ಮೇಷ: ಕಚೇರಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾದರೆ ಅಧಿಕಾರಿ ಗಳೊಂದಿಗೆ ಸಮಾಲೋಚಿಸಿ. ಈ ದಿನ ಸಾಕಷ್ಟು ಕೆಲಸ ಕಾರ್ಯಗಳು ಉತ್ತಮ ಫಲ ದೊರೆಯುವುದು, ಈ ದಿನ ಮಿತ್ರರ ಜೊತೆಗೆ ಹೆಚ್ಚಿನ ಸುತ್ತಾಟ ಸಹ ಮಾಡುತ್ತೀರಿ. ಈ ದಿನ ಕುಟುಂಬ ಜನರ ವಿಶ್ವಾಸ ಪಡೆಯುವುದು ಅನಿವಾರ್ಯ ಆಗಲಿದೆ.
ವೃಷಭ: ಮನೆಯಲ್ಲಿ ಶಾಂತಿಯುತ ವಾತಾವರಣ ಇರಲಿದೆ. ಇದರಿಂದ ನೀವು ನಿರಾಳವಾಗಿ ಇರಲಿದ್ದೀರಿ. ಕಚೇರಿ ಕೆಲಸದಲ್ಲಿ ತೀರಾ ಗೊಂದಲಕ್ಕೆ ಒಳಗಾಗಬೇಡಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಕುಗ್ಗಲಿದೆ. ಹಳೆಯ ಸಾಲಗಳನ್ನು ತೀರಿಸಲಿದ್ದೀರಿ. ಹಣಕಾಸಿನ ಸಹಾಯ ಸಿಗಲಿದೆ.
ಮಿಥುನ: ವೇತನದ ಸಮಸ್ಯೆ ಕಾಡಲಿದೆ, ವ್ಯಾಪಾರಸ್ಥರು ಅವಸರವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ, ತರಕಾರಿ ಸೌಮ್ಯದ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುವಾಗ ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಿ, ಹಿರಿಯ ಅಧಿಕಾರಿಗಳು ತಾಳ್ಮೆ ಮತ್ತು ಸಹನೆಯಿಂದ ಕರ್ತವ್ಯ ನಿರ್ವಹಿಸಿ.
ಕಟಕ: ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರ ಪ್ರಾರಂಭ ಮಾಡುವಿರಿ. ಹೋಟೆಲ್ ಉದ್ಯಮದಾರರು ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಂಡರೆ ಉತ್ತಮ, ಆರ್ಥಿಕತೆ ನಿಮಗೆ ದಯಪಾಲಿಸಲಿ.
ಸಿಂಹ: ಹಿತಶತ್ರುಗಳಿಂದ ವೈರಾಗ್ಯ, ಹಣದ ಸಮಸ್ಯೆಯಿಂದಾಗಿ ದಾಂಪತ್ಯದಲ್ಲಿ ಬಿರುಕು, ದಾಯಾದಿಗಳಿಂದ ತೊಂದರೆ ಮನಸ್ತಾಪ ಮೋಸ ಸಂಭವ, ಜನಪ್ರತಿನಿಧಿಗಳ ಆರೋಗ್ಯದಲ್ಲಿ ಚೇತರಿಕೆ, ಎಲ್ಲಾ ನಮೂನೆಯ ವ್ಯಾಪಾರ ಆರ್ಥಿಕ ಪರಿಸ್ಥಿತಿ ಚೇತರಿಕೆ.
ಕನ್ಯಾ: ಈ ರಾಶಿಯಲ್ಲಿ ರವಿ ಮತ್ತು ಕುಜ ಮಿತ್ರ ಗ್ರಹಗಳು ಒಂದೇ ಮನೇಲಿ ಇರುವುದರಿಂದ, ಅಜಾತಶತ್ರು ಆಗುವಿರಿ. ಸಮಾಜದಲ್ಲಿ ರಾಜಮನ್ನಣೆ ಸಿಗಲಿದೆ. ತಮ್ಮ ಕುಟುಂಬದ ಸದಸ್ಯರು ತಮ್ಮ ಮಾತಿಗೆ ಮಾನ್ಯತೆ ಕೊಡಲಿದ್ದಾರೆ, ತಮ್ಮ ಸಮಸ್ಯೆಗಳು ಏನೇ ಇದ್ದರೂ ಬಗೆಹರಿಸಿಕೊಳ್ಳಬಹುದು.
