ರಹಸ್ಯವಾಗಿ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗ ನಡೆಸಿದ ಚೀನಾ

ಚೀನಾವು ಗುಟ್ಟಾಗಿ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗ ನಡೆಸಿದ್ದು, ಅಮೆರಿಕಕ್ಕೆ ಭದ್ರತೆಯ ಆತಂಕ ಶುರುವಾಗಿದೆ. ಕಳೆದ ಆಗಸ್ಟ್​ ತಿಂಗಳಲ್ಲಿ ಅತ್ಯಂತ ರಹಸ್ಯವಾಗಿ ಈ ಪ್ರಯೋಗ ನಡೆದಿದ್ದು, ಈ ಕ್ಷಿಪಣಿಯು ಶಬ್ದದ ವೇಗಕ್ಕಿಂತಲೂ 5 ಪಟ್ಟು ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ಹಲವು ಮಾಧ್ಯಮಗಳು ವರದಿ ಮಾಡಿವೆ.

ಹೈಪರ್ಸಾನಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಲು ಮತ್ತು ನಾಶಮಾಡಲು ಕಷ್ಟವಾಗುತ್ತದೆ. ಯುಎಸ್ ನಂತಹ ದೇಶಗಳು ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಕ್ಷಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದರೂ, ಹೈಪರ್ಸಾನಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚುವ ಮತ್ತು ನಾಶಪಡಿಸುವ ವ್ಯವಸ್ಥೆಗಳನ್ನು ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ.


ಹೈಪರ್ಸಾನಿಕ್ ಕ್ಷಿಪಣಿಗಳು ಸಾಂಪ್ರದಾಯಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳಂತೆ ಪರಮಾಣು ಸಿಡಿತಲೆಗಳನ್ನು ಒಯ್ಯಬಲ್ಲವು. ಹೈಪರ್ಸಾನಿಕ್ ಕ್ಷಿಪಣಿಗಳು ಶಬ್ದದ ಐದು ಪಟ್ಟು ವೇಗದಲ್ಲಿ ಚಲಿಸುತ್ತವೆ. ಆದರೆ, ಇವೆರಡರ ನಡುವಿನ ಅತಿದೊಡ್ಡ ವ್ಯತ್ಯಾಸವೆಂದರೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಬಾಹ್ಯಾಕಾಶದಲ್ಲಿ ಎತ್ತರಕ್ಕೆ ಹಾರಬಲ್ಲವು ಆದರೆ ಹೈಪರ್ಸಾನಿಕ್ ಕ್ಷಿಪಣಿಗಳು ವಾತಾವರಣದಲ್ಲಿ ತುಂಬಾ ಕಡಿಮೆ ಪ್ರಯಾಣಿಸಬಹುದು ಮತ್ತು ಅವುಗಳ ಉದ್ದೇಶಿತ ಗುರಿಗಳನ್ನು ಹೆಚ್ಚು ವೇಗವಾಗಿ ತಲುಪಬಲ್ಲವು. ಹೈಪರ್ಸಾನಿಕ್ ಕ್ಷಿಪಣಿಗಳನ್ನು ತಯಾರಿಸುವಲ್ಲಿ ಚೀನಾದ ಪ್ರಗತಿಯು ಯುಎಸ್ ಗುಪ್ತಚರ ಸಂಸ್ಥೆಗಳನ್ನು ಅಚ್ಚರಿಗೊಳಿಸಿದೆ ಎಂದು ವರದಿ ಹೇಳಿದೆ. ಚೀನಾ ಹೊರತುಪಡಿಸಿ, ಅಮೆರಿಕ, ರಷ್ಯಾ ಮತ್ತು ಕನಿಷ್ಠ ಐದು ದೇಶಗಳು ಪ್ರಸ್ತುತ ಹೈಪರ್ಸಾನಿಕ್ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿವೆ. ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಈ ಪರಮಾಣು ಸಾಮರ್ಥ್ಯ ಹೊಂದಿರುವ ಕ್ಷಿಪಣಿಯನ್ನು ಪರೀಕ್ಷಿಸಲಾಗಿದ್ದು. ಈ ಕ್ಷಿಪಣಿಯನ್ನು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಪರಿಭ್ರಮಿಸಿದೆ. ಆದರೆ ಚೀನಾದ ಈ ಪರೀಕ್ಷೆಯು ತನ್ನ ನಿಗದಿತ ಗುರಿಯನ್ನು ತಲುಪಲು 32 ಕಿ.ಮೀ ಅಂತರದಿಂದ ವಿಫಲವಾಗಿದೆ.

