ಮೇಷ: ಮನಸ್ತಾಪ ಆಗಿ ದೂರ ಹೋದ ದಾಂಪತ್ಯ ಮತ್ತೆ ಹತ್ತಿರ ಆಗಲಿದ್ದಾರೆ, ವಿದೇಶ ಪ್ರಯಾಣ ಯೋಗ ಯಶಸ್ಸು, ಪ್ರೇಮಿಗಳಿಬ್ಬರ ಕುಟುಂಬದಲ್ಲಿ ಶಾಂತಿ ಸೌಹಾರ್ದ ಹೆಚ್ಚಾಗುತ್ತದೆ, ವಿವಾಹ ಯೋಗ ಕೂಡಿ ಬರಲಿದೆ, ಶತ್ರುಗಳ ಉಪಟಳ ಕಡಿಮೆಯಾಗಲಿದೆ, ಆಕಸ್ಮಿಕ ಧನಾಗಮನ.
ವೃಷಭ: ಮಕ್ಕಳ ಓದಿನತ್ತ ಹೆಚ್ಚಿನ ಗಮನ ನೀಡಲೇಬೇಕು. ಇಲ್ಲವಾದಲ್ಲಿ ಮಕ್ಕಳು ತುಂಬಾ ಹಿನ್ನಡೆ ಸಾಧಿಸುವ ಸಾಧ್ಯತೆ ಇದೆ. ದಾಂಪತ್ಯ ಜೀವನವು ಚೆನ್ನಾಗಿ ಇರಲಿದೆ. ಉದ್ಯಮದಲ್ಲಿ ಲಾಭವಿದೆ. ಸಹೋದ್ಯೋಗಿಗಳು ಸಹಾಯ ಮಾಡಲಿದ್ದಾರೆ.
ಮಿಥುನ: ಮಕ್ಕಳ ಒತ್ತಾಯಕ್ಕೆ ಮಣಿದು ಹೊಸ ವಾಹನ ಖರೀದಿ ಮಾಡಲಿದ್ದೀರಿ. ಸಂಗಾತಿಯ ಆರೋಗ್ಯ ಸಂಜೆಯ ಬಳಿಕ ಹದಗೆಡಲಿದೆ. ಇದರಿಂದ ನೀವು ಆತಂಕಕ್ಕೆ ಒಳಗಾಗುವಿರಿ. ಹೊಸ ಉದ್ಯಮಕ್ಕೆ ಹೂಡಿಕೆ ಮಾಡುವವರಿಗೆ ಇದು ಶುಭದಿನವಾಗಿದೆ.
ಕಟಕ: ವ್ಯಾಪಾರ ವಹಿವಾಟಿನಲ್ಲಿ ಆರ್ಥಿಕ ತೊಂದರೆ ಉಂಟಾಗಬಹುದು, ಕೂಡಿಟ್ಟ ಹಣ ನಿವೇಶನ ಖರೀದಿಸುವ ಸಾಧ್ಯತೆ ಇದೆ, ನಿಮ್ಮ ಸಂಗಾತಿಯ ಮನಸ್ಸನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸಿ, ಕಾಯಿಲೆ ಚೇತರಿಕೆ ಕಂಡುಬರುವುದು.
ಸಿಂಹ: ಹೊಸ ಆಸೆಗಳು ಈಡೇರಲಿದೆ. ಹೊಸ ಆಲೋಚನೆಗಳು ಇಂದು ಕಾರ್ಯರೂಪಕ್ಕೆ ಬರಲಿದೆ. ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿವೆ.
ಕಲಾ ಜೀವನದಲ್ಲಿ ತೊಡಗಿದ್ದವರಿಗೆ ಯಶಸ್ಸಿನ ದಿನ. ಆರೋಗ್ಯದ ವಿಚಾರದಲ್ಲಿ ಎಚ್ಚರ.
ಕನ್ಯಾ: ಸಂಗಾತಿಯೊಂದಿಗೆ ಸಂಬಂಧ ಹದಗೆಡುತ್ತದೆ. ಪೋಷಕರ ಬೆಂಬಲ ಪಡೆಯುವಿರಿ. ಹಣದ ಹರಿವು ಉತ್ತಮವಾಗಿರಲಿದೆ. ವೈಯಕ್ತಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕೆಲಸದಲ್ಲಿ ಒತ್ತಡ ಉಂಟಾಗಲಿದೆ. ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಲಿದೆ.
