ಆಭರಣಗಳನ್ನು ಖರೀದಿಸುವಾಗ ವಹಿಸಬೇಕಾದ ಕಾಳಜಿ

ಆಭರಣಗಳನ್ನು ಖರೀದಿಸಲು ಅಂಗಡಿಗೆ ಹೋದಾಗ ಅಲ್ಲಿ ನಮಗೆ ವಿವಿಧ ಮಾದರಿಯ ಆಭರಣಗಳು ಕಾಣಿಸುತ್ತವೆ. ಕೆಲವೊಮ್ಮೆ ಆಭರಣಗಳ ವಿವಿಧ ಪ್ರಕಾರದ ನಮೂನೆಗಳಿರುವ (ಮಾದರಿಯ) ಪುಸ್ತಕವನ್ನೂ (ಕ್ಯಾಟಲಾಗ್) ತೋರಿಸುತ್ತಾರೆ. ದುರ್ದೈವದಿಂದ ಆಭರಣಗಳ ಸಾವಿರಾರು ನಮೂನೆಗಳಲ್ಲಿ ೪-೫ ಆಭರಣಗಳು ಮಾತ್ರ ಸಾತ್ತ್ವಿಕವಾಗಿರುತ್ತವೆ ಮತ್ತು ಉಳಿದವುಗಳು ತಾಮಸಿಕ ಅಂದರೆ ತ್ರಾಸ ದಾಯಕವಾಗಿರುತ್ತವೆ ! ಬಹಳಷ್ಟು ಸಲ ನಾವು ಬಾಹ್ಯ ಸೌಂದರ್ಯಕ್ಕೆ ಮನಸೋತು ತಾಮಸಿಕ ಆಭರಣಗಳನ್ನು ಖರೀದಿಸುತ್ತೇವೆ ಮತ್ತು ಹಾನಿಯನ್ನು ಮಾಡಿಕೊಳ್ಳುತ್ತೇವೆ. ಹೀಗಾಗಬಾರದೆಂದು ಕೆಳಗಿನ ಉಪಾಯಗಳನ್ನು ಮಾಡಿ –

೧. ಸನಾತನದ ಗ್ರಂಥಗಳಲ್ಲಿ ವಿವಿಧ ಆಭರಣಗಳ ಛಾಯಾಚಿತ್ರಗಳನ್ನು ಮತ್ತು ಅವುಗಳ ಬಗ್ಗೆ ಮಾಡಿದ ಸೂಕ್ಷ್ಮದ ಪ್ರಯೋಗಗಳನ್ನು ನೀಡಲಾಗಿದೆ. ಅವುಗಳಿಂದ ಆಭರಣಗಳು ಸಾತ್ತ್ವಿಕವಾಗಿವೆಯೋ ಅಥವಾ ತಾಮಸಿಕವಾಗಿವೆಯೋ ಎಂಬುದು ಗೊತ್ತಾಗುತ್ತದೆ. ಯಾವಾಗಲೂ ಸಾತ್ತ್ವಿಕ ಆಭರಣಗಳನ್ನೇ ಖರೀದಿಸಿ.

೨. ಆಭರಣಗಳನ್ನು ಖರೀದಿಸುವುದಿದ್ದರೆ ಅವು ಸಾತ್ತ್ವಿಕವಾಗಿವೆಯೋ ಅಥವಾ ತಾಮಸಿಕವಾಗಿವೆಯೋ (ತ್ರಾಸದಾಯಕ) ಎಂಬುದನ್ನು ಸೂಕ್ಷ್ಮದಿಂದ ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಆದುದರಿಂದ ಅಧ್ಯಾತ್ಮದ ಬಗ್ಗೆ ತಿಳುವಳಿಕೆಯಿರುವ (ಜ್ಞಾನಿ) ವ್ಯಕ್ತಿ ಅಥವಾ ಸೂಕ್ಷ್ಮದ ಸ್ಪಂದನಗಳನ್ನು ಅರಿತುಕೊಳ್ಳುವ ಕ್ಷಮತೆಯಿರುವ ವ್ಯಕ್ತಿಗಳ ಬಳಿ ವಿಚಾರಿಸಿ ಅವರು ಹೇಳಿದಂತೆ ಮಾಡಿ.

