ತುಮಕೂರು ಜಿಲ್ಲಾ ಪೊಲೀಸರಿಂದ ಹೈಟೆಕ್ ಅಂತರಾಜ್ಯ ಕಳ್ಳರ ಬಂಧನ

ತುಮಕೂರು : ಪತ್ರಕರ್ತನ ಸೋಗಿನಲ್ಲಿ ಕರ್ನಾಟಕ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಕಾರುಗಳನ್ನು ಹೈಟೆಕ್ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್‌ರಾಜ್ಯ ಖರ್ತನಾಕ್ ಕಳ್ಳರನ್ನು ತುಮಕೂರು ಜಿಲ್ಲಾ ಪೊಲೀಸರು ಬಂಧಿಸಿ ಅವರಿಂದ ಸುಮಾರು ೫೦ ಲಕ್ಷ ರೂ ಬೆಲೆಬಾಳುವ ೦೭ ಕಾರುಗಳು ಮತ್ತು ೨.೫೦ ಲಕ್ಷ ರೂಪಾಯಿಗಳ ನಗದನ್ನು ವಶಕ್ಕೆ ಪಡೆದಿರುತ್ತಾರೆ.


ತುಮಕೂರು ನಗರದ ಕ್ಯಾತ್ಸಂದ್ರ ಪೊಲೀಸ್ ಠಾಣಾ ಸರಹದ್ದಿನ ಮಂಚಕಲ್‌ಕುಪ್ಪೆ ಗ್ರಾಮದಲ್ಲಿ ರಸ್ತೆಯ ಪಕ್ಕದ್ದಲ್ಲಿ ನಿಲ್ಲಿಸಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಾಗೆಯೇ ಬಡ್ಡಿಹಳ್ಳಿ ಮುಖ್ಯರಸ್ತೆಯ ಪಕ್ಕದ್ದಲ್ಲಿ ನಿಲ್ಲಿಸಿದ್ದ ಮಾರುತಿ ಸುಜುಕಿ ಬ್ರೀಝಾ ಕಾರನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದ ಬಗ್ಗೆ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಅದರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸ್ ಇಲಾಖೆಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಶಹಪೂರವಾಡ್‌ರವರು ಆರೋಪಿಯ ಪತ್ತೆಗಾಗಿ ೨ ಪ್ರತ್ಯೇಕ ಅಪರಾಧ ಪತ್ತೆ ದಳವನ್ನು ರಚಿಸಿ, ಅದರ ಉಸ್ತುವಾರಿಯನ್ನು ಉದೇಶ್, ಹೆಚ್.ಶ್ರೀನಿವಾಸ್‌ರವರುಗಳ ಮಾರ್ಗದರ್ಶನದಲ್ಲಿ ನಡೆಸಿ ಯಶಸ್ವಿಯಾಗಿರುತ್ತಾರೆ.


ಈ ಕಾರುಗಳ ಕಳವು ಪ್ರಕರಣಗಳಲ್ಲಿ ಅಪರಾಧ ಪತ್ತೆ ತಂಡದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಲ್ಲದೇ ಕರ್ನಾಟಕ ರಾಜ್ಯದ ಅಂತರ್ ರಾಜ್ಯ ಗಡಿ ಪ್ರದೇಶಗಳಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆರೋಪಿಗಳ ಪತ್ತೆ ಬಗ್ಗೆ ಖಚಿತ ಮಾಹಿತಿಗಳನ್ನು ಸಂಗ್ರಹಿಸಿರುತ್ತಾರೆ. ಈ ಖತರ್ನಾಕ್ ಕಳ್ಳರು ಪತ್ರಕರ್ತನ ಸೋಗಿನಲ್ಲಿ ತುಮಕೂರು, ಮೈಸೂರು, ಗೋವಾ, ಚೆನೈ ನಗರಗಳಲ್ಲಿ ಕಾರುಗಳನ್ನು ಕಳವು ಮಾಡಿರುವುದು ಬಂಧಿತನಿಂದ ಬೆಳಕಿಗೆ ಬಂದಿರುತ್ತದೆ.
ಕುಖ್ಯಾತ ಕಳ್ಳನಾದ ಪರಮೇಶ್ವರನ್ ತಮಿಳುನಾಡಿನ ಮಧುರೈ ಮೂಲದವನಾಗಿರುತ್ತಾನೆ. ಈತನನ್ನು ಮಧುರೈನಲ್ಲೇ ಪತ್ತೇ ಮಾಡಿ ಬಂಧಿಸಿದ್ದು, ಈತನು ನೀಡಿದ ಮಾಹಿತಿಯನ್ನು ಆಧರಿಸಿ ಈತ ಕದ್ದು ಮಾರುತ್ತಿದ್ದ ವಾಹನಗಳನ್ನು ಸ್ವೀಕರಿಸುತ್ತಿದ್ದು ಮತ್ತೊಬ್ಬ ಆರೋಪಿಯನ್ನು ಕೊಯಮತ್ತೂರಿನ ಸೆಲ್ವಪುರಂನಲ್ಲಿ ಬಂಧಿಸುವಲ್ಲಿ ತುಮಕೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿರುತ್ತಾರೆ.


