ಮೇಷ: ಆಸ್ತಿಗೆ ಸಂಬಂಧಿಸಿದ ಕೋರ್ಟ್ ಕಚೇರಿ ವ್ಯವಹಾರಗಳು ನಿಮ್ಮ ಪರವಾಗಿ ಯಶಸ್ಸು, ನಿಮ್ಮ ಹೂಡಿಕೆ ಮಾಡಿರುವ ಹಣ ಮಹತ್ತರ ಜಿಗಿತ ಕಂಡುಬಂದು ಸಂತಸ, ಕುಟುಂಬದ ಬಿರುಕು ತಿಳಿಯಾಗಲಿದೆ.
ವೃಷಭ: ನಿಮ್ಮ ಛಲ ಮತ್ತು ಪ್ರಯತ್ನ ಬಲದಿಂದ ಸ್ಪರ್ಧಾತ್ಮಕ ಪರೀಕ್ಷೆ ಜಯ ಕಾಣಲಿದೆ, ವೃತ್ತಿರಂಗದಲ್ಲಿ ಎಚ್ಚರಿಕೆಯಿಂದ ಹಣ ಸ್ವೀಕರಿಸಿ, ದಾಂಪತ್ಯದಲ್ಲಿ ತೃಪ್ತಿ ಇದ್ದರು ಸಮಾಧಾನವಿಲ್ಲ, ಹಿತಶತ್ರುಗಳು ನಾನಾ ರೀತಿಯ ಕಷ್ಟಗಳು ನೀಡುವರು.
ಮಿಥುನ: ಖರ್ಚಿನಲ್ಲಿ ಹಿಡಿತ ಸಾಧಿಸದ ಹೊರತು ಆರ್ಥಿಕ ಸ್ಥಿತಿ ಸುಧಾರಣೆ ಇಲ್ಲ, ಸ್ತ್ರೀಯರ ಪಾಲಿಗೆ ಇದು ಲಾಭದ ದಿನವಾಗಿದೆ. ಸಂಗಾತಿಯು ನಿಮಗಾಗಿ ಬೆಲೆ ಬಾಳುವ ಉಡುಗೊರೆ ಖರೀದಿಸಲಿದ್ದಾರೆ. ನಿರ್ಮಾಣ ಹಂತದಲ್ಲಿರುವ ಮನೆಯ ಕಾರ್ಯ ಪೂರ್ಣಗೊಳ್ಳಲಿದೆ. ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ.
ಕಟಕ: ವಿದ್ಯಾರ್ಥಿಗಳು ಓದಿನ ಕಡೆಗೆ ಶ್ರದ್ಧೆ ತೋರಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ನೀವು ಅಂದುಕೊಂಡ ಗುರಿಯನ್ನು ಸಾಧಿಸಲಾರಿರಿ. ಉದ್ಯಮದಲ್ಲಿ ನಿರೀಕ್ಷಿತ ಲಾಭ ಹೊಂದಲಿದ್ದೀರಿ. ತಾಯಿಯ ಅನಾರೋಗ್ಯ ಸಮಸ್ಯೆಯು ನಿಮ್ಮ ಇಂದಿನ ಸಂತೋಷವನ್ನು ಹಾಳು ಮಾಡಲಿದೆ.
ಸಿಂಹ: ನಿಮ್ಮ ಕನಸಿನ ಹುದ್ದೆಯನ್ನು ಅಲಂಕರಿಸಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಕೃಷಿಕರಿಗೆ ಇದು ಲಾಭದಾಯಕ ದಿನವಾಗಿದೆ. ಮನೆಯಲ್ಲಿ ವಾಸ್ತು ದೋಷ ಪರಿಹಾರ ಮಾಡಲು ಓಡಾಡುವಿರಿ. ಆಸ್ತಿ ವಿಚಾರದಲ್ಲಿ ಮನಸ್ತಾಪ ಉಂಟಾಗಲಿದೆ.
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಬುದ್ಧಿವಂತಿಕೆಯ ಪ್ರಯೋಗಕ್ಕೆ ಇದೇ ಸಕಾಲ. ಯಾವುದೇ ವಾದ- ವಿವಾದಗಳಲ್ಲಿ ಸಿಕ್ಕಿಕೊಳ್ಳದಂತೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ಕೌಟುಂಬಿಕವಾಗಿ ಹೆಚ್ಚಿನ ಸಹಕಾರ ಹಾಗೂ ಉತ್ಸಾಹದ ಪ್ರತಿಕ್ರಿಯೆ ಸಮಾಧಾನ ತಂದೀತು.
ತುಲಾ: ನಿಮ್ಮ ಕೌಶಲ್ಯವನ್ನು ಒರೆಗೆ ಹಚ್ಚಿ ಕಾರ್ಯಸಾಧನೆಗೆ ಇಳಿಯಿರಿ. ಯಶಸ್ಸು ನಿಮ್ಮದಾದೀತು. ಸಾಮಾಜಿಕವಾಗಿ ಹೆಚ್ಚಿನ ಅನುಕೂಲಕರ ವಾತಾವರಣ ತೋರಿಬರುವುದಿಲ್ಲವಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ.
ವೃಶ್ಚಿಕ: ದೈವಾನುಗ್ರಹ ಎಲ್ಲ ರೀತಿಯಲ್ಲಿ ನಿಮ್ಮ ಮುನ್ನಡೆಗೆ ಸಹಾಯವಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮೆದುರು ಭಾರೀ ಸವಾಲಿದೆ. ಎಚ್ಚರ. ಅನುಕೂಲ ಕಾರ್ಯಕ್ಷೇತ್ರದ ಆಯ್ಕೆ ಮಾಡಿ. ಬುದ್ಧಿವಂತಿಕೆಯ ಪ್ರಯೋಗಕ್ಕೆ ಇದು ಸಕಾಲವಾಗಲಿದೆ.
ಧನುಸ್ಸು: ನಿಮ್ಮ ಶ್ರಮಕ್ಕೆ ತಕ್ಕ ಫಲವಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನ ಸಾಧಿಸಿ. ಕುಟುಂಬ ಜೀವನದಲ್ಲಿ ಅಪಶ್ರುತಿ ಇರಬಹುದು. ಮನೆಯ ಸದಸ್ಯರೊಂದಿಗೆ ವ್ಯತ್ಯಾಸಗಳು ಗಾಢವಾಗಬಹುದು.
ಮಕರ: ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವದು. ವಾದ-ವಿವಾದ, ಹಠಸಾಧನೆ ಬೇಡ
ಕುಂಭ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಆರಂಭದಲ್ಲಿ ಹರ್ಷ, ಉತ್ಸಾಹ ಇರುವುದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು.
ಮೀನ: ವಿದ್ಯಾರ್ಥಿಗಳಿಗೆ ಸೋಲು. ಮಧ್ಯಸ್ಥಿಕೆ ವ್ಯವಹಾರದಲ್ಲಿ ಲಾಭ. ಭಿನ್ನಾಭಿಪ್ರಾಯಗಳು ಕಾಡಬಹುದಾಗಿದ್ದು, ಆರೋಗ್ಯದ ಮೇಲೆ ಸ್ವಲ್ಪ ಪರಿಣಾಮ ಬೀರಲಿದೆ. ಅನಗತ್ಯ ಖರ್ಚುಗಳ ಬಗ್ಗೆ ಹಿಡಿತ ಇದ್ದರೆ ಒಳಿತು.