ಮೇಷ: ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಕೆಲಸದಲ್ಲಿ ಹೆಚ್ಚಿನ ಅವಿಷ್ಕಾರಗಳು ಕಾಣಬಹುದು. ಯೋಜನೆಯ ನಿಮಿತ್ತ ಪ್ರಯಾಣಿಸುವ ದಿನವಿದು. ಕುಟುಂಬದೊಡನೆ ದೈವ ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆ. ಆತ್ಮೀಯ ವ್ಯಕ್ತಿಗಳನ್ನು ಆದಷ್ಟು ನಿಮ್ಮ ವ್ಯವಸ್ಥೆಯಲ್ಲಿ ಉಳಿಸಿಕೊಳ್ಳಿ.
ವೃಷಭ:ಈ ದಿನ ಶ್ರಮಿಕ ವರ್ಗದ ಜನರಿಗೆ ಒಳ್ಳೆಯ ಆದಾಯ ಆಗುವುದು. ಈ ದಿನ ಸಂಗಡಿಗರ ಮಾತು ಕೇಳಿ ಹಾಳಾಗಬೇಡಿ ಇದರಿಂದ ನಿಮಗೆ ಒಳಿತು ಆಗುವುದಿಲ್ಲ. ಈ ದಿನ ಶುಭ ಕಾರ್ಯದಲ್ಲಿ ಭಾಗಿ ಆಗುತ್ತೀರಿ. ಈ ದಿನ ನಿಮಗೆ ಬಂದಿರೋ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ವಿಫಲತೆ ಆಗುತ್ತದೆ.
ಮಿಥುನ : ಇಂದು ನೀವು ಆಧ್ಯಾತ್ಮಿಕ ಜೀವನದತ್ತ ಹೆಚ್ಚು ವಾಲುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಮುಂದೆ ಅನೇಕ ಬೇಡಿಕೆಗಳನ್ನು ಇಡುವ ಸಾಧ್ಯತೆ ಇದೆ. ಆದಷ್ಟು ಹಣವನ್ನು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೇ ಲಾಭವಿದೆ.
ಕಟಕ : ಕಚೇರಿಯಲ್ಲಿ ಯಾರನ್ನೋ ಮೆಚ್ಚಿಸಲು ಕೆಲಸ ಮಾಡಲು ಹೋಗಬೇಡಿ. ನಿಮ್ಮ ಬುದ್ಧಿಶಕ್ತಿಯಿಂದ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತ ಕೆಲಸಗಳನ್ನು ಮಾಡಿ. ಸಂಗಾತಿಯು ದೂರ ಇರುವುದರಿಂದ ಒಂಟಿತನ ನಿಮ್ಮನ್ನು ಇಂದು ತುಸು ಹೆಚ್ಚೇ ಕಾಡಲಿದೆ. ಮಕ್ಕಳ ಸಾಧನೆಯು ನಿಮಗೆ ದೊಡ್ಡ ಮಟ್ಟದ ಖುಷಿಯನ್ನು ತರಲಿದೆ.
ಸಿಂಹ: ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಲ್ಲ. ನಿಮ್ಮ ಆರೋಗ್ಯದಲ್ಲಿ ಕುಸಿತವು ನಿಮ್ಮ ದಿನದ ಯೋಜನೆಗಳಿಗೆ ಅಡ್ಡಿಯಾಗಬಹುದು. ಹರಡುತ್ತಿರುವ ಈ ಸಾಂಕ್ರಾಮಿಕದ ದೃಷ್ಟಿಯಿಂದ ಹೆಚ್ಚು ಜಾಗರೂಕರಾಗಿರಿ. ಇಂದು ನೀವು ದೀರ್ಘ ಪ್ರಯಾಣ ತಪ್ಪಿಸಬೇಕು, ಇದು ನಿಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತದೆ.
ಕನ್ಯಾ: ಪ್ರಮುಖ ಯೋಜನೆಗಳ ಜವಾಬ್ದಾರಿ ಹೆಚ್ಚುವುದು. ಆರ್ಥಿಕ ಅಭಿವೃದ್ಧಿ ಕಂಡುಬರುವದು. ಸ್ನೇಹಿತರ ಭಿನ್ನಾಭಿಪ್ರಾಯ ಬಗೆಹರಿಯುವದು. ಶತೃಗಳೂ ಸೌಮ್ಯರಾಗುವ ಕಾಲ ಇರುವದರಿಂದ ಅಪೇಕ್ಷಿತ ಕಾರ್ಯವನ್ನು ಸಾಧಿಸುವಿರಿ.
