ತುಮಕೂರು ಎಪಿಎಂಸಿಯಲ್ಲಿ ನೂತನ ಅಧ್ಯಕ್ಷರ ಹಾಗೂ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿದರು.
ರೈತರು ಬೆಳೆದ ಬೆಳೆಗೆ ದರ ನಿಗದಿ ಮಾಡುವಂತ ಕಾಲ ಕೂಡಿಬಂದಿದೆ. ಮಹಾರಾಷ್ಟ್ರದ ಎನ್ ಸಿ ಪಿ ಹಾಗೂ ಪಂಜಾಬಿನ ಅಕಾಲಿದಳ ಪಕ್ಷಗಳು ದೇಶದ ಎಪಿಎಂಸಿಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಆಟವಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಸಂಪೂರ್ಣವಾಗಿ ದಲ್ಲಾಳಿಗಳ ಹಾವಳಿ ನಿಂತು ಹೋಗುತ್ತಾ ಮುಕ್ತ ಮಾರುಕಟ್ಟೆಯೆಡೆಗೆ ಬಂದಿದೆ. ಇಂದು ಅಡಿಕೆಯ ಬೆಲೆ 50000 ಕ್ಕೂ ಹೆಚ್ಚಾಗಿ ದೊರೆಯುತ್ತಿದೆ ಎಂದರೆ ಇದು ನರೇಂದ್ರ ಮೋದಿ ಅವರು ಮಾಡಿರುವ ಕಾನೂನಿನಿಂದಾಗಿ ನಮ್ಮ ರೈತರಿಗೆ ಈ ಅವಕಾಶ ದೊರೆತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕ ಬಿ.ಸುರೇಶಗೌಡ ತಿಳಿಸಿದರು.
ಕೊಬ್ಬರಿಗೆ ಜಗತ್ತಿನಲ್ಲಿ ಬೇಡಿಕೆ ಇದೆ ಇದುವರೆಗೆ ಕೊಬ್ಬರಿಯನ್ನು ರಪ್ತು ಮಾಡಲು ಅವಕಾಶ ಇರಲಿಲ್ಲ ಈಗ ರಫ್ತು ಮಾಡಲು ಭಾರತ ಸರ್ಕಾರ ಅವಕಾಶ ನೀಡಿದ್ದರಿಂದ ಕೊಬ್ಬರಿಗೆ ಉತ್ತಮ ಬೆಲೆ ಸಿಗುತ್ತಿದೆ ಎಂದು ಸುರೇಶ್ ಗೌಡ ತಿಳಿಸಿದರು. ಈ ಕಾನೂನಿನಿಂದಾಗಿ ರೈತ ವಾರ್ಷಿಕವಾಗಿ ಲೆಕ್ಕ ಹಾಕಿದರೆ ನೆಮ್ಮದಿಯಾಗಿ ಒಬ್ಬ ಸರ್ಕಾರಿ ಅಧಿಕಾರಿ ಪಡೆಯುವ ವೇತನವನ್ನು ಪಡೆಯುತ್ತಿದ್ದಾನೆ ಇದು ನನ್ನ ವೈಯಕ್ತಿಕ ಅನುಭವವೂ ಕೂಡ ಹೌದು ಎಂದು ಸುರೇಶ್ ಗೌಡ ತಿಳಿಸಿದರು.
ರೈತ ತಾನು ಬೆಳೆದಿರುವಂತಹ ಬೆಳೆಯನ್ನು ದೇಶಿಯ ಮಾರುಕಟ್ಟೆಯಲ್ಲಿ ಎಲ್ಲಿಬೇಕಾದರೂ ಮಾರಾಟ ಮಾಡಲು ಭಾರತ ಸರ್ಕಾರ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ರೈತರ ಸ್ವಸಹಾಯ ಸಂಘಗಳ ರಚನೆ ಮಾಡುವುದರ ಮುಖೇನ ರೈತರ ಸಶಕ್ತಿಕರಣಕ್ಕಾಗಿ ಅತಿ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ಎಪಿಎಂಸಿ ಸಮಿತಿಯ ಅಧ್ಯಕ್ಷರಾದ ಉಮೇಶ್ ಗೌಡ ಉಪಾಧ್ಯಕ್ಷರಾದ ಶಿವರಾಜು ಸದಸ್ಯರಾದ ನೇರಳಾಪುರ ಕುಮಾರ ನೀಲಕಂಠಪ್ಪ ಸಿಡಿ ಪ್ರಕಾಶ್ ಪಾರ್ವತಮ್ಮ ಪ್ರಕಾಶ್ ಕಣಕುಪ್ಪೆ ಶಿವಕುಮಾರ್,ಈಶ್ವರ ಚಂದ್ರ, ಲೋಕೇಶ್ ಪುಟ್ಟ ಲಕ್ಷ್ಮಮ್ಮ ಚಿಕ್ಕರಂಗಯ್ಯ, ಸುಭಾಷ್ ಚಂದ್ರ, ಗೂಳೂರು ಸಿದ್ದರಾಜು, ಅರಳಕಟ್ಟೆ ಶಿವರಾಜ್, ರತ್ನಮ್ಮ ನಾಗರಾಜ್, ಬಿಜೆಪಿ ಘಟಕದ ಅಧ್ಯಕ್ಷ ಶಂಕರಣ್ಣ ಬಿಜೆಪಿ ಗೂಳೂರು ಶಿವಕುಮಾರ್, ಕಾರ್ಯದರ್ಶಿ ಸಿದ್ದೇಗೌಡ, ನರಸಿಂಹಮೂರ್ತಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.