ಶುಭ ಗುರುವಾರದ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ನೋಡಿ

ಮೇಷ: ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು. ಮನೆಯ ವಿಚಾರಗಳಲ್ಲಿ ಕಾಳಜಿಯನ್ನು ವಹಿಸಲು ಮುಂದಾಗುವಿರಿ. ಇದು ನಿಮ್ಮ ಸಂಗಾತಿಯ ಹರ್ಷಕ್ಕೆ ಕಾರಣವಾಗುವುದು. ಅನೇಕ ದಿನಗಳಿಂದ ನಿಶ್ಚಯಿಸಿದ್ದ ಕಾರ‍್ಯಗಳಿಗೆ ಚಾಲನೆ ದೊರೆಯುವುದು.

ವೃಷಭ: ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳು ಕ್ರಿಯಾತ್ಮಕವಾಗಿರಬಹುದು. ಕೌಟುಂಬಿಕ ಪರಿಸರದಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಕೆಲಸವನ್ನು ಗುರುವಾರ ಪೂರ್ಣಗೊಳಿಸಬಹುದು.

ಮಿಥುನ: ಇನ್ನೂ ಕಠಿಣ ಸನ್ನಿವೇಶಗಳನ್ನು ಎದುರಿಸಬೇಕಾಗು ತ್ತದೆ. ಕುಟುಂಬದಲ್ಲಿ ಬೆಂಬಲ ಪಡೆಯುತ್ತೀರಿ. ಇಂದು ಸಂತಸದ ದಿನ. ಮಕ್ಕಳ ನಡತೆ ಕಡೆ ಹೆಚ್ಚು ಗಮನವಿರಲಿ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಗಳಿಸುವಿರಿ.

ಕಟಕ: ಸಾಂಸಾರಿಕ ಸುಖ ವೃದ್ಧಿ. ದಂಪತಿಗಳಲ್ಲಿ ಅನುರಾಗ ಹೆಚ್ಚಾದೀತು. ದೀರ್ಘ‌ ಪ್ರಯಾಣ ಸಂಭವ. ಉತ್ತಮ ಜನರ ಒಡನಾಟದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಪ್ರಾಪ್ತಿ.

ಸಿಂಹ: ಪೋಷಕರ ಜೊತೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಲಿದ್ದೀರಿ. ಕ್ರೀಡಾಪಟುಗಳು ಹಂತಹಂತವಾಗಿ ಮೇಲೇರಲಿದ್ದಾರೆ. ಪೋಷಕರು ನಡೆಸಿಕೊಂಡು ಬರುತ್ತಿದ್ದ ವ್ಯವಹಾರದ ಯಜಮಾನಿಕೆಯು ನಿಮ್ಮ ಕೈ ಸೇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.

ಕನ್ಯಾ: ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಕೃಷಿಕರಿಗೆ ಇಂದು ಉತ್ತಮ ಲಾಭವಿದೆ. ನಿಮ್ಮ ಮೇಲೆ ಬಂದಿದ್ದ ದೊಡ್ಡ ಅಪವಾದದಿಂದ ಇಂದು ದೋಷಮುಕ್ತರಾಗಲಿದ್ದೀರಿ. ಕೋರ್ಟ್​ ಕಚೇರಿ ನಿಮಗೆ ಜಯವಿದೆ.

ತುಲಾ: ಕೆಲಸ ಮಾಡುವ ಸ್ಥಳದಲ್ಲಿ ಮೆಚ್ಚುಗೆಗೆ ಪಾತ್ರರಾಗುವಿರಿ. ಮೇಲಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ಪ್ರಯಾಣದ ವೇಳೆ ಜಾಗೃತೆ ವಹಿಸುವುದು ಉತ್ತಮ. ಸ್ನೇಹಿತರಿಂದ ಸಹಕಾರ ಸಿಗಲಿದೆ.

ವೃಶ್ಚಿಕ: ಇಂದು ಪ್ರೇಮಿಗಳು ಭೇಟಿ ನೀಡುವ ಸಾಧ್ಯತೆ ಕಾಣಬಹುದು ಹಾಗೂ ವಿಹಾರ, ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಗಣ್ಯವ್ಯಕ್ತಿಗಳೊಂದಿಗೆ ಲೇವಾದೇವಿ ವ್ಯವಹಾರ ಮಾಡುವಾಗ ಆದಷ್ಟು ಎಚ್ಚರವಿರಲಿ.

ಧನುಸ್ಸು: ಕಠಿಣ ಪರಿಶ್ರಮದ ಫಲ ಪಡೆಯುತ್ತೀರಿ. ವ್ಯಾಪಕ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ತಪ್ಪಿಸಿ. ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಲಿದೆ.

ಮಕರ: ನಿಮಗೆ ಹಣಕಾಸು ಲಭಿಸುವ ಯೋಗವಿದೆ, ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಕುಟುಂಬ ವರ್ಗದಲ್ಲಿ ತಳಮಳ. ಮನಸ್ಸಿಗೆ ಸಮಾಧಾನ, ಸಹೋದರರು ಸ್ತ್ರೀಯರಿಂದ ಸಹಕಾರ, ಸಂಗಾತಿಯಿಂದ ಸಹಕಾರ.

ಕುಂಭ: ಉದ್ಯೋಗದ ಬದಲಾವಣೆ ಸದ್ಯಕ್ಕೆ ಬೇಡ. ಗೃಹದಲ್ಲಿ ವಾಸ್ತು ದೋಷದಿಂದ ಮನೆಯಲ್ಲಿ ಅಶಾಂತಿ, ಅನಾರೋಗ್ಯ, ಕಲಹ, ಚಿಂತೆ, ತೊಂದರೆ, ಧನವ್ಯಯ ಉಂಟಾಗುತ್ತಿವೆ. ದಾಂಪತ್ಯದಲ್ಲಿ ವಿರಸ.

ಮೀನ: ಜ್ಞಾನದಿಂದ ಉದ್ಯೋಗ ಪಡೆಯುವಿರಿ. ವ್ಯಾಪಾರಸ್ಥರಿಗೆ ಮತ್ತು ಉದ್ಯಮದಾರರಿಗೆ ಅಭಿವೃದ್ಧಿ ಹೆಚ್ಚುವುದು. ಮಕ್ಕಳಿಂದ ಆಸ್ತಿ ಬೇಡಿಕೆ. ಆಸ್ತಿಗಾಗಿ ಕಲಹಗಳು ಹೆಚ್ಚುವುದು. ಪ್ರೇಮದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ ಮುಂದಾಗುವ ತೊಂದರೆ ತಪ್ಪಿಸಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!