ತುಲಾ: ವೃತ್ತಿರಂಗದಲ್ಲಿ ನಿಮಗೆ ಯಶಸ್ಸಿದೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಅವಕಾಶ ಹುಡುಕಿಕೊಂಡು ಬರಲಿದೆ. ವೈದ್ಯಕೀಯ ರಂಗದಲ್ಲಿ ಇರುವವರಿಗೆ ಇಂದು ಒತ್ತಡದ ದಿನವಾಗಿರಲಿದೆ. ಜಮೀನು ಖರೀದಿ ಅಥವಾ ನಿವೇಶನ ಖರೀದಿ ಸಾಧ್ಯತೆ ಇದೆ.
ವೃಶ್ಚಿಕ: ಸಾಲಗಾರರಿಂದ ಋಣಮುಕ್ತಿ ಆಗುವ ದಿನವಾಗಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಹೋಟೆಲ್ ಉದ್ಯಮದಾರರಿಗೆ ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ. ಪ್ರೀತಿ ವಿಚಾರದಲ್ಲಿ ಸಂಶಯ ಸೃಷ್ಟಿಯಾಗಿ ವಿರಸವಾಗುವ ಸಾಧ್ಯತೆ.
ಧನುಸ್ಸು: ಆರ್ಥಿಕ ದೃಷ್ಟಿಯಿಂದ ಇದು ದುಬಾರಿ ದಿನ. ಕುಟುಂಬ ಜೀವನವು ಸುಖಕರ. ಅನಾರೋಗ್ಯ ಕಾಡುವ ಸಾಧ್ಯತೆ. ನಿಮ್ಮ ಕಾರ್ಯಕ್ಷಮತೆಯಲ್ಲಿ ನೀವು ದೊಡ್ಡ ಸುಧಾರಣೆಯನ್ನು ಸಹ ನೋಡಬಹುದು. ವ್ಯಾಪಾರಸ್ಥರು ಆರ್ಥಿಕವಾಗಿ ಲಾಭ ಪಡೆಯಬಹುದು.
ಮಕರ: ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ. ನಿಮ್ಮ ಮನೆಬಾಗಿಲಲ್ಲಿ ಅದೃಷ್ಟ ಲಕ್ಷ್ಮೀ ಒಲಿದು ಬರುತ್ತಾಳೆ. ಆರೋಗ್ಯ ಸುಧಾರಣೆಯಾಗುವುದು. ಸ್ಥಿತಿಗಳು ಅನುಕೂಲಕರವಾಗಿ ಮುಂದವರೆಯುವುದು. ಗ್ರಹಸುಖ ಯೋಗವು ಇದೆ. ಮನೋಚಿಂತಿತ ಕನಸು ನನಸಾಗಲಿದೆ.
ಕುಂಭ: ಸ್ವೀಕೃತ ಕಾರ್ಯವು ಫಲಪ್ರದವಾಗಿ ಗೌರವ ಆದರಗಳು ಪ್ರಾಪ್ತವಾಗುವವು. ಈ ಸಮಯದಲ್ಲಿ ಉತ್ತಮ ಧನಾರ್ಜನೆ ಯಾಗುವುದು ವಿದೇಶಪ್ರಯಾಣ, ಪ್ರೇಮಸಂಭಾಷಣೆ, ದೇವ ಬ್ರ್ರಾಹ್ಮಣ, ಧರ್ಮಕಾರ್ಯಗಳು ನಡೆಯುವವು. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಪರಿಹಾರವಾಗುವವು.
ಮೀನ: ಹಿತಶತ್ರುಗಳಿಂದ ನಾನಾ ರೀತಿಯ ಕಷ್ಟಗಳು ನೀಡುವರು, ಬಿಡುವಿನ ಸಮಯದಲ್ಲಿ ಪಾರ್ಟ ಟೈಮ್ ಕೆಲಸ ಮಾಡುವಿರಿ, ನಿಮ್ಮ ಜನ್ಮ ನಕ್ಷತ್ರ ರಾಶಿ ಪ್ರಕಾರ ಆದಾಯ ತರುವ ನಿರ್ದಿಷ್ಟ ಕೆಲಸಕಾರ್ಯಗಳಲ್ಲಿ ನೀವು ತೊಡಗಿಸಿಕೊಂಡರೆ ಲಾಭವಿದೆ.