ತುಲಾ: ದ್ವೇಷ ಮಾಯವಾಗುವುದು. ಕುಟುಂಬದಲ್ಲಿ ಎಲ್ಲಾ ಕುಟುಂಬದ ಸದಸ್ಯರೊಡನೆ ಸಂತೋಷದ ದಿನವನ್ನು ಅನುಭವಿಸಿ ವಿರಿ. ಹೊಸ ಉದ್ಯಮದಲ್ಲಿ ಪ್ರಗತಿ ಕಾಣಲಿದೆ. ಹೊಸ ಗ್ರಹ ಕಟ್ಟಡದ ಬಗ್ಗೆ ಯಶಸ್ವಿಯಾಗಲಿದೆ. ಜಮೀನು ಖರೀದಿ ಅಥವಾ ನಿವೇಶನ ಖರೀದಿ ಸಾಧ್ಯತೆ ಇದೆ.
ವೃಶ್ಚಿಕ: ಆಲಸ್ಯ ಮತ್ತು ಸೋಮಾರಿತನ ತಪ್ಪಿಸಿ, ನಿಯಮಿತವಾಗಿ ವ್ಯಾಯಾಮ ಮಾಡಿ. ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆರ್ಥಿಕ ದೃಷ್ಟಿಕೋನದಿಂದ, ಇಂದು ನಿಮಗೆ ಒಳ್ಳೆಯ ದಿನ. ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ಪ್ರಯತ್ನಗಳನ್ನು ಹೆಚ್ಚಿಸಿಕೊಳ್ಳಬೇಕು.
ಧನುಸ್ಸು: ಉದ್ಯೋಗದಲ್ಲಿರುವವರಿಗೆ ಇಂದು ಒಳ್ಳೆಯ ದಿನವಲ್ಲ. ಕಚೇರಿಯಲ್ಲಿ ಬಾಸ್ ನೀಡಿದ ಜವಾಬ್ದಾರಿಯನ್ನು ಪೂರ್ಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಪೂರೈಸಲು ಪ್ರಯತ್ನಿಸಿ. ನೀವು ಇಂದು ಒಂದು ಸಣ್ಣ ತಪ್ಪು ಮಾಡಿದರೆ, ನೀವು ತಪ್ಪು ಫಲಿತಾಂಶವನ್ನು ಅನುಭವಿಸಬೇಕಾಗಬಹುದು.
ಮಕರ: ಮಾತೃ ಮೂಲವಾದ ಆಸ್ತಿ ವಿಚಾರದಲ್ಲಿ ಕಲಹ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಿರಿಯರು ಎಚ್ಚರದಿಂದಿರಿ. ತಿಂಡಿ, ಊಟ ವ್ಯತ್ಯಾಸವಾಗಿ ಆರೋಗ್ಯ ಹದಗೆಡಬಹುದು. ಶಾಂತತೆ ಬೇಕು, ಹೀಗಾಗಿ ಆಲೋಚನೆಯನ್ನು ಬಿಟ್ಟುಬಿಡಿ.
ಕುಂಭ: ರಾಶಿಯಲ್ಲಿ ಕರ್ಮ ಸ್ಥಾನದಲ್ಲಿ ಶುಕ್ರನೊಂದಿಗೆ ಚಂದ್ರ, ಕೇತು ಇದ್ದಾರೆ. ಹೀಗಾಗಿ ಸ್ತ್ರೀಯರು ಕೆಲಸದ ವಿಚಾರದಲ್ಲಿ ತೊಂದರೆ ಮಾಡಿಕೊಳ್ಳುವ ಸಾಧ್ಯತೆ. ಬಲ ಇದೆ, ಶುಕ್ರನೂ ಇದ್ದಾನೆ ಎಲ್ಲವೂ ಸರಿಯಾಗುತ್ತದೆ. ಹೆಣ ಹೆಚ್ಚು ಖರ್ಚಾಗಲಿದೆ, ಹೀಗಾಗಿ ಗಮನಹರಿಸಿ.
ಮೀನ: ಕಚೇರಿಯಲ್ಲಿ ಲಘುವಾಗಿ ವರ್ತಿಸಬೇಡಿ. ಆತ್ಮಾಭಿಮಾನ ಬೆಳೆಸಿಕೊಳ್ಳಿ. ಉದ್ಯೋಗ ಬದಲಾವಣೆ ಸಾಧ್ಯತೆ. ದಿನಾಂತ್ಯದಲ್ಲಿ ಶುಭ. ಕುಟುಂಬ ಸೌಖ್ಯ, ಕಾರ್ಯ ವಿಘಾತ, ಋಣಭಾದೆ,ಅಧಿಕ ಖರ್ಚು, ವಿವಾಹ ಯೋಗ.