ಪ್ರಮುಖ ಆರೋಪಿ ಪರಮೇಶ್ವರನ್ ಅತ್ಯಂತ ಖತರ್ನಾಕ್ ಕಳ್ಳನಾಗಿದ್ದು ಈತ ಕಾರುಗಳನ್ನು ಕಳ್ಳತನ ಮಾಡುವಲ್ಲಿ ನೂತನ ತಂತ್ರಜ್ಞಾನಗಳನ್ನು ಬಳಸುತ್ತಿರುವುದಲ್ಲದೇ ಹೈಟೆಕ್ ಉಪಕರಣಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದನ್ನು ಪತ್ತೆ ಮಾಡಲಾಗಿದೆ, ಅಲ್ಲದೇ ಈತ ಕಳ್ಳತನ ಮಾಡಲು ಬರುವಾಗ ಈತನೊಂದಿಗೆ ಕಾಲ್‌ಗರ್ಲ್ಸ್‌ಗಳನ್ನು (ವೇಶ್ಯೆಯರು) ತನ್ನೊಂದಿಗೆ ಕಾರಿನಲ್ಲಿ ಕರೆದುಕೊಂಡು ಬಂದು ಕಳವು ಮಾಡುತ್ತಿದ್ದ ಎನ್ನಲಾಗಿದೆ, ಈತನನ್ನು ಟೋಲ್‌ಗೇಟ್ ಮತ್ತು ಇನ್ನಿತರೆ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು & ತನಿಖಾದಳದವರು ವಿಚಾರಿಸದರೆ ಆತ ತಾನು ಸಭ್ಯಸ್ಥ ತಾನು ಕುಟುಂಬದೊಂದಿಗೆ ಪ್ರವಾಸ ಹೋಗುತ್ತಿರುವುದಾಗಿಯೂ (ಕಾಲ್‌ಗರ್ಲ್ಸ್ ಗಳನ್ನು ತೋರಿಸಿ) ಅಲ್ಲದೇ ತಾನೊಬ್ಬ ತಮಿಳುನಾಡು ಮೂಲದ ಪತ್ರಿಕೆಯ ಉಪ-ಸಂಪಾದಕನೆಂದು ಬಿಂಬಿಸಿಕೊಂಡು ಓಡಾಡುತ್ತಿದ್ದ ಎಂದು ತುಮಕೂರು ಜಿಲ್ಲಾ ಪೊಲೀಸರು ತಿಳಿಸಿದರು. ತಾನು ಕದ್ದ ಕಾರುಗಳನ್ನು ಪ್ರಮುಖವಾಗಿ ತಮಿಳುನಾಡಿನಲ್ಲೇ ಮಾರುತ್ತಿದ್ದು ವಿಶೇಷವಾಗಿದೆ.
ಈತ ಕಾರುಗಳ ಸೆಂಟರ್ ಲಾಕಿಂಗ್ ಸಿಸ್ಟಂ ಅನ್ನೇ ನಿಷ್ಕ್ರಿಯಗೊಳಿಸಿ, ತನ್ನ ಬಳಿಯಿದ್ದ ಅತ್ಯಾಧುನಿಕ ಉಪಕರಣ ಮತ್ತು ತಂತ್ರಜ್ಞಾನವನ್ನು ಬಳಸಿ ಕಾರುಗಳಿಂದ ಯಾವುದೇ ತರಹದ ಶಬ್ಧ ಬಾರದಂತೆ ಕಳವು ಮಾಡುವ ಚಾಣ್ಯಕ್ಷ್ಯತನ ಹೊಂದಿದ್ದ ಎನ್ನಲಾಗಿದೆ, ಅಲ್ಲದೇ ಕದ್ದ ಕಾರುಗಳಿಗೆ ತನ್ನ ಬಳಿಯಿದ್ದ ನಕಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿ ಕಾರುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುತ್ತಿದ್ದ ಎನ್ನಲಾಗಿದ್ದು, ಈತ ಕಾರು ಚಲಾಯಿಸುವುದರಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೇ, ಯಾವುದೇ ಕಾರ್ ರೇಸರ್‌ಗೂ ಕಮ್ಮಿ ಇಲ್ಲ ಎನ್ನುವಂತೆ ಒಂದು ಕಾರನ್ನು ಸರಾಸರಿ ೧೬೦ ರಿಂದ ೧೮೦ ಕಿ.ಮೀ. ಪ್ರತೀ ಗಂಟೆಯ ವೇಗದಲ್ಲಿ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಯಾವುದೇ ಏನೇ ಇರಲಿ ಇಂತಹ ಕುಖ್ಯಾತ ಕಳ್ಳನನ್ನು ತುಮಕೂರು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇವನಿಂದ ಇನ್ನಷ್ಟು ಮಾಹಿತಿ ಪಡೆದಿದ್ದು ಶೀಘ್ರದಲ್ಲಿಯೇ ಮತ್ತಷ್ಟು ಜನರನ್ನು ಸೆರೆ ಹಿಡಿಯುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!