ತುಮಕೂರು: ಇತ್ತೀಚಿನ ದಿನಗಳಲ್ಲಿ ರೋಗದ ನಿಖರತೆ, ರೋಗ ದೃಢಪಡಿಸುವ ಬಗ್ಗೆ ಔಷಧ ನಿರೋಧಕ ಕ್ಷಯ ರೋಗದ ಶಾಸ್ತ್ರವು ಉತ್ತಮ ಪಾತ್ರವಹಿಸುತ್ತದೆ, ಆಧುನಿಕ ವಿಜ್ಞಾನ ವಿಸ್ತಾರಗೊಂಡಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ವಿವಿಧ ರೀತಿಯ ತಂತ್ರಜ್ಞಾನವು ಅಳವಡಿಸಿಕೊಂಡು ರೋಗಿಗಳಿಗೆ ಉತ್ತಮ ಹಾಗೂ ಗುಣಾತ್ಮಕ ಸೇವೆ ನೀಡುವಲ್ಲಿ ಪ್ರಯೋಗಶಾಲೆಗಳ ಪಾತ್ರ ಬಹುಮುಖ್ಯ ವಾಗಿದೆ. ಹಾಗೂ ಇಂದಿನ ವಿಚಾರ ಸಂಕಿರಣದ ಮಹತ್ವ ಪೂರ್ಣವಾಗಿದೆ. ಕ್ಷಯರೋಗದ ತೊಂದರೆಗಳ ಬಗ್ಗೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಳ್ಳುವ ಬಗ್ಗೆ ಮತ್ತು ವೈದ್ಯರಲ್ಲಿ ಆಧುನಿಕ ಚಿಕಿತ್ಸೆಯನ್ನು ಪತ್ತೆ ಹಚ್ಚುವ ಕ್ರಮಗಳನ್ನು ಈ ರೀತಿಯ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ಚರ್ಚಿಸಿ ಇದ್ದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ ಹಾಗೂ ನಮ್ಮ ವೈದ್ಯರು ಮತ್ತು ಸಮುದಾಯ ವೈದ್ಯರು ಕಾಳಜಿವಹಿಸುತ್ತಿದ್ದಾರೆ ಎಂದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್ರವರು ತಿಳಿಸಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಸಂಶೋಧನಾ ಆಸ್ಪತ್ರೆಯ ಹಾಗೂ ತುಮಕೂರಿನ ಜಿಲ್ಲಾ ಕ್ಷಯರೋಗ ಕೇಂದ್ರದ ಸಹಯೋಗದೊಂದಿಗೆ ಶ್ರೀದೇವಿ ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ವತಿಯಿಂದ ಔಷಧ ನಿರೋಧಕ ಕ್ಷಯ ರೋಗದ (Drug Resistant Tuberculosis) ಎಂಬ ವಿಷಯದ ಬಗ್ಗೆ ಅಕ್ಟೋಬರ್ ೨೨ ರಂದು ಬೆಳಿಗ್ಗೆ ೧೧ ಗಂಟೆಗೆ ನಿರಂತರ ವೈದ್ಯಕೀಯ ಶಿಕ್ಷಣ (ಸಿ.ಎಂ.ಇ) ಕಾರ್ಯಾಗಾರವನ್ನು ಶ್ರೀದೇವಿ ಆಸ್ಪತ್ರೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಂ.ಆರ್. ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್ ಹಾಗೂ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಡಾ.ಲಾವಣ್ಯರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಪ್ರಾಂಶುಪಾಲರಾದ ಡಾ.ಡಿ.ಕೆ.