮುನ್ನ
ಕೊಡು ಪಾತ್ರವರಿತು ಮುಂದುವರೆದಂತೆ
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟದ್ದು ಕೆಟ್ಟದೆನಬೇಡ ಮುಂದಕ್ಕೆ ಕಟ್ಟಿಹುದು ಬುತ್ತಿ ಸರ್ವಜ್ಞ.
ಸುಭಾಷಿತ ಸುಧಾನಿಧಿ:
ಕಾಲ ಗತಿಸಲು ವಿದ್ಯೆ ಕ್ಷೀಣವಾಗುತ್ತಾ ಸಾಗುವುದು, ಬೇರು ಬಿಟ್ಟಂತಹ ಕಾಂಡಗಳು ನೆಲಕ್ಕೆ ಉರುಳುವುವು, ಜಲ ಜಲಾಶಯದಲ್ಲೇ ನೀರು ನಿಲ್ಲದೇ ಒಣಗುವುದು,
ದಾನ ಮತ್ತು ಆಹುತಿ ಎರಡೇ ಚಿರವಾಗಿ ನಿಲ್ಲುವುದು.

ಸಂಗ್ರಹ :-

ಜಿ.ಎಸ್.ಸುಧಾಕರ ಶರ್ಮ

Leave a Reply

Your email address will not be published. Required fields are marked *

error: Content is protected !!