ಪಿಡಿಒ ಹಾಗೂ ಜನಪ್ರತಿನಿದಿಗಳ ನಿರ್ಲಕ್ಷ್ಯ ದಿಂದ ಮೂಲಭೂತ ಸೌಲಭ್ಯಗಳನ್ನು ವಂಚಿತಗೊಂಡ ಸುಲಗಳಲೆ ಗ್ರಾಮ

ಬೇಲೂರು: ತಾಲ್ಲೂಕಿನ ನಾರ್ವೆ ಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸುಲಗಳಲೆ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪಿಡಿಒ ಬೇಜಾಬ್ದಾರಿ ತನಕ್ಕೆ ಜನರು ಮೂಲಭೂತ ಸೌಕರ್ಯಗಳ ವಂಚಿತರಾಗಿದ್ದಾರೆ.
ಗ್ರಾಮದಲ್ಲಿ ಬರುವ ಕುಡಿಯುವ ನೀರಿನ ಟ್ಯಾಂಕ್ ಗಳನ್ನು ನೋಡಿದರೆ ಯಾವುದೇ ಟ್ಯಾಂಕ್ ಗೂ ಅದರ ಮುಚ್ಚಳಗಳು ಇಲ್ಲ ಅದರಲ್ಲಿ ಇರುವ ನೀರು ನೋಡಿದರೆ ಯಾವುದೇ ಮನುಷ್ಯ ಕುಡಿಯಲ್ಲ ಟ್ಯಾಂಕ್ ಕ್ಲೀನ್ ಮಾಡಿ ಎಷ್ಟೋ ವರ್ಷಗಳಾಗಿವೆ.


ನೀರಿನ ಟ್ಯಾಂಕ್ ಸುತ್ತಮುತ್ತ ಸ್ವಚ್ಚತೆ ಅಂತೂ ಕೇಳೋದೆ ಬೇಡ ಇದರ ಯಾವುದೇ ನಲ್ಲಿಗಳು ಸರಿಯಾಗಿಲ್ಲ ಟ್ಯಾಂಕ್ ಗಳು ಬಣ್ಣ ನೋಡಿ ಎಷ್ಟೋ ವರ್ಷಗಳು ಕಳೆದಿವೆ. ಗಿಡಘಂಟೆಗಳು ಬೆಳೆದು ಅಲ್ಲಲ್ಲಿ ನೀರು ನಿಂತು ರಾಡಿಯಾಗಿರುತ್ತದೆ ಇದರಿಂದ ಸೊಳ್ಳೆಗಳು ಜಾಸ್ತಿಯಾಗಿ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಸಾರ್ವಜನಿಕ ನಲ್ಲಿಗಳಲ್ಲಿ ಯಾವುದೇ ನಲ್ಲಿಗಳು ಸರಿಯಿರುವುದಿಲ್ಲ ಯಾವುದೇ ದೂರು ಕೊಟ್ಟರು ಸ್ಪಂದಿಸದ ಅಧಿಕಾರಿ ವರ್ಗ ಹಾಗೂ ಚುನಾಯಿತ ಸದಸ್ಯರಗಳು ವಿಶೇಷವಾಗಿ ಕಳೆದ ಭಾರಿ ಇದೇ ಗ್ರಾಮದ ಸೋಮಯ್ಯ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾಗಿದ್ದರು ಕೂಡ ಗ್ರಾಮದ ಬಗ್ಗೆ ಕಾಳಜಿವಹಿಸದೇ ನಿರ್ಲಕ್ಷ್ಯ ಮಾಡಿ ಈ ಪರಿಸ್ಥಿತಿ ಗೆ ತಂದಿರುತ್ತಾರೆ.
ಇದೇ ಗ್ರಾಮದ ಮೂರು ಸದಸ್ಯರು ಆಯ್ಕೆಯಾಗಿದ್ದರು ಯಾರಿಗೂ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಜವಾಬ್ದಾರಿ ಕೂಡ ಇಲ್ಲ.
ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಶಿಥಿಲಗೊಂಡು ಸುಮಾರು ಐದು ವರ್ಷ ಕಳೆದರೂ ಇದರ ಬಗ್ಗೆ ಗಮನಹರಿಸದೇ ಇವರ ಬೇಜಾಬ್ದಾರಿ ತನಕ್ಕೆ ಮಕ್ಕಳಿಗೆ ಯಾವುದೇ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ.


