ಲಸಿಕೆ ಉತ್ಪಾದನಾ ಸಂಸ್ಥೆಗಳಿಂದ ಲಸಿಕೆ ಅಸಮಾನತೆ ಬಿಕ್ಕಟ್ಟು : ಆ್ಯಮ್ನೆಸ್ಟಿ

ನ್ಯೂಯಾರ್ಕ್: ಕೋವಿಡ್-19 ಲಸಿಕೆ ಉತ್ಪಾದಿಸುವ 6 ಪ್ರಮುಖ ಸಂಸ್ಥೆಗಳು ಬೌದ್ಧಿಕ ಆಸ್ತಿ ಹಕ್ಕು ಬಿಟ್ಟುಕೊಡಲು ಮತ್ತು ಲಸಿಕೆ ತಂತ್ರಜ್ಞಾನ ಹಂಚಿಕೊಳ್ಳಲು ನಿರಾಕರಿಸುವ ಮೂಲಕ ಈ ಹಿಂದೆಂದೂ ಕಂಡಿರದ ಮಾನವ ಹಕ್ಕು ಸಮಸ್ಯೆಗೆ ಕಾರಣಕರ್ತರಾಗುತ್ತಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ಮಾಡಿದೆ.

ಆಸ್ಟ್ರಝೆನೆಕ, ಬಯೊಎನ್‌ಟೆಕ್, ಜಾನ್ಸನ್ ಆ್ಯಂಡ್ ಜಾನ್ಸನ್, ಮೊಡೆರ್ನಾ, ನೊವಾವ್ಯಾಕ್ಸ್ ಮತ್ತು ಪೈಝರ್‌ಗಳು ಶ್ರೀಮಂತ ರಾಷ್ಟ್ರಗಳ ಪರವಾಗಿ ಕೆಲಸ ಮಾಡುತ್ತಿವೆ ಎಂದು ಮಂಗಳವಾರ ಬಿಡುಗಡೆಯಾದ ‘ ಎ ಡಬಲ್ ಡೋಸ್ ಆಫ್ ಇನ್‌ಇಕ್ವಾಲಿಟಿ(ಅಸಮಾತನೆಯ 2 ಡೋಸ್)’ ಎಂಬ ವರದಿಯಲ್ಲಿ ಖಂಡಿಸಲಾಗಿದೆ.

6 ಬೃಹತ್ ಲಸಿಕೆ ಉತ್ಪಾದನಾ ಸಂಸ್ಥೆಗಳು ತಮ್ಮ ಮಾನವಹಕ್ಕು ಜವಾಬ್ದಾರಿಯನ್ನು ಈಡೇರಿಸಲು ವಿಫಲವಾಗಿರುವುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಬಿಕ್ಕಟ್ಟಿನಿಂದ ಪಾರಾಗಲು ನಮಗಿರುವ ಏಕೈಕ ದಾರಿಯೆಂದರೆ ವಿಶ್ವದೆಲ್ಲೆಡೆ ಲಸಿಕೀಕರಣ ಮಾಡುವುದು ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿ ಆ್ಯಗ್ನೆಸ್ ಕ್ಯಾಲಮರ್ಡ್ ಹೇಳಿದ್ದಾರೆ. ಹೀರೋಗಳಂತೆ ಅತ್ಯಂತ ಶೀಘ್ರ ಲಸಿಕೆ ಉತ್ಪಾದಿಸುವ ಈ ಸಂಸ್ಥೆಗಳನ್ನು ಶ್ಲಾಘಿಸಬೇಕು. ಆದರೆ, ಅವರು ಅಂತಾರಾಷ್ಟ್ರೀಯವಾಗಿ ತಂತ್ರಜ್ಞಾನ ಹಂಚಿಕೆಯನ್ನು ತಡೆಹಿಡಿದು, ಕೇವಲ ಶ್ರೀಮಂತ ದೇಶಗಳ ಪರವಾಗಿ ಮಾತ್ರ ಕಾರ್ಯನಿರ್ವಹಿಸಿ ಇತರ ಹಲವು ದೇಶಗಳಲ್ಲಿ ಲಸಿಕೆ ಕೊರತೆಯಿಂದ ವಿನಾಶಕಾರಿ ಪರಿಣಾಮ ಉಂಟಾಗಲು ಕಾರಣವಾಗುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!