೩. ಅಧ್ಯಾತ್ಮದಲ್ಲಿ ತಿಳುವಳಿಕೆಯಿರುವ (ಜ್ಞಾನಿ) ವ್ಯಕ್ತಿ ಅಥವಾ ಸೂಕ್ಷ್ಮದಲ್ಲಿನ ಸ್ಪಂದನಗಳನ್ನು ತಿಳಿದುಕೊಳ್ಳುವ ಕ್ಷಮತೆಯಿರುವ ವ್ಯಕ್ತಿಗಳು ಸಿಗದಿದ್ದರೆ, ನೀವೇ ಆ ಆಭರಣದ ಕಡೆಗೆ ಸೂಕ್ಷ್ಮದಿಂದ ನೋಡಿ ಒಳ್ಳೆಯದೆನಿಸುತ್ತದೆಯೋ ಅಥವಾ ತ್ರಾಸ ದಾಯಕವೆನಿಸುತ್ತದೆಯೋ ಎಂಬುದನ್ನು ನಿರ್ಧರಿಸಲು ಪ್ರಯತ್ನಿಸಿ. ಬಹಳಷ್ಟು ಸಲ ಆಭರಣಗಳಿಂದ ಮಾಯಾವೀ, ಅಂದರೆ ಒಳ್ಳೆಯದೆಂದು ಭಾಸವಾಗುವ ಸ್ಪಂದನಗಳು ಬರುತ್ತಿರುತ್ತವೆ. ಇದರಿಂದ ನಾವು ಮೋಸ ಹೋಗುವ ಸಾಧ್ಯತೆಯಿರುತ್ತದೆ. ಜಾಗರೂಕತೆಯ ಉಪಾಯವೆಂದು ಆಭರಣದಿಂದ ಒಳ್ಳೆಯ ಸ್ಪಂದನಗಳ ಅರಿವಾದ ಮೇಲೆಯೂ ೧೦ ನಿಮಿಷ ನಿಮ್ಮ ಕುಲದೇವಿ, ಕುಲದೇವ ಅಥವಾ ಉಪಾಸ್ಯದೇವತೆಯ ಪೈಕಿ ಯಾರಾದರೊಬ್ಬರ ನಾಮಜಪವನ್ನು ಮಾಡಿ. ಮಧ್ಯಮಧ್ಯದಲ್ಲಿ ‘ಆಭರಣದ ಮೇಲೆ ಮಾಯಾವೀ ಶಕ್ತಿಯ ಆವರಣವು ಬಂದಿದ್ದರೆ ಅದು ದೂರವಾಗಲಿ ಎಂದು ಪ್ರಾರ್ಥನೆಯನ್ನು ಮಾಡಿ. ೧೦ ನಿಮಿಷಗಳ ನಂತರ ಮತ್ತೊಮ್ಮೆ ಆ ಆಭರಣದೆಡೆಗೆ ಸೂಕ್ಷ್ಮದಿಂದ ನೋಡಿ ಒಳ್ಳೆಯದೆನಿಸುತ್ತದೆಯೋ ಅಥವಾ ತ್ರಾಸದಾಯಕವೆನಿಸುತ್ತದೆಯೋ ಎಂಬುದನ್ನು ನೋಡಿ. ಆಮೇಲೆ ಆಭರಣವನ್ನು ಖರೀದಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಿ.

(ಆಭರಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ ‘ಕಂಠಾಭರಣದಿಂದ ಮೇಖಲೆಯವರೆಗಿನ ಆಭರಣಗಳು’)

ಜಾಲತಾಣ : sanatanshop.com/

 

ಸಂಗ್ರಹ : ಶ್ರೀ. ವಿನೋದ ಕಾಮತ,
ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ,
ಸಂಪರ್ಕ : 9342599299

Leave a Reply

Your email address will not be published. Required fields are marked *

error: Content is protected !!