ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ಸುಗಳಿಸಲು ಖಚಿತ : ಡಾ.ಎಂ.ಆರ್.ಹುಲಿನಾಯ್ಕರ್

ತುಮಕೂರು:   ಸುಮಾರು ಮೂರು ದಶಕಗಳ ಹಿಂದೆ ಭಾರತದ ಆರ್ಥಿಕ ಪರಿಸ್ಥಿತಿ ನಿಕೃಷ್ಟವಾಗಿದ್ದು ನಂತರ ಹೊರಜಗತ್ತಿಗೆ ತೆರೆದುಕೊಂಡ ಭಾರತ ಅವಕಾಶಗಳನ್ನು ತನ್ನದಾಗಿಸಿಕೊಂಡು ಇಂದು ಆರ್ಥಿಕವಾಗಿ ಸಧೃಡವಾಗಿ ಬೆಳೆದು ನಿಂತ ಪರಿಯನ್ನು ವಿವರಿಸಿ ಪದವಿಧರರು ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಯಾರಿಗೂ ಸುಗಮವಾದ ಹಾದಿ ಸುಲಭವಾಗಿ ಸಿಗದೆ ತನ್ನ ಶ್ರದ್ಧೆ, ಇರುವಿಕೆಯನ್ನು ಸತತವಾಗಿ ಸ್ಥಾಪಿಸಿಕೊಂಡರೆ ನಂತರ ಯಶಸ್ಸು ಸಿಗುವುದೆಂದು ನುಡಿದ ಅವರು ಅತ್ಯಂತ ಕಠಿಣ ಪರಿಸ್ಥಿತಿಯಿಂದ ಬಂದ ಮಕ್ಕಳು ತಮ್ಮ ಸಂಸ್ಥೆಗಳಲ್ಲಿ ಉತ್ತಮ ವ್ಯಾಸಂಗದಿಂದ ಸಾಧನೆ ಮಾಡಿ ಉದ್ಯೋಗ ಪಡೆದುಕೊಂಡಿರುವುದು ಅತ್ಯಂತ ಆಶಾದಾಯಕ ವಿಚಾರವೆಂದೂ ಹಾಗೂ ಯಶಸ್ವಿ ವಿದ್ಯಾರ್ಥಿಗಳು ತಮ್ಮ ಕಲಿಕಾ ಸೂತ್ರವನ್ನು ಕಿರಿಯರಿಗೂ ತಿಳಿಸಿ ಪ್ರೋತ್ಸಾಹಿಸಬೇಕೆಂದು ಶ್ರೀದೇವಿ ಛಾರಿಟಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಡಾ. ಎಂ.ಆರ್.ಹುಲಿನಾಯ್ಕರ್ ರವರು ಕರೆ ನೀಡಿದರು.

ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ದೀಕ್ಷಾಂತ್ ಪದವಿ ಪ್ರದಾನ ಸಮಾರಂಭವನ್ನು 2021 ಕಾರ್ಯಕ್ರಮವನ್ನು ಸೆ.22 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಬೆಂಗಳೂರಿನ ತೋಷಿಬಾ ಮಿತ್ಸುಬಿಷಿ ಎಲೆಕ್ಟ್ರಿಕ್ ಇಂಡಸ್ಟ್ರಿಯಲ್ ಸಿಸ್ಟಮ್ ಕಾರ್ಪೊರೇಷನ್ ಸಂಸ್ಥೆಯ ಪವರ್ ಎಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥರಾದ ಗಿರೀಶ್ ಪಾಟೀಲ್‌ರವರು ಮಾತನಾಡುತ್ತಾ ಇಂದಿನ ಕಾಲದಲ್ಲಿ ವ್ಯಾಸಂಗ ಮುಗಿಸಿ ಕಾಲೇಜುಗಳಿಂದ ಹೊರಬರುತ್ತಿರುವ ಪದವೀಧರರಿಗೆ ಅವಕಾಶಗಳ ಸಾಗರವೇ ಲಭ್ಯವಿದ್ದು ಸರಿಯಾದ ಮಾರ್ಗದರ್ಶನದಲ್ಲಿ ಸಾಗಿದರೆ ಅವರ ಸಾಧನೆಗಳಿಗೆ ಮಿತಿಯೆಂಬುದೇ ಇಲ್ಲವೆಂದು ತಿಳಿಸಿದರು.

ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದ ಶ್ರೀದೇವಿ ಛಾರಿಟಬಲ್ ಟ್ರಸ್ಟ್‌ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶನರಾದ ಎಂ.ಎಸ್. ಪಾಟೀಲ್‌ರವರು ಮಾತನಾಡುತ್ತಾ ಪದವೀಧರರು ಚತುರ ಕಾರ್ಯ (ಸ್ಮಾರ್ಟ್‌ವರ್ಕ್) ಪ್ರವೃತ್ತಿಯನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿ ಕೊಂಡರೆ ಯಶಸ್ಸು ಖಂಡಿತವಾಗಿಯೂ ದೊರಕುತ್ತದೆಂದು ತಿಳಿಸಿ ಶ್ರೀದೇವಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ವ್ಯಾಸಂಗದ ವಿಷಯಗಳನ್ನಷ್ಟೇ ಬೋಧಿಸದೆ ವ್ಯಕ್ತಿತ್ವ ವಿಕಸನ, ಉದ್ಯೋಗ ತರಬೇತಿ, ಕೌಶಲ್ಯ ಕಲಿಕಾ ಕಮ್ಮಟಗಳು ಮುಂತಾದವುಗಳನ್ನು ಸಂಘಟಸಿ ಉದ್ಯೋಗ ಪಡೆದುಕೊಳ್ಳಲು ಸಕಲ ಅವಕಾಶಗಳನ್ನು ನೀಡುತ್ತಿವೆ ಎಂದರು.

ಇದೇ ಸಮಾರಂಭದಲ್ಲಿ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನರೇಂದ್ರ ವಿಶ್ವನಾಥ್‌ರವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಪದವೀಧರರಿಗೆ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ವಿಶಾಲವಾದ ಮಾಗೋಪಾರ್ಯಗಳಿವೆ. ಅಧ್ಯಯನಶೀಲತೆಯಲ್ಲಿ ತೊಡಗಿಸುತ್ತಾ ವ್ಯಕ್ತಿತ್ವ ರೂಪಿಸಿಕೊಂಡರೆ ವಿದ್ಯಾರ್ಥಿಗಳಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಹಾಗೂ ಈ ಸ್ಪರ್ಧಾತ್ಮಕ ಯುಗದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿವೆ ಹಿಂದೆ ಗುರು ಮುಂದೆ ಗುರಿಯೊಂದು ಇದ್ದರೆ ಯಶಸ್ಸು ಖಂಡಿತ ಎಂದರು. ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿ ಸಾಧಿಸಬೇಕು. ವಿದ್ಯಾರ್ಥಿಗಳಿಗೆ ಯಶಸ್ಸೆಂಬುದು ನಿರಂತರ ಕಲಿಕೆ, ಸತತ ಪರಿಶ್ರಮ ಮತ್ತು ಸೇವೆಯಿಂದಲೇ ಸಾಧ್ಯ ಎಂದು ತಿಳಿಸಿದರು. ಎಲ್ಲಾ ಪದವಿಧರರಿಗೆ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.

ಕು.ದೀಪಾ, ಅನುಷಾ ಮತ್ತು ಶೋಭಾ ಹೂಗಾರ್ ಪ್ರಾರ್ಥಿಸಿ, ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ಸ್ವಾಗತಿಸಿ, ಪ್ರೊ.ಡಾ.ಜಿ.ಮಹೇಶ್‌ಕುಮಾರ್ ವಂದಿಸಿ, ಪ್ರೊ.ಡಾ.ಸಿ.ನಾಗರಾಜ್ ನಿರ್ವಹಿಸಿದರು. ಡೀನ್ ಡಾ.ಚಂದ್ರಶೇಖರ್ ಪದವಿಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ.ಕೆ.ಎಸ್.ರಾಮಕೃಷ್ಣ, ಪ್ರೊ.ಬಿ.ಹೆಚ್.ವಾಸುದೇವಮೂರ್ತಿ, ಪ್ರೊ.ಐಜಾಜ್ ಅಹಮ್ಮದ್ ಷರೀಫ್, ಪ್ರೊ.ಸಿ.ವಿ.ಷಣ್ಮುಖಸ್ವಾಮಿ, ಪ್ರೊ.ಜಿ.ಹೆಚ್.ರವಿಕುಮಾರ್, ಪ್ರೊ.ಡಾ.ಚೇತನಾ, ಪ್ರೊ.ಡಾ.ಸದಾಶಿವಯ್ಯ ಹಾಗೂ ಬೋಧಕ-ಬೋಧಕೇತರ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!