ತುಮಕೂರು : ಉತ್ತಮ ಕಲಾವಿದರಾಗುವುದಕ್ಕೆ ಶ್ರದ್ದೆ ಆಸಕ್ತಿ, ನಿರಂತರವಾದ ಪರಿಶ್ರಮದ ಜೋತೆಗೆ ತಾಳ್ಮೆ ಅತ್ಯವಶ್ಯಕವಾದವುಗಳು ಯಾರು ಈ ಗುಣಗಳನ್ನ ಬೆಳಸಿಕೊಳ್ಳುತ್ತಾರೊ ಅವರು ಆದೋಷ್ಟು ಬೇಗ ಉತ್ತಮ ಕಲಾವಿದನಾಗಿ ರೂಪುಗೊಳ್ಳುತ್ತಾನೆ ಎಂದು ನಟ ನಾಟಕಕಾರ ಹಾಗೂ ಹಿರಿಯ ಕಲಾವಿದ ಮೈಸೂರು ರಮಾನಂದ್ ತಿಳಿಸಿದರು .
ನಗರದ ಸರಸ್ವತಿಪುರಂ ನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಸ್ಯಾಂಡಲ್ ವುಡ್ ಅಭಿನಯ ತರಭೇತಿ ಶಾಲೆಯ (ಕಲ್ಪತರು ಅಭಿನಯ ಶಾಲೆ) ಉದ್ಘಾಟನ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದನಾಗುದಕ್ಕೆ ಅವಸರ ಪಟ್ಟರೆ ಉತ್ತಮ ಕಲಾವಿದನಾವುದಕ್ಕೆ ಸಾದ್ಯವಾಗುವುದಿಲ್ಲ ಕಲೆಯನ್ನು ಮೈಗೂಡಿಸಿಕೊಂಡು ಉತ್ತಮ ಕಲಾವಿದನಾಗಬೇಕಾದರೆ ಅವನಲ್ಲಿ ತಾಳ್ಮೆ ಆತ್ಯಂತ ಮಹತ್ವದಾಯಕವಾಗಿರುತ್ತದೆ ಅಸಕ್ತಿಯ ಜೋತೆಗೆ ನಿರಂತರವಾದ ಅಭ್ಯಾಸ ಕೂಡ ಬಹು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಹಿಂದಿನ ಕಾಲದಲ್ಲ್ಲಿ ಕಲೆಯನ್ನು ಅಭ್ಯಾಸ ಮಾಡಲು ತುಂಬ ಕಷ್ಟಕರವಾಗಿತ್ತು ಆಂದಿನ ಕಾಲದಲ್ಲಿ ಇಂದಿನಂತೆ ಸಾರಿಗೆ ವ್ಯವಸ್ಥೆಯಾಗಲಿ, ಆಧುನಿಕ ಉಪಕರಣಗಳಾಗಲಿ ಇರಲಿಲ್ಲ ಆಂದು ಅಭ್ಯಾಸ ಮಾಡಲು ಉತ್ತಮ ಸ್ಥಳ ದೋರೆಯುವುದೆ ಕಷ್ಟಕರವಾಗಿತ್ತು ಆದರೆ ಇಂದು ಕಲಾವಿದನಾಗಲು ಉತ್ತಮ ಅಭ್ಯಾಸ ಮಾಡುವುದಕ್ಕೆ ಅನೇಕ ಸುಲಭವಾದ ದಾರಿಗಳಿವೆ ನಾವು ನಿಂತ ಸ್ಥಳದಲ್ಲಿಯೆ ಮೊಬೈಲ್ ಮೂಲಕ ಜಗತ್ತಿನ ಏನೆಲ್ಲ ವಿಷಯಗಳನ್ನ ನೋಡಬಹುದಾಗಿದೆ ಮೊಬೈಲ್‌ನ ಯು ಟ್ಯೂಬ್ ನ ಮೂಲಕವೆ ಇಂದು ಕಲೆಗೆ ಪೂರಕವಾದ ಅನೇಕ ವಿಷಯಗಳನ್ನ ನೋಡಿ ಕಲಿಯಬಹುದಾಗಿದೆ. ತರಭೇತಿಯನ್ನು ನೀಡಲು ಆನೇಖ ಅಭಿನಯ ತರಭೇತಿ ಶಾಲೆಗಳಿವೆ ಅವುಗಳ ಸದುಪಯೋಗವನ್ನು ಪಡೆದಕೊಳ್ಳುವ ಮೂಲಕ ನಿರಂತರವಾದ ಅಭ್ಯಾಸದ ಮೂಲಕ ಅಭಿನಯವನ್ನ ಕಲಿತು ಉತ್ತಮ ಕಲಾವಿದರಾಗಬಹುದು ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕರಾದ ಅನಂದ್ ಮಾತನಾಡಿ, ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ (ಕಲ್ಪತರು ಅಭಿನಯ ತರಬೇತಿ ಶಾಲೆ) ಐದು ವರ್ಷಗಳನ್ನು ಪೂರೈಸಿ ೬ ನೇ ವರ್ಷದತ್ತ ಮುನ್ನಡೆಯುತ್ತಿದೆ ಈ ವರ್ಷ ಕೋವಿಡ್ ೧೯ ಆದಮೇಲೆ ಸುಮಾರು ನಾಲ್ಕು ತಿಂಗಳ ನಂತರ ಇಂದು ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ನ ೮ನೇ ಬ್ಯಾಚ್ ಪ್ರಾರಂಭವಾಗಿದೆ ತಂದೆ ತಾಯಿ ಪ್ರೋತ್ಸಾಹ ಕೊಟ್ಟರೆ ಮಕ್ಕಳು ಉತ್ತಮ ಮಟ್ಟಕ್ಕೆ ಬರಲು ಸಾಧ್ಯ ಆ ನಿಟ್ಟಿನಲ್ಲಿ ಮಕ್ಕಳು ಕೂಡ ನಮ್ಮ ಸಂಸ್ಥೆಯಲ್ಲಿ ಕಲಿತು ಪೋಷಕರಿಗೆ ಒಳ್ಳೆಯ ಕೀರ್ತಿ ತಂದುಕೊಡಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಶಾಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಕಲಾವಿದರನ್ನ ಸಿನಿಮಾ ಕ್ಷೇತ್ರಕ್ಕೆ ಪರಿಚಯ ಮಾಡುವ ನಿರ್ಧಾರವನ್ನು ಮಾಡಲಾಗಿದೆ ಇದಕ್ಕೆ ದೇವರ ಕೃಪೆಯ ಜೋತೆಗೆ ಹಿರಿಯ ಕಲಾವಿದರ ಪ್ರೋತ್ಸಹ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಎನ್‌ಎಸ್‌ಐ ಫೌಂಡೇಷನ್‌ನ ಸಂಸ್ಥಾಪಕರಾದ ಎನ್ ಎನ್ ಶ್ರೀಧರ್ ಮಾತನಾಡಿ, ಕಲಾವಿದರಾಗಿ ಬೆಳೆಯುವ ಆಸಕ್ತಿ ಇರುವವರಿಗೆ ಸ್ಯಾಂಡಲ್‌ವುಡ್ ಫಿಲಂ ಒಂದು ಉತ್ತಮ ವೇದಿಕೆಯಾಗಿದೆ ಇದನ್ನು ಸರಿಯಾದ ನಿಟ್ಟಿನಲ್ಲಿ ಬಳಸಿಕೊಂಡಿದ್ದೆ ಆದಲ್ಲಿ ಮುಂದೆ ನಿಮ್ಮ ತಂದೆ-ತಾಯಿಯರಿಗೆ ಕೀರ್ತಿ ಗೌರವ ತಂದುಕೊಡುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ತಿಳಿಸಿದರು
ಶಿಕ್ಷಕ ಚಂದ್ರಶೇಖರ್ ಮಾತನಾಡಿ, ತುಮಕೂರು ನಗರದಲ್ಲಿ ಇಂತಹ ಸಂಸ್ಥೆ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಮಕ್ಕಳಿಗೆ ಕಲೆಯ ಬಗ್ಗೆ ತರಬೇತಿ ನೀಡಲು ಬೆಂಗಳೂರಿನಂಥ ನಗರಕ್ಕೆ ಹೋಗಬೇಕಾದ ಸಂದರ್ಭ ಇತ್ತು ಆದರೆ ಇಂದು ತುಮಕೂರಿನಲ್ಲಿ ಕಲ್ಪತರು ಅಭಿನಯ ಶಾಲೆ ೬ ನೇ ವರ್ಷದಲ್ಲಿ ಮುನ್ನಡೆಯುತ್ತಿರುವುದು ನಿಜಕ್ಕೂ ಮಹತ್ತರವಾದದ್ದು ಎಂದರು.
ನಿವೃತ್ತ ಬೆಸ್ಕಾಂ ಹಿರಿಯ ಸಹಾಯಕರಾದ ಜಿನೇಂದ್ರ ಕುಮಾರ್, ಸಿದ್ದಗಂಗಾ ಮಠದ ಅರ್ಚಕರು ಹಾಗೂ ಸಂಸ್ಕೃತ ಉಪನ್ಯಾಸಕರಾದ ಗುರುಪ್ರಸಾದ್, ಪರ್ತಕರ್ತರಾದ ಸುರೇಶ್ ಗೂಳೂರು, ಎ.ಬಿ. ವಿಡಿಯೋ ಮಾಲೀಕರಾದ ಬಕಾಶ್, ಸಂಸ್ಥೆಯ ಉಪನ್ಯಾಸಕರಾದ ಸೂಫಿಯಾ ಹಾಗೂ ಅನುಪ್, ನಿರ್ದೇಶಕರಾದ ದಿನೇಶ್ ಮುಂತಾದವರು ಉಪಸ್ಥಿತರಿದ್ದರು.