ಮಹಾಬಾರಾಜುರವರು ಮಾತನಾಡುತ್ತಾ ಕ್ಷಯ ರೋಗ ವೈದ್ಯಕೀಯ ಮತ್ತು ಸಾಮಾಜಿಕ ಸಮಸ್ಯೆಯನ್ನು ಕಡೆಗಣಿಸಲು ಇರುವ ಕ್ಷಯ ರೋಗವನ್ನು ಗುರುತಿಸುವುದು ಮತ್ತು ಬಹುಔಷಧಿಗೆ ಮಣಿಯಾದೆ. ಕ್ಷಯ ರೋಗಿಗಳಿಗೆ ಸೂಕ್ತವಾಗಿ ಚಿಕಿತ್ಸೆ ನೀಡುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ.ಟಿ. ಚಿಕಿತ್ಸೆಗಾಗಿ ಪ್ರತ್ಯೇಕವಾರ್ಡ್ಗಳನ್ನು ತೆಗೆದಿದ್ದು, ಅತ್ಯುತ್ತಮ ಸೇವೆಗಾಗಿ ರಾಜ್ಯ ಮತ್ತು ರಾಷ್ಟ್ರಗಳಿಂದ ಮೆಚ್ಚುಗೆಯಾಗಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ತುಮಕೂರಿನ ಜಿಲ್ಲಾ ಕ್ಷಯ ರೋಗ ಮತ್ತು ಏಡ್ಸ್ ಅಧಿಕಾರಿಗಳಾದ ಡಾ. ಸನತ್ಕುಮಾರ್ರವರು ಮಾತನಾಡುತ್ತಾ ಯುವ ಜನರರಲ್ಲಿ ಹೆಚ್ಚು ಹೆಚ್ಚು ಏಡ್ಸ್ ರೋಗ ಮತ್ತು ಕ್ಷಯ ರೋಗಕ್ಕೆ ಸಂಬಂಧಪಟ್ಟ ಕಾಯಿಲೆಗಳು ಆಘಾತಕಾರಿ ತಂದಿರುವುದು ಯುವ ಜನತೆಯೂ ಈ ಎರಡು ರೋಗಗಳ ಬಗ್ಗೆ ಹೆಚ್ಚು ಅರಿವುವನ್ನು ಮೂಡಿಸಬೇಕು. ಈ ರೋಗವನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಮಾಡಿರುವ ಏರ್ಪಟ್ಟುಗಳು ಔಷಧ ರೋಗ ನಿರೋಧಕ ಕ್ಷಯ ರೋಗ ಪ್ರಯೋಗಾಲಯ ಗಳನ್ನು ೪ ತಾಲ್ಲೂಕುಗಳಲ್ಲಿ ಪ್ರಾರಂಭಿಸಲಾಗಿದೆ ಅಥಮಹ ರೋಗಿಗಳಿಗೆ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಚಿಕಿತ್ಸೆ ನೀಡುವುದಲ್ಲೆ ಮುಂದೆ ಬಂದಿರುವುದಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ಶ್ರೀದೇವಿ ವೈದ್ಯಕೀಯ ಸಮುದಾಯದ ಮುಖ್ಯಸ್ಥರಾದ ಡಾ.ಎಂ.ಎಂ.ಅಂಗಡಿರವರು ಮಾತನಾಡುತ್ತಾ ಶತ ಶತಮಾನಗಳಿಂದ ಕ್ಷಯ ರೋಗಗಳಿಂದ ಹೆಚ್ಚಾಗಿ ಕಂಡು ಬಂದಿರುವುದು ಈ ಕೂಡಲೇ ಕಾರ್ಯಪ್ರವೃತ್ತಿಗಾಗಿ ಇದನ್ನು ತಡೆಗಟ್ಟಲು ಹೋದರೇ ಹೆಚ್ಚಿನ ಪ್ರಮಾಣದಲ್ಲಿ ಸಾವು-ನಾವು ಉಂಟಾಗಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ವೈದ್ಯಕೀಯ ಪ್ರಸ್ತೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ, ಶ್ರೀದೇವಿ ವೈದ್ಯಕೀಯ ಅಧೀಕ್ಷಕರಾದ ಡಾ. ಚೆನ್ನಮಲ್ಲಯ್ಯ, ಡಾ.ಸ್ವಾತಿ, ಡಾ.ನಿರ್ಮಲಾ, ಡಾ.ನಾಗಭೂಷಣ್, ಡಾ.ಕುಸುಮ, ಡಾ.ರವೀಶ್ ಪಿ.ಎಂ, ಡಾ.ಸೌಜನ್ಯ, ನಿಂಗನಗೌಡ ಪಿ, ಡಾ.ಕೊಲಗೇರಿ, ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ವೈದ್ಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.