ಗ್ರಾಮದ ಸಾರ್ವಜನಿಕ ಬಸ್ ಸ್ಟಾಂಡ್ ನೋಡಿದರೆ ಕಾಡುಬೆಳೆದು ನಿಂತಿದೆ ಯಾರು ಕೂಡ ಒಳಗಡೆ ಹೋಗೋದಿರುವ ಪರಿಸ್ಥಿತಿ ಬಸ್ ಸ್ಟಾಂಡ್ ಬಣ್ಣ ನೋಡಿ ತುಂಬಾ ವರ್ಷಗಳೇ ಕಳೆದಿದೆ.
ಗ್ರಾಮದ ಇಂದಿರಾ ಅವಾಜ್ ಮನೆಗಳು ಇರುವ ರಸ್ತೆಯಲ್ಲಿ ಚರಂಡಿಗೆ ಬರುವ ಮೋರಿ ನೀರು ಬಂದ್ ಅಗಿರೋದ್ರಿಂದ ಚರಂಡಿ ನೀರು ರೋಡು ಮೇಲೆ ಹರಿಯುತ್ತದೆ ಇಲ್ಲಿ ಯಾವುದೇ ಚರಂಡಿ ಸ್ವಚ್ಚತೆ ಮಾಡಿರುವುದಿಲ್ಲ ಇಲ್ಲಿ ಸುಮಾರು 30ಮನೆಗಳು ಇದ್ದು ಸೂಕ್ತವಾದ ಒಳಚರಂಡಿ ಇರುವುದಿಲ್ಲ.
ಗ್ರಾಮದಲ್ಲಿ ಇರುವ ಸೋಲಾರ್ ದೀಪಗಳು ಹಾಳಾಗಿ ವರ್ಷಗಳೇ ಕಳೆದಿದೆ ಇಲ್ಲಿಯವರೆಗೂ ದುರಸ್ತಿ ಮಾಡಿಲ್ಲ ಹಾಗಾದರೇ ಪಂಚಾಯಿತಿ ಯಲ್ಲಿ ಸಂಪನ್ಮೂಲಗಳ ಕೊರತೆ ಇದ್ಯ.
ಗ್ರಾಮದ ಸುಬ್ಬಯ್ಯನವರ ಮನೆಯ ಹತ್ತಿರ ಸಾರ್ವಜನಿಕ ನಲ್ಲಿ ಹಾಳಾಗಿದ್ದು ಸುಮಾರು ಎರಡು ವರ್ಷ ಕಳೆದಿದೆ ಇದುವರೆಗೂ ಹೊಸದಾಗಿ ನಲ್ಲಿ ಹಾಕಿಕೊಟ್ಟಿಲ್ಲ ಸುಬ್ಬಯ್ಯನವರ ಪತ್ನಿ ಅಂಗವಿಕಲೇ ಅಗಿದ್ದು ಕುಡಿಯುವ ನೀರಿಗೆ ಸುಮಾರು 300 ಮೀಟರ್ ದೂರ ಹೋಗಬೇಕಾಗುತ್ತದೆ.
ಗ್ರಾಮದ ಜನತಾ ಕ್ವಾಟ್ರಸ್ ನಲ್ಲಿ ಇರುವಂತ ತೆರೆದ ಬಾವಿಯನ್ನು ಸುಮಾರು 23 ಮನೆಯವರು ವಿದ್ಯುತ್ ಮೋಟಾರ್ ಕೆಟ್ಟುಹೋದ ಸಂದರ್ಭದಲ್ಲಿ ಈ ಬಾವಿ ಯ ನೀರನ್ನು ಬಳಸುತ್ತಾರೆ ಅದರೆ ಇದರ ಮೆಂಟೈನ್ ಮಾಡದೇ ಇದರ ಪರಿಸ್ಥಿತಿ ನೋಡಬಾರದಾಗಿದೆ.
ಇಂತಹ ನೂರಾರು ಸಮಸ್ಯೆಗಳು ಗ್ರಾಮದಲ್ಲಿ ಕಂಡುಬರುತ್ತವೆ.


ಇದಕ್ಕೆ ಮೂಲ ಕಾರಣ ಬೇಜಾಬ್ದಾರಿ ಯ PDO ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರು ಗಳು ತಾಲ್ಲೂಕು ಪಂಚಾಯತಿ ಸದಸ್ಯರು ಜಿಲ್ಲಾ ಪಂಚಾಯತಿ ಸದಸ್ಯರು ಯಾರಿಗೂ ಸಾಮಾಜಿಕ ಕಳಕಳಿ ಇಲ್ಲದಿರುವುದು.
ಮಾನ್ಯ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿಗಳೇ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣ ಅಧಿಕಾರಿ ಗಳೇ ಕೊಡಲೇ ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿ ಮಾಡುವ
ಜ್ಞಾನೇಶ್ ಎಂ ಹಾಸನ್
ಸಾಮಾಜಿಕ ಹೋರಾಟಗಾರ
ಮೊ:9513071519/7624895596

Leave a Reply

Your email address will not be published. Required fields are marked *

error: Content is protected !!