ತುಲಾ: ಉಡುಗೊರೆ ಸ್ವೀಕರಿಸುವ ಸಾಧ್ಯತೆ ಇದೆ. ಉನ್ನತ ಶಿಕ್ಷಣದ ಪ್ರಯತ್ನಗಳು ಯಶಸ್ವಿಯಾಗಲಿವೆ.ನಿಶ್ಚಿತ ಕೆಲಸಕ್ಕೆ ಬೆಂಬಲ ಸಿಗುವುದರಿಂದ ಉತ್ತಮ ಫಲ ದೊರೆಯುವುದು. ಸುಮ್ಮನೇ ಕೂಡದ ಜಾಯಮಾನ ಇರುವುದರಿಂದ ಹೊಸ ಯೋಜನೆಯನ್ನು ರೂಪಿಸುವಿರಿ. ಹಿಂದಿನ ಬಾಕಿ ವಸೂಲಾತಿಗೆ ಶ್ರಮಿಸಬೇಕಾಗುವದು.
ವೃಶ್ಚಿಕ: ಸಹನೆ ಇಲ್ಲದ ಆತುರದ ನಡೆಯಿಂದ ಹಾನಿ ಸಂಭವ ಎಚ್ಚರಿಕೆ ವಹಿಸಿರಿ. ಅನೀರೀಕ್ಷಿತವಾಗಿ ಬರುವ ವಿಘ್ನಗಳು ತಾವಾಗಿಯೇ ಪರಿಹಾರ ಕಾಣುವವು. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು.ವೃತ್ತಿಜೀವನವನ್ನು ಸಾಕಾರ ಗೊಳಸಲು ಅನೇಕ ಅವಕಾಶಗಳಿವೆ.
ಧನುಸ್ಸು: ಆರೋಗ್ಯದಲ್ಲಿ ಏರುಪೇರು ಸಂಭವ ಜಾಗ್ರತೆ ವಹಿಸಿ, ನಕಾರಾತ್ಮಕ ಚಿಂತನೆ ಮಾಡಬೇಡಿ, ಹೊಸ ಉದ್ಯಮ ಪ್ರಾರಂಭಿಸಲು ಸೂಕ್ತ ಸಮಯವಲ್ಲ, ದೂರದ ಪ್ರಯಾಣ ಬೇಡವೇ ಬೇಡ, ಪ್ರಯತ್ನಿಸಿದ ಕಾರ್ಯಗಳಲ್ಲಿ ಯಶಸ್ಸು, ವ್ಯಾಪಾರ ವಹಿವಾಟಿನಲ್ಲಿ ಮಧ್ಯಮ ಲಾಭದಾಯಕ.
ಮಕರ: ಉತ್ಸಾಹದ ಜೊತೆಗೆ ಸಮಯ ಪ್ರಜ್ಞೆ Éಯೊಂದಿಗೆ ಕೆಲಸ ಮಾಡಿದರೆ ಒಳಿತು. ದಾಂಪತ್ಯದಲ್ಲಿ ಒಡಕು, ಭಿನ್ನಾಭಿಪ್ರಯಾಗಳು ಮೂಡುವ ಸಾಧ್ಯತೆ ಇರುತ್ತದೆ, ಎಚ್ಚರಿಕೆ ಇರಲಿ, ಶತ್ರುಬಾಧೆಯೂ ಕಾಡಲಿದೆ.
ಕುಂಭ: ಇಂದು ನೀವು ರಾಜಕೀಯ ವ್ಯಕ್ತಿಗಳನ್ನು ಮೊದಲ ಬಾರಿಗೆ ಭೇಟಿ ಮಾಡೋದ್ರಿಂದ ನಿಮ್ಮಲ್ಲಿ ಕೊಂಚ ಅಳುಕಂತೂ ಇರಲಿದೆ. ತೀರಾ ಗಾಬರಿಯಾಗುವ ಅಗತ್ಯವಿಲ್ಲ. ನೀವು ಸಾಲ ನೀಡಿದ್ದರೆ ಆ ವ್ಯಕ್ತಿಯು ಇಂದು ಹಣವನ್ನು ಮರಳಿ ನೀಡಲಿದ್ದಾರೆ.
ಮೀನ: ಕೆಲಸದಲ್ಲಿ ಇಂದು ನಿಮಗೆ ತುಂಬಾ ಬಿಡುವಿಲ್ಲದ ದಿನ. ಕಚೇರಿಯಲ್ಲಿ ನಿಮ್ಮ ಮೇಲೆ ಜವಾಬ್ದಾರಿಗಳ ಹೊರೆ ಹೆಚ್ಚಿರುತ್ತದೆ. ನೀವು ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣ ಪರಿಶ್ರಮ ಮತ್ತು ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ, ಶೀಘ್ರದಲ್ಲೇ ಉತ್ತಮ ಯಶಸ್ಸನ್ನು ಪಡೆಯಬಹುದು.