ಮೇಷ: ಇಂದು ನೀವು ತುಂಬಾ ಸಂತೋಷವಾಗಿರುತ್ತೀರಿ. ನಿಮ್ಮ ಅಂತರ್ಬೋಧೆಯ ಜ್ಞಾನ ಹೆಚ್ಚಾಗುತ್ತದೆ ಮತ್ತು ನಿಮ್ಮ ಆಲೋಚನೆಗಳು ದೃಢವಾಗುತ್ತವೆ. ಸಂಭಾಷಣೆಯ ದಕ್ಷತೆ ಮತ್ತು ನಿಮ್ಮ ಚುರುಕುತನವನ್ನು ಬಳಸಿಕೊಂಡು ನಿಮ್ಮ ಕಾರ್ಯಗಳನ್ನು ನೀವು ಸಾಧಿಸುವಿರಿ.
ವೃಷಭ:ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಹೆಚ್ಚಿದ ಧನ ಸಂಪತ್ತು ವೃದ್ಧಿ. ಪಾಲುದಾರರೊಂದಿಗೆ ತಾಳ್ಮೆಯಿಂದ ಸಹಕರಿಸಿ. ದೂರದ ಸ್ಥಳದಿಂದ ಜ್ಞಾನ ಸಂಪಾದನೆ. ಮನೆಯಲ್ಲಿ ಸಂಭ್ರಮ ಪರಿಸ್ಥಿತಿ.
ಮಿಥುನ: ಆಸ್ತಿ ವಿಚಾರದಲ್ಲಿ ನಿರ್ಧಾರಕ್ಕೆ ಮುನ್ನ ಕುಟುಂಬ ದೊಂದಿಗೆ ಸಮಾಲೋಚಿಸಿ. ಧಾರ್ಮಿಕ ಕಾರ್ಯಗಳಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿಯೂ ಮಕ್ಕಳಲ್ಲಿ ಸಮಯ ಕಳೆಯುವಿಕೆ. ಸಾಹಸ ಪ್ರವೃತ್ತಿಯಿಂದಲೂ ಬುದ್ಧಿವಂತಿಕೆ ಯಿಂದಲೂ ಗೌರವ ಪ್ರಾಪ್ತಿ. ಮನೆಯಲ್ಲಿ ಹೆಚ್ಚಿದ ಜವಾಬ್ದಾರಿ.
ಕಟಕ:ನೀವು ಪ್ರಯತ್ನ ಪಡದೇ ಯಾವುದು ನಿಮಗೆ ದಕ್ಕುವುದಿಲ್ಲ. ಹೀಗಾಗಿ ಅದೃಷ್ಟವನ್ನು ನಂಬಿ ಕೂರುವ ಬದಲು ಶ್ರಮ ವಹಿಸಿ. ಉದ್ಯಮಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಿ. ಇಂದು ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗುವಿರಿ. ವಾಣಿಜ್ಯ ವ್ಯವಹಾರವು ಲಾಭ ತಂದುಕೊಡಲಿದೆ.
ಸಿಂಹ: ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಲಿದ್ದೀರಿ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ರಕ್ತದಾನದಂತಹ ಶಿಬಿರಗಳನ್ನು ನಡೆಸಲಿದ್ದೀರಿ. ವೈವಾಹಿಕ ಸಂಬಂಧವೇ ಕೂಡಿ ಬರದೇ ಹತಾಶರಾಗಿದ್ದ ನಿಮಗೆ ಇಂದು ಶುಭ ಸುದ್ದಿ ಕೇಳಲಿದೆ.
ಕನ್ಯಾ:ವಿದೇಶಿ ಹೂಡಿಕೆದಾರರು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಉದ್ಯಮದಲ್ಲಿ ಗಣನೀಯ ಪ್ರಮಾಣದಲ್ಲಿ ಲಾಭ ಎದುರಾಗಲಿದೆ. ಅಂದುಕೊಂಡ ಕೆಲಸಗಳು ಸರಾಗವಾಗಿ ನೆರವೇರಲಿದೆ. ಕುಲದೇವರ ಸೇವೆ ಮಾಡುವುದರಲ್ಲಿ ನೆಮ್ಮದಿ ಕಾಣಲಿದೆ.
