ಮೇಷ – ಸಣ್ಣ ತಪ್ಪುಗಳನ್ನು ನಿಷ್ಕಾಳಜಿ ಮಾಡದಿರಿ ಮುಂದೆ ಅವು ತಮಗೆ ತಲೆನೋವು ಬಿಂಬಿತವಾಗುವದು. ಹಿತಶತ್ರುಗಳು ಯಾರೆಂದು ನಿಮಗೆ ತಿಳಿದು ಅವರನ್ನು ಶಿಕ್ಷಿಸುವ ಕಾಲ ಸನ್ನಿಹಿತವಾಗಿದೆ. ಆಕಸ್ಮಿಕವಾಗಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ.
ವೃಷಭ – ಇಂದು ನೀವು ಹೊಸ ಜನರನ್ನು ಭೇಟಿಯಾಗಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ. ಆದರೆ ಮನೆಮದ್ದಿನ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಸಂಜೆ ಸಮಯವನ್ನು ಕುಟುಂಬಸ್ಥರ ಜೊತೆ ಕಳೆಯಲಿದ್ದೀರಿ.
ಮಿಥುನ – ಹೊಸ ಉದ್ಯಮ ಪ್ರಾರಂಭ ಮಾಡಲು ಅಡಚಣೆ ಉಂಟಾಗಬಹುದು, ವಾಹನ ಅಪಘಾತ ತಪ್ಪಿ ಹೋಗುವುದು, ಜನಪ್ರತಿನಿಧಿಗಳು ತಮ್ಮ ಮತಕ್ಷೇತ್ರದಲ್ಲಿ ಸ್ವಲ್ಪ ಸಮಯದ ಅಭಾವದಿಂದ ತೊಂದರೆ ಅನುಭವಿಸುವಿರಿ, ನಂತರ ಯಶಸ್ಸು ಸಾಧಿಸುವಿರಿ.
ಕಟಕ – ಉದ್ಯೋಗದಲ್ಲಿ ಮೇಲಧಿಕಾರಿಯಿಂದ ಮೆಚ್ಚುಗೆ ಪಡೆಯುವಿರಿ, ಉದ್ಯೋಗದಲ್ಲಿ ಪ್ರಮೋಷನ್ ಸಾಧ್ಯತೆ, ಬಯಸಿದ ಸ್ಥಳಕ್ಕೆ ವರ್ಗಾವಣೆ ವಿಳಂಬ, ವ್ಯಾಪಾರಸ್ಥರ ಆರ್ಥಿಕಸ್ಥಿತಿ ಉತ್ತಮ, ಸಂಗಾತಿಗಳ ಮನಸ್ಥಿತಿ ಚಂಚಲ. ಕೋಪ ನಿಯಂತ್ರಣ ಸಾಧಿಸಲು ಪ್ರಯತ್ನ ಮಾಡಿ.
ಸಿಂಹ – ಇಂದು ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ ಮತ್ತು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕೆಲಸದ ಬಗ್ಗೆ ಹೇಳುವುದಾದರೆ ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ.
ಕನ್ಯಾ – ಕೆಲಸದ ವಿಷಯದಲ್ಲಿ ಇಂದು ನಿಮಗೆ ತುಂಬಾ ಒಳ್ಳೆಯ ದಿನವಾಗಿದೆ. ನೀವು ವ್ಯಾಪಾರಸ್ಥರಾಗಿದ್ದು ನಿಮ್ಮ ಕೆಲಸದಲ್ಲಿ ಅಡಚಣೆಯಾಗಿದ್ದರೆ, ಇಂದು ಅದು ದೂರಾಗುವ ಸಾಧ್ಯತೆಯಿದೆ. ಇಂದು ನೀವು ಉತ್ತಮ ಆರ್ಥಿಕ ಲಾಭಗಳನ್ನು ಸಹ ಪಡೆಯಬಹುದು.
ತುಲಾ – ಸರ್ಕಾರಿ ನೌಕರಿ ಸಂದರ್ಶನ ಮಾಡುವವರಿಗೆ ಸಿಹಿಸುದ್ದಿ ಕೇಳಲಿದ್ದೀರಿ. ಹೆಣ್ಣುಮಕ್ಕಳಿಗೆ ಪರಪುರುಷ ನಿಂದ ಮನಸ್ತಾಪ. ಮದುವೆ ವಿಳಂಬ ಕಾಣಲಿದೆ. ಹಣಕಾಸಿನಲ್ಲಿ ಅಡಚಣೆ ಯಾಗಲಿದೆ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ.
ವೃಶ್ಚಿಕ – ವ್ಯವಹಾರ ಕ್ಷೇತ್ರದಲ್ಲಿ ಅದೃಷ್ಟ ಇಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಕಚೇರಿ ಕೆಲಸದಲ್ಲಿ ನಿಮ್ಮ ಯಶಸ್ಸನ್ನು ಕಾಣಲಾಗದ ವಿರೋಧಿಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಆದಷ್ಟು ಎಚ್ಚರವಾಗಿರಿ. ತಾಯಿಯ ಆರೋಗ್ಯ ಹದಗೆಡಲಿದೆ.
ಧನಸ್ಸು- ಸಂಬಂಧಿಗಳ ಜೊತೆ ಹಲವು ವರ್ಷಗಳ ಹಿಂದೆ ಮುರಿದುಬಿದ್ದಿದ್ದ ಸಂಬಂಧವು ಇಂದು ಮತ್ತೆ ಹಸನಾಗಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ಕಾರ್ಯದಲ್ಲಿ ಅಡಚಣೆ ಇರುವುದಿಲ್ಲ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಮಕರ – ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ.
ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಕೆಟ್ಟ ಸ್ಥಳದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಯುಷ್ಯದ ಭಯ.
ಕುಂಭ – ಹೊಸ ಕಂಪನಿ ಪ್ರಾರಂಭದ ಚಿಂತನೆ ಮಾಡುವಿರಿ. ಮದುವೆ ಕಾರ್ಯ ಅಡತಡೆ ನಿವಾರಣೆ. ಪ್ರೇಮಿಗಳಿಬ್ಬರ ಮದುವೆ ಹಿರಿಯರ ಮಾರ್ಗದರ್ಶನದಲ್ಲಿ ವಿವಾಹ ನೋಂದಣಿ ಕಚೇರಿಯಲ್ಲಿ ನೆರವೇರುವುದು. ನವದಂಪತಿಗಳಿಗೆ ಸಂತಾನ ಅಪೇಕ್ಷೆ.
ಮೀನ – ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ಜಮೀನು ಖರೀದಿ ಸಾಧ್ಯತೆ. ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರ ಪ್ರಾರಂಭ ಮಾಡುವಿರಿ. ಹೋಟೆಲ್ ಉದ್ಯಮದಾರರು ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಂಡರೆ ಉತ್ತಮ.