ಕೋವಿಡ್ ನಿಂದ ಮೃತಪಟ್ಟ ಫಲಾನುಭವಿಗಳಿಗೆ 1 ಲಕ್ಷ ರೂ ಪರಿಹಾರ ಹಣ

ತುರುವೇಕೆರೆ : ಇಂದು ಕೋವಿಡ್ ನಿಂದ ಮೃತಪಟ್ಟ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ1 ಲಕ್ಷ ರೂ ಪರಿಹಾರ ಹಣ ಬಿಡುಗಡೆ ಕಾರ್ಯಕ್ರಮ ಜರುಗಿತು.

ಕೋವಿಡ್ ನಿಂದ ಇತ್ತೀಚಿಗೆ ಮೃತಪಟ್ಟ ಅರ್ಹ ಫಲಾನುಭವಿಗಳ ಬಿ.ಪಿ.ಎಲ್ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ ತಲಾ ರೂ- 1ಲಕ್ಷಗಳ ಪರಿಹಾರವನ್ನು ಫಲಾನುಭವಿಗಳಿಗೆ ನೀಡುವ ಕಾರ್ಯಕ್ರಮಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದ ಕಂದಾಯ ಸಚಿವರಾದ ಶ್ರೀ ಆರ್ ಅಶೋಕ್ ರವರು.

ಈ ಸಂಧರ್ಭದಲ್ಲಿ ಶಾಸಕ ಮಿತ್ರರುಗಳಾದ,ಎಂ ಕೃಷ್ಣಪ್ಪ, ನಿರಂಜನ್,ಜ್ಯೋತಿ ಗಣೇಶ್, ಮಸಾಲ ಜಯರಾಮ್ ರವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ಮತ್ತು ಅರ್ಹ ಫಲಾನುಭವಿಗಳಿಗೆ  ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಮಸಾಲ ಜಯರಾಮ್ ರವರು ಚೆಕ್ಕು ವಿತರಿಸಿದರು.

Leave a Reply

Your email address will not be published. Required fields are marked *

error: Content is protected !!