ಚೀನಾದ ಈ ಪರೀಕ್ಷೆಯು ಅಮೆರಿಕದೊಂದಿಗಿನ ಉದ್ವಿಗ್ನ ಸಂಬಂಧಗಳ ಹಂತದಲ್ಲಿ ಸಾಗುತ್ತಿರುವುದು ಇಲ್ಲಿ ಗಮನಾರ್ಹ ಮತ್ತು ಬೀಜಿಂಗ್ ತೈವಾನ್ ಬಳಿ ಕೂಡ ತನ್ನ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸಿದೆ. ಈ ಪರೀಕ್ಷೆಯ ಮಾಹಿತಿ ಹೊಂದಿರುವ ಐದು ಮೂಲಗಳನ್ನು ಉಲ್ಲೇಖಿಸಿರುವ ಫೈನಾನ್ಷಿಯಲ್ ಟೈಮ್ಸ್​, ‘ಚೀನಾ ಮಿಲಿಟರಿಯು ಹೈಪರ್​ಸಾನಿಕ್ ಗ್ಲೈಡ್ ವಾಹಕದ ಮೂಲಕ ರಾಕೆಟ್ ಉಡಾಯಿಸಿದೆ. ಇದು ಬಾಹ್ಯಾಕಾಶದ ಕೆಳ ಕಕ್ಷೆಯನ್ನು ಮುಟ್ಟಿ, ಅಲ್ಲಿಂದ ಕೆಳಗೆ ಹಾರುವಾಗ ಗುರುತ್ವಾಕರ್ಷಣೆಯ ಬಲದ ಜೊತೆಗೆ ರಾಕೆಟ್ ಇಂಧನವನ್ನೂ ನೂಕುಬಲವಾಗಿ ಬಳಸಿಕೊಂಡು ಗುರಿಯತ್ತ ಮುನ್ನುಗ್ಗಲಿದೆ. ಅತ್ಯಂತ ಕ್ಲಿಷ್ಟವಾದ ಈ ತಂತ್ರಜ್ಞಾನವನ್ನು ಚೀನಾ ಸಾಧಿಸಿರುವುದು ಮತ್ತು ರಕ್ಷಣಾ ಉದ್ಯಮದಲ್ಲಿ ಪ್ರಯೋಗಿಸಿರುವುದು ಅಮೆರಿಕದ ರಕ್ಷಣಾ ವಲಯದಲ್ಲಿ ಸಂಚಲನ ಮೂಡಿಸಿದೆ. ಚೀನಾ ಸರ್ಕಾರವು ಕೂಡ ಹೈಪರ್ಸಾನಿಕ್ ರಾಕೆಟ್ ಪ್ರಯೋಗದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ‘ನಮ್ಮ ಸೇನೆಯು ರಕ್ಷಣೆಯ ನೀತಿ ಹೊಂದಿದೆ. ದಾಳಿ ನಡೆಸುವುದು ಅಥವಾ ಯಾವುದೇ ದೇಶವನ್ನು ಗುರಿಯಾಗಿಸಿ ನಾವು ಯಾವುದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಲ್ಲ’ ಎಂದು ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ಪ್ರತಿಕ್ರಿಯಿಸಿದ್ದಾರೆ. ‘ಯುದ್ಧಾಸ್ತ್ರಗಳ ವಿಚಾರದಲ್ಲಿ ನಾವು ಯಾವುದೇ ದೇಶದೊಂದಿಗೆ ಪೈಪೋಟಿ ನಡೆಸುತ್ತಿಲ್ಲ. ಚೀನಾದಿಂದ ಆತಂಕವಿದೆ ಎಂದು ಅಮೆರಿಕ ಹೈಪರ್​ಸಾನಿಕ್ ಶಸ್ತ್ರಗಳನ್ನೂ ಸೇರಿದಂತೆ ಹಲವು ಮಿಲಿಟರಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ರೂಪಿಸಿದೆ.