ತುಲಾ:ಆಕಸ್ಮಿಕವಾಗಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ. ಇಂದಿನ ಕೆಲಸದಲ್ಲಿ ಸಮಯದ ಪರಿಪಾಲನೆ ಮಾಡುವುದು ಅಗತ್ಯವಿದೆ. ನಿಮ್ಮ ಕಾರ್ಯಗಳಲ್ಲಿ ಅಡ್ಡಿ ಆತಂಕವಿಲ್ಲದೆ ಪರಿಪೂರ್ಣ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ.
ವೃಶ್ಚಿಕ: ಉತ್ತಮವಾದ ಆರೋಗ್ಯದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಕಾರ್ಯಕ್ರಮಗಳು ಅಂದುಕೊಂಡ ಹಾಗೆ ನಡೆಯಲಿದೆ. ಕೆಲಸದಲ್ಲಿ ಉತ್ತಮ ಅವಕಾಶ ಮತ್ತು ಯಶಸ್ಸು ನಿಮ್ಮ ಪಾಲಾಗುತ್ತದೆ. ಆರ್ಥಿಕವಾಗಿ ಲಾಭದಾಯಕ ಪ್ರಯೋಜನ ಈ ದಿನ ಕಾಣಬಹುದು.
ಧನು:ಬಿಡುವಿಲ್ಲದ ದಿನ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ವೃತ್ತಿಪರ ಸಾಮರ್ಥ್ಯ ಪರೀಕ್ಷಿಸುವ ದಿನವಾಗಿರಲಿದೆ. ಆರ್ಥಿಕವಾಗಿ ಸದೃಢರಾಗುವಿರಿ. ಆಸ್ತಿ ಸಂಬಂಧ ಕೋರ್ಟ್, ಕಚೇರಿ ಅಲೆದಾಡಬೇಕಾಗುತ್ತದೆ. ಹೊಸ ಕೆಲಸ ಆರಂಭಿಸುವುದು ಲಾಭದಾಯಕ.
ಮಕರ: ಹೆಚ್ಚುತ್ತಿರುವ ಒತ್ತಡದಿಂದಾಗಿ ಕೆಲಸದ ಬಗ್ಗೆ ಸರಿಯಾಗಿ ಗಮನಹರಿಸಲು ನಿಮಗೆ ಸಾಧ್ಯವಾಗದಿದ್ದರೆ ನಿಮ್ಮ ಸಮಸ್ಯೆಗೆ ಬೇಗನೆ ಪರಿಹಾರವನ್ನು ಕಂಡುಹಿಡಿಯಬೇಕು. ಈ ಸಮಯವು ನಿಮಗೆ ಮುಖ್ಯವಾಗಿದೆ, ಆದ್ದರಿಂದ ನೀವು ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು.
ಕುಂಭ: ಸಗಟು ವ್ಯಾಪಾರಿಗಳಿಗೆ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳಲ್ಲಿ ಆತಂಕ ದೂರ. ಉದರ ಸಂಬಂಧಿ ತೊಂದರೆ ಬರಬಹುದು, ಉತ್ಸಾಹದಿಂದ ಕೂಡಿರುತ್ತದೆ. ಕೆಲಸದ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳನ್ನು ಪ್ರಶಂಸಿಸಲಾಗುತ್ತದೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಚೆನ್ನಾಗಿರುತ್ತದೆ.
ಮೀನ: ಕುಟುಂಬದ ವಿಷಯ ಯೋಚಿಸಿ ತೀರ್ಮಾನ ಕೈಗೊಳ್ಳಿ. ಉತ್ತಮ ಆರೋಗ್ಯ. ಸ್ವಪ್ರಯತ್ನದಿಂದ ಕೂಡಿದ ಕಾರ್ಯ ವೈಖರಿ. ಭೂಮಾದಿ ವಿಚಾರಗಳಲ್ಲಿ ಪ್ರಗತಿ. ಆರ್ಥಿಕ ಅಭಿವೃದ್ಧಿ. ಮಿತ್ರರಿಂದ ಸಹಕಾರ. ದೂರ ಪ್ರಯಾಣದಲ್ಲಿ ವಿಳಂಬ. ಅನ್ಯರ ಸಹಾಯ ನಿರೀಕ್ಷಿಸದಿರಿ.