ಇದು ಸಹಜವಾಗಿಯೇ ವಿಶ್ವದಲ್ಲಿ ಶಸ್ತ್ರಾಸ್ತ್ರ ಪೈಪೋಟಿಗೂ ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ. ಚೀನಾ ಸಾಧಿಸಿರುವ ಈ ತಂತ್ರಜ್ಞಾನವು ಪ್ರಸ್ತುತ ಅಮೆರಿಕದ ತಂತ್ರಜ್ಞರಿಗೆ ತಿಳಿದಿರುವ ಮತ್ತು ವಿಶ್ವದ ಇತರ ದೇಶಗಳು ಸಾಧಿಸಿರುವ ತಂತ್ರಜ್ಞಾನಕ್ಕಿಂತಲೂ ಸುಧಾರಿತವಾದುದು ಎಂದು ಹೇಳಲಾಗಿದೆ. ಕಳೆದ ಆಗಸ್ಟ್​ ತಿಂಗಳಲ್ಲಿ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆದಿದೆ ಎಂದು ಫೈನಾನ್ಷಿಯಲ್ ಟೈಮ್ಸ್​ ವರದಿ ಮಾಡಿದೆ. ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳ ಗುಪ್ತಚರ ಸಂಸ್ಥೆಗಳ ಈ ಬೆಳವಣಿಗೆಯನ್ನು ಅಚ್ಚರಿಯಿಂದ ಗಮನಿಸುತ್ತಿವೆ. ಕ್ಷಿಪಣಿಯ ಸಂಚಾರ ಯಶಸ್ವಿಯಾಗಿದ್ದರೂ ಅದು ಗುರಿಯನ್ನು ಮುಟ್ಟುವಲ್ಲಿ ವಿಫಲವಾಗಿದೆ. ಉದ್ದೇಶಿತ ಗುರಿಯಿಂದ 32 ಮೈಲಿ ದೂರಕ್ಕೆ ಕ್ಷಿಪಣಿಯು ಅಪ್ಪಳಿಸಿತು. ಗುರಿ ತಲುಪುವಲ್ಲಿ ವಿಫಲವಾಗಿದ್ದರೂ ಬಾಹ್ಯಾಕಾಶಕ್ಕೂ ಯುದ್ಧ ವಿಸ್ತರಿಸುವ ಸಾಮರ್ಥ್ಯವನ್ನು ಚೀನಾ ಈ ಮೂಲಕ ಪ್ರದರ್ಶಿಸಿರುವುದನ್ನು ತಳ್ಳಿ ಹಾಕುವಂತಿಲ್ಲ. ಹೈಪರ್ಸಾನಿಕ್ ಕ್ಷಿಪಣಿಗಳು ಸಾಂಪ್ರದಾಯಿಕ ಖಂಡಾಂತರ ಕ್ಷಿಪಣಿಗಳಂತೆಯೇ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಶಬ್ದದ ವೇಗಕ್ಕಿಂತಲೂ ಐದುಪಟ್ಟು ವೇಗವಾಗಿ ಗುರಿಯತ್ತ ಮುನ್ನುಗ್ಗಬಲ್ಲದು. ಖಂಡಾಂತರ ಕ್ಷಿಪಣಿಗಳು ಮೊದಲು ನೇರವಾಗಿ ಅಂತರಿಕ್ಷಕ್ಕೆ ಸಾಗಿ, ಅಲ್ಲಿಂದ ನಿರ್ದೇಶಿತ ಗುರಿಯತ್ತ ಇಳಿದು ಬರುತ್ತದೆ. ಆದರೆ ಹೈಪರರ್ಸಾನಿಕ್ ಕ್ಷಿಪಣಿಗಳು ಹಾಗಲ್ಲ. ಇವು ಕಡಿಮೆ ಎತ್ತರದಲ್ಲಿ, ಅತ್ಯಂತ ವೇಗವಾಗಿ ಗುರಿಯತ್ತ ಸಾಗಬಲ್ಲವು. ಶಬ್ದದ ವೇಗಕ್ಕಿಂತಲೂ ಐದು ಪಟ್ಟು ವೇಗವಾಗಿ ಸಂಚರಿಸುವ ಸಾಮರ್ಥ್ಯವಿರುವ ಹೈಪರ್​ಸಾನಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದವು. ಇವುಗಳ ವೇಗ ಖಂಡಾಂತರ ಕ್ಷಿಪಣಿಗಳಿಗಿಂತಲೂ ಕಡಿಮೆ. ಆದರೆ ಈ ಕ್ಷಿಪಣಿಗಳನ್ನು ಗುರುತಿಸುವುದು, ಬೆನ್ನಟ್ಟುವುದು ಅಥವಾ ಎದುರಿಸಿ ನಾಶಪಡಿಸುವುದು ತುಂಬಾ ಕಷ್ಟ. ಚೀನಾ ದೇಶಕ್ಕೆ ವಿಶ್ವದಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳು ಎನಿಸಿಕೊಂಡಿರುವ ಭಾರತ ಮತ್ತು ಅಮೆರಿಕ ಸರ್ಕಾರಗಳು ಈವರೆಗೆ ಈ ಬೆಳವಣಿಗೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಎರಡೂ ಸರ್ಕಾರಗಳಿಗೆ ಚೀನಾದ ಪ್ರಯೋಗದ ಬಗ್ಗೆ ಬಹಳ ಹಿಂದೆಯೇ ಮಾಹಿತಿ ಲಭ್ಯವಾಗಿತ್ತು. ಚೀನಾ ಪ್ರಯೋಗದ ಬಗ್ಗೆ ಭಾರತದ ಕಾರ್ಯತಂತ್ರ ನಿಪುಣ ಸಾಧ್ಯವಿರುವ ಎಲ್ಲ ಮಾಹಿತಿ ಕಲೆಹಾಕಿ ವಿಶ್ಲೇಷಿಸುತ್ತಿದ್ದಾರೆ. ‘ಚೀನಾದ ಹೈಪರ್ಸಾನಿಕ್ ಕ್ಷಿಪಣಿಯ ಬಗ್ಗೆ ಆತಂಕ ಪಡುವುದು ಅನಗತ್ಯ’ ಎಂದು ಹೆಸರು ಹೇಳಲು ಇಚ್ಛಿಸದ ಭಾರತದ ರಕ್ಷಣಾ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ‘ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ನಿರಂತರ ಪ್ರಕ್ರಿಯೆ. ಸಬ್​ಸಾನಿಕ್, ಸೂಪರ್​ಸಾನಿಕ್ ಮತ್ತು ಹೈಪರ್ಸಾನಿಕ್ ವೇಗದ ಕ್ಷಿಪಣಿಗಳ ಅಭಿವೃದ್ಧಿ ಕಾರ್ಯ ನಿರಂತರವಾಗಿ ಸಾಗುತ್ತಿರುತ್ತದೆ. ಚೇನಾ ಒಂದು ಕ್ಷಿಪಣಿಯನ್ನು ಇದೀಗ ಪರೀಕ್ಷಾರ್ಥ ಉಡಾವಣೆ ಮಾಡಿದೆ ಎಂದರೆ ಅದು ಏಕಾಏಕಿ ಆಗಿರುವ ಬೆಳವಣಿಗೆ ಖಂಡಿತ ಅಲ್ಲ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಇಂಥ ಹೈಪರ್​ಸಾನಿಕ್ ಕ್ಷಿಪಣಿಗಳಿವೆ. ತೈವಾನ್ ವಿಚಾರದಲ್ಲಿ ಅಮೆರಿಕದೊಂದಿಗೆ, ಗಡಿ ವಿವಾದ ವಿಚಾರವಾಗಿ ಭಾರತದೊಂದಿಗೆ ಚೀನಾ ಸಂಬಂಧ ಹದಗೆಟ್ಟಿದ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚೀನಾದ ಹೈಪರ್ಸಾನಿಕ್ ರಾಕೆಟ್​ ಪ್ರಯೋಗವನ್ನು ವಿಶ್ವ ಹಲವು ಆಯಾಮಗಳಲ್ಲಿ ವಿಶ್ಲೇಷಿಸುತ್ತಿದೆ. ಇದರ ಬಗ್ಗೆ ಅಷ್ಟೊಂದು ಕಾಳಜಿ ಮಾಡುವ ಅಗತ್ಯವಿಲ್ಲ. ಮೊದಲು ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು, ನಂತರ ಪ್ರಯೋಗದಲ್ಲಿ ಅದರ ಸಾಮರ್ಥ್ಯ ನಿರೂಪಿತವಾಗಬೇಕು, ಇಷ್ಟಾದ ನಂತರ ಅದು ಮಿಲಿಟರಿ ಉದ್ದೇಶದ ಬಳಕೆಗೆ ಸೇರ್ಪಡೆಯಾಗಬೇಕು. ಹೈಪರ್ಸಾನಿಕ್ ಕ್ಷಿಪಣಿಗಳು ಸಾಗುವ ವೇಗ ಅತ್ಯಂತ ಕ್ಷಿಪ್ರವಾದುದು. ಈ ಕ್ಷಿಪಣಿಯ ದಕ್ಷಿಣ ಧ್ರುವದವರೆಗೂ ಹಾರಬಲ್ಲದು ಎಂದು ಚೀನಾ ಮೂಲಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್​ ಹೇಳಿದೆ. ಅಮೆರಿಕ ಸೇನೆಯು ಅಭಿವೃದ್ಧಿಪಡಿಸಿ, ಅಳವಡಿಸಿಕೊಂಡಿರುವ ಕ್ಷಿಪಣಿ ನಿರೋಧಕ ವ್ಯವಸ್ಥೆಯು ಉತ್ತರ ಧ್ರುವದ ಮಾರ್ಗವನ್ನು ಮಾತ್ರವೇ ಗಮನದಲ್ಲಿರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚೀನಾ ಸೇನೆ ನಿರೂಪಿಸಿರುವ ಹೊಸ ಸಾಮರ್ಥ್ಯವು ಗೇಮ್​ ಚೇಂಜರ್ ಆಗಬಲ